ನನಗೆ ನಿದ್ದೆ, ಆಹಾರದ ಶಿಸ್ತು ಪಾಲಿಸುವುದಕ್ಕೆ ಆಗ್ತಿಲ್ಲ: ಪ್ರಧಾನಿ ಮೋದಿ

Published : Oct 02, 2023, 07:56 AM IST
ನನಗೆ ನಿದ್ದೆ, ಆಹಾರದ ಶಿಸ್ತು ಪಾಲಿಸುವುದಕ್ಕೆ ಆಗ್ತಿಲ್ಲ: ಪ್ರಧಾನಿ ಮೋದಿ

ಸಾರಾಂಶ

ಎರಡು ವಿಷಯಗಳಲ್ಲಿ ಶಿಸ್ತು ತಂದುಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಒಂದು ಆಹಾರ, ಮತ್ತೊಂದು ನಿದ್ದೆ. ಸಮಯಕ್ಕೆ ಸರಿಯಾಗಿ ನಾನು ಆಹಾರ ಸೇವಿಸಬೇಕಿದೆ ಮತ್ತು ಇನ್ನೂ ಸ್ವಲ್ಪ ಹೆಚ್ಚು ನಿದ್ದೆ ಮಾಡಬೇಕಿದೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನವದೆಹಲಿ: ಎರಡು ವಿಷಯಗಳಲ್ಲಿ ಶಿಸ್ತು ತಂದುಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಒಂದು ಆಹಾರ, ಮತ್ತೊಂದು ನಿದ್ದೆ. ಸಮಯಕ್ಕೆ ಸರಿಯಾಗಿ ನಾನು ಆಹಾರ ಸೇವಿಸಬೇಕಿದೆ ಮತ್ತು ಇನ್ನೂ ಸ್ವಲ್ಪ ಹೆಚ್ಚು ನಿದ್ದೆ ಮಾಡಬೇಕಿದೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಫಿಟ್ಟೆಸ್ ತಜ್ಞ (fitness expert) ಅಂಕಿತ್ ಬೈಯನ್‌ಪುರಿಯಾ ( Ankit Baiyanpuria)ಜತೆ ಸ್ವಚ್ಛತಾ ಅಭಿಯಾನದಲ್ಲಿ (swachatta Abhiyan) ಪಾಲ್ಗೊಂಡ ಅವರು, 'ನೀವು ದೈಹಿಕ ಚಟುವಟಿಕೆಗೆ ಎಷ್ಟು ಸಮಯ ವಿನಿಯೋಗಿಸುತ್ತೀರಿ?' ಎಂದು ಅಂಕಿತ್‌ರನ್ನು ಕೇಳಿದರು. ಅದಕ್ಕೆ ಅಂಕಿತ್‌, 'ದಿನಕ್ಕೆ 4ರಿಂದ 5 ಗಂಟೆ' ಎಂದರು. ಆಗ ಪ್ರತಿ ಕ್ರಿಯಿಸಿದ ಮೋದಿ, 'ನಾನು ಹೆಚ್ಚು ವ್ಯಾಯಾ ಮಮಾಡುವುದಿಲ್ಲ, ಆದರೆ ದೈನಂದಿನ ಜೀವನ ದಲ್ಲಿ ಶಿಸ್ತನ್ನು ಅನುಸರಿಸುತ್ತೇನೆ. ಆದರೂ ನಿದ್ರೆ (Sleep) ಮತ್ತು ಆಹಾರ (Food) ಎಂಬ 2 ವಿಷಯಗಳಿಗೆ ಸಂಬಂ ಧಿಸಿದಂತೆ ಇನ್ನೂ ಶಿಸ್ತುಬದ್ಧವಾಗಿಲ್ಲ. ಆಹಾರದ ಸಮಯ ಮತ್ತು ನಿದ್ರೆ ಮಾಡಲು ಹೆಚ್ಚು ಸಮ ಯವನ್ನು ನಿಗದಿಪಡಿಸಬೇಕಾಗಿದೆ. ಅದನ್ನು ಮಾಡಲು ಸಾಧ್ಯವಾಗುತ್ತಿಲ್ಲ' ಎಂದರು.

ಒಂದೇ ವರ್ಷದಲ್ಲಿ ಭಾರತಕ್ಕೆ ಬೇಕಾಗಿದ್ದ 17 ಮೋಸ್ಟ್ ವಾಂಟೆಡ್ ಉಗ್ರರ ನಿಗೂಢ ಸಾವು

ಈ ಹಿಂದೆ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್ (chandrakanth Patil) ಅವರು, 'ಮೋದಿ ಪ್ರತಿದಿನ ಕೇವಲ 2 ಗಂಟೆ ನಿದ್ದೆ ಮಾಡುತ್ತಾರೆ. ಅಲ್ಲದೆ, ನಿದ್ರೆಯನ್ನೇ ಮಾಡಬಾರದು, ದೇಶ ಕ್ಕಾಗಿ 24 ಗಂಟೆ ಕೆಲಸ ಮಾಡಬೇಕು ಎಂದು ಪ್ರಯೋಗ ಮಾಡುತ್ತಿದ್ದಾರೆ' ಎಂದಿದ್ದರು.

 2014ರಲ್ಲಿ ಮೊದಲ ಬಾರಿ ಪ್ರಧಾನಿಯಾದ ಬಳಿಕ ಸ್ವತಃ ಪೊರಕೆ ಹಿಡಿದು 'ಸ್ವಚ್ಛ ಭಾರತ ಅಭಿಯಾನ' ಆರಂಭಿಸಿ ಸಂಚಲನ ಮೂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಗಾಂಧಿ ಜಯಂತಿ ಮುನ್ನಾ ದಿನವಾದ ಭಾನುವಾರ ಮತ್ತೊಂದು ಸುತ್ತಿನ ಅಭಿಯಾನಕ್ಕೆ ನಾಂದಿ ಹಾಡಿದರು. ಈ ಸಲ ಅವರು ಫಿಟ್ಟೆಸ್ ತಜ್ಞ ಅಂಕಿತ್‌ ಬೈಯನ್‌ಪುರಿಯಾ ಅವರ ಜತೆ ತಮ್ಮ ನಿವಾಸದ ಸನಿಹದಲ್ಲೇ 'ಸ್ವಚ್ಛತೆಯೇ ಸೇವೆ' ಹೆಸರಿನಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದು, 'ಸ್ವಚ್ಛ ಹಾಗೂ ಸ್ವಸ್ಥ ಭಾರತ'ಕ್ಕೆ ಕರೆ ನೀಡಿದ್ದಾರೆ.

ಕಬಿನಿಯಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾದ ಕರಿಯ... ಕರಿಚಿರತೆಯ ಸುಂದರ ಫೋಟೋಗಳು

ಈ ನಡುವೆ, ಈ ಮೆಗಾ ಅಂದೋಲನ ವನ್ನು ದೇಶಾದ್ಯಂತ 9.20 ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಹೇಳಿದೆ. ಅನೇಕ ಕೇಂದ್ರ ಸಚಿವರು, ಅಧಿಕಾರಿಗಳು, ಗಣ್ಯರು, ಸಾವಿರಾರು ಜನಸಾಮಾನ್ಯರು ಈ ಅಭಿಯಾನದಲ್ಲಿ ಪಾಲ್ಗೊಂಡರು.

ಫಿಟ್ಟೆಸ್ ತಜ್ಞನ ಜತೆ ಮೋದಿ ಸ್ವಚ್ಛತೆ: 

ಪ್ರಧಾನಿ ನರೇಂದ್ರ ಮೋದಿ ಪೊರಕೆ ಹಿಡಿದು, ಫಿಟ್‌ನೆಸ್ ಪ್ರಭಾವಿ ಅಂಕಿತ್ ಬೈಯನ್‌ಪುರಿಯಾ ಅವರೊಂದಿಗೆ ತಮ್ಮ ಲೋಕಕಲ್ಯಾಣ ಮಾರ್ಗದ ನಿವಾಸದ ಸನಿಹದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಈ ವೇಳೆ ಅವರು ಅಲ್ಲಲ್ಲಿ ಬಿದ್ದ ಕಸವನ್ನು ಪೊರಕೆ ಹಿಡಿದು ಗುಡಿಸಿ ಸ್ವಚ್ಛಗೊಳಿಸಿದರು. ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ 4 ನಿಮಿಷಗಳ ವೀಡಿಯೊ ವನ್ನು ಹಂಚಿಕೊಂಡಿರುವ ಮೋದಿ, 'ಇಂದು ದೇಶವು ಸ್ವಚ್ಛತೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಅಂಕಿತ್ ಬೈಯನ್‌ಪುರಿಯ ಮತ್ತು ನಾನು ಅದೇ ರೀತಿ ಮಾಡಿದ್ದೇವೆ. 12
ದೆಹಲಿಯ ತಮ್ಮ ಅಧಿಕೃತ ನಿವಾಸದ ಸನಿಹದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕಸ ಗುಡಿಸಿ 'ಸ್ವಚ್ಛತೆಯೇ ಸೇವೆ' ಅಭಿಯಾನಕ್ಕೆ ದೇಶವ್ಯಾಪಿ ಚಾಲನೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !