
ಊಟಿ (ತ.ನಾಡು): ‘ನಾನು ಶಾಲೆಯಲ್ಲಿದ್ದಾಗ ತುಂಬಾ ತುಂಟನಾಗಿದ್ದೆ. ಅತೀ ಹುಡುಗಾಟಿಕೆ ಮಾಡುತ್ತಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಇಲ್ಲಿನ ಸಂತ ಥಾಮಸ್ ಇಂಗ್ಲಿಷ್ ಪ್ರೌಢಶಾಲೆಯ ಸ್ವರ್ಣಮಹೋತ್ಸವದಲ್ಲಿ ಭಾಗವಹಿಸಿದ್ದ ರಾಹುಲ್, ಮಳೆಯ ನಡುವೆಯೂ ಮಕ್ಕಳನ್ನುದ್ದೇಶಿಸಿ ಮಾತನಾಡಿದರು.
ಶಾಲಾದಿನಗಳ ಮರೆಯಲಾರದ ನೆನಪಿನ ಬಗ್ಗೆ ವಿದ್ಯಾರ್ಥಿಯೊಬ್ಬಳು ಕೇಳಿದಾಗ ಉತ್ತರಿಸಿದ ಅವರು, ‘ನಾನು ಹಾಸ್ಟೆಲ್‌ನಲ್ಲಿದ್ದೆ. ಅಲ್ಲಿ ಖುಷಿಯಾಗಿದ್ದೆನಾದರೂ, ಪೋಷಕರು ಆಗಾಗ ಭೇಟಿ ಕೊಡಲಿ ಎಂಬ ಕಾರಣಕ್ಕೆ ಬೇಸರಿಸಿಕೊಂಡಂತೆ ನಟಿಸುತ್ತಿದ್ದೆ. ನಾನೆಂದೂ ಶಿಕ್ಷಕರಿಗೆ ಆಜ್ಞಾಕಾರಿಯಾಗಿ ಇರುತ್ತಲೇ ಇರಲಿಲ್ಲ.
ನಾನು ಸದಾ ಪ್ರಶ್ನೆಗಳನ್ನು ಕೇಳುತ್ತಿದ್ದುದರಿಂದ ನನ್ನನ್ನು ಸಂಭಾಳಿಸಲು ಅವರು ಹೆಣಗಾಡುತ್ತಿದ್ದರು. ಪ್ರಶ್ನೆ ಕೇಳದೆ ಏನನ್ನೂ ಕಲಿಯಲಾಗದು ಎಂಬುದು ನನ್ನ ಅಭಿಪ್ರಾಯ’ ಎಂದು ಹೇಳಿದರು. ಬಳಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪೊಂಗಲ್ (ಸಂಕ್ರಾಂತಿ) ಹಬ್ಬದಲ್ಲಿ ಭಾಗವಹಿಸಿ, ಸಕ್ಕರೆಪೊಂಗಲ್ ತಯಾರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ