ಹಿಂದೂಗಳನ್ನು ಹಿಂಸಾಚಾರಿಗಳು ಎಂದು ಹೇಳಲು ನಿಮಗೆ ಎಷ್ಟು ಧೈರ್ಯ ಎಂಬ ಸಾಲುಗಳಿಂದ ಫೋಟೋಗಳನ್ನು ಶೇರ್ ಮಾಡಿಕೊಳ್ಳಲಾಗುತ್ತಿದೆ.
ಮುಂಬೈ: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ (Opposition Leader Rahul Gandhi) ಹಿಂದೂಗಳ ಕುರಿತ ನೀಡಿದ ಹೇಳಿಕೆಯನ್ನು ಖಂಡಿಸಿ, ಮಹಾರಾಷ್ಟ್ರದ ದೇವಾಲಯದಲ್ಲಿ (Maharashatra's Temple) ಡೋರ್ ಮ್ಯಾಟ್ ಮೇಲೆ ರಾಹುಲ್ ಫೋಟೋ ಮುದ್ರಿಸಲಾಗಿದೆ. ದೇವಸ್ಥಾನದ ಡೋರ್ ಮ್ಯಾಟ್ ಮೇಲೆ ರಾಹುಲ್ ಗಾಂಧಿ ಫೋಟೋ ಮುದ್ರಣ ಮಾಡಲಾಗಿದ್ದು, ದೇಗುಲಕ್ಕೆ ಆಗಮಿಸುವ ಭಕ್ತಾದಿಗಳು ಇದರ ಮೇಲೆ ಕಾಲಿರಿಸಿ ಆಗಮಿಸುತ್ತಿದ್ದಾರೆ. ಸದ್ಯ ಡೋರ್ ಮ್ಯಾಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಹಿಂದೂಗಳನ್ನು ಹಿಂಸಾಚಾರಿಗಳು ಎಂದು ಹೇಳಲು ನಿಮಗೆ ಎಷ್ಟು ಧೈರ್ಯ ಎಂಬ ಸಾಲುಗಳಿಂದ ಫೋಟೋಗಳನ್ನು ಶೇರ್ ಮಾಡಿಕೊಳ್ಳಲಾಗುತ್ತಿದೆ. ಆದ್ರೆ ಇದು ಯಾವ ದೇವಸ್ಥಾನದ ಫೋಟೋಗಳು ಎಂಬುದರ ಬಗ್ಗೆ ತಿಳಿದು ಬಂದಿಲ್ಲ.
ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಬಳಿಕ ಸಂಸದ ರಾಹುಲ್ ಗಾಂಧಿ, ಜುಲೈ 1ರಂದು ಆಕ್ರಮಣಕಾರಿಯಾಗಿ ಭಾಷಣ ಮಾಡಿದ್ದರು. ರಾಹುಲ್ ಗಾಂಧಿಯವರ ಈ ಭಾಷಣ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಸ್ವತಃ ಪ್ರಧಾನಿ ಮೋದಿಯವರೇ ಮಧ್ಯ ಪ್ರವೇಶಿಸಿ ದೇಶದ ಹಿಂದೂಗಳನ್ನು ಅವಮಾನಿಸಲಾಗುತ್ತಿದೆ ಎಂದು ಕಿಡಿಕಾರಿದ್ದರು. ಗೃಹ ಸಚಿವ ಅಮಿತ್ ಶಾ ಸಹ, ವಿಪಕ್ಷ ನಾಯಕ ಕ್ಷಮೆ ಕೇಳಬೇಕು ಅಂತ ಆಗ್ರಹಿಸಿದ್ದರು.
ಇಲ್ಲಿದೆ ನೋಡಿ ಸ್ಪೀಕರ್ ಕೊಕ್ ಕೊಟ್ಟ ರಾಹುಲ್ ಭಾಷಣದ 6 ಪ್ರಮುಖ ವಿಷಯಗಳು
ಸದನದಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು?
ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಳ್ಳುವವರು 24 ಗಂಟೆಯೂ ದ್ವೇಷ ಪಸರಿರುವ ಸುಳ್ಳು ಮಾತುಗಳನ್ನಾಡುತ್ತಾರೆ. ಇವರು ಹಿಂದೂಗಳು ಅಲ್ಲ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಮಾತ್ರ ಹಿಂದೂ ಸಮಾಜವಲ್ಲ. ನೀವುಗಳು ಹಿಂದೂ ಅಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಇದೇ ವೇಳೆ ಯಾಕೆ ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ಗಂಭೀರವಾಗಿ ಇರ್ತಾರೆ ಎಂದು ಸದನದಲ್ಲಿ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿದ ಪ್ರಧಾನಿ ಮೋದಿ, ನನ್ನ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧ ಪಕ್ಷದ ನಾಯಕನ ಮಾತುಗಳನ್ನು ಗಂಭೀರವಾಗಿ ಆಲಿಸಬೇಕು ಅನ್ನೋದನ್ನು ಹೇಳಿಕೊಟ್ಟಿದೆ ಎಂದು ಹೇಳಿದ್ದರು.
ನೆಟ್ಟಿಗರಿಂದ ಕಮೆಂಟ್
ಡೋರ್ ಮ್ಯಾಟ್ ಮೇಲೆ ರಾಹುಲ್ ಗಾಂಧಿ ಚಿತ್ರವನ್ನು ಮುದ್ರಿಸಲಾಗಿರುವ ಫೋಟೋಗಳನ್ನು ವ್ಯಾಪಕವಾಗಿ ಶೇರ್ ಮಾಡಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕುವ ಹಕ್ಕು ಹಿಂದೂಗಳಿದೆ. ಇದು ಕಾಂಗ್ರೆಸ್‌ಗೆ ನಾಚಿಕೆಗೇಡಿನ ಕೆಲಸ. ಇಂತಹ ಹೇಳಿಕೆಗಳು ಪ್ರಜಾಪ್ರಭುತ್ವವಕ್ಕೆ ಹಾನಿಕಾರಕ ಎಂದು ಎಕ್ಸ್ ಬಳಕೆದಾರರು ಕಮೆಂಟ್ ಮಾಡುತ್ತಿದ್ದಾರೆ. ಈ ರೀತಿಯ ಖಂಡನೆಯನ್ನು ನಾನು ಒಪ್ಪಲ್ಲ. ಆದ್ರೆ ಈ ನಡೆ ನನಗೆ ಇಷ್ಟವಾಯ್ತು. ಮತ್ತೊಬ್ಬರು, ಈ ರೀತಿ ಓರ್ವ ಜನಪ್ರತಿನಿಧಿಗೆ ಅವಮಾನ ಮಾಡೋದು ಖಂಡನೀಯ ಎಂದು ಕೆಲವರು ಆಕ್ರೋಶ ಹೊರ ಹಾಕಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆಗೆ ಹಿಂದೂ, ಸಿಖ್, ಮುಸ್ಲಿಂ ಧರ್ಮಗುರುಗಳು ಹೇಳಿದ್ದೇನು?
