
ಕೋಲ್ಕತಾ(ಮಾ.22): ತಮ್ಮ ಮಾಜಿ ಆಪ್ತ ಮತ್ತು ಹಾಲಿ ನಂದಿಗ್ರಾಮ ಕ್ಷೇತ್ರದ ಎದುರಾಳಿ ಸುವೇಂದು ಅಧಿಕಾರಿ, ಟಿಎಂಸಿಯಲ್ಲಿದ್ದ ವೇಳೆ 5000 ಕೋಟಿ ರು. ಲೂಟಿ ಮಾಡಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.
ಪೂರ್ವ ಮಿಡ್ನಾಪುರದ ದಕ್ಷಿಣ ಕಂಟೈನಲ್ಲಿ ಭಾನುವಾರ ಪಕ್ಷದ ರಾರಯಲಿ ಉದ್ದೇಶಿಸಿ ಮಾತನಾಡಿದ ಮಮತಾ, ‘ವಂಚಕ (ಸುವೇಂದು) ಸಹಕಾರಿ ಬ್ಯಾಂಕ್‌ಗಳ ಉನ್ನತ ಸ್ಥಾನದಲ್ಲಿದ್ದಾಗ ಮತ್ತು ಸರ್ಕಾರದ ವಿವಿಧ ಮಂಡಳಿಗಳಲ್ಲಿ ಇದ್ದಾಗ ಭಾರೀ ಹಣ ಲೂಟಿ ಮಾಡಿದ್ದಾನೆ. ಆತ ಕೋಟ್ಯಂತರ ಹಣ ಸಂಪಾದಿಸಿದರೂ ಆ ಕುರಿತು ನನಗೆ ಸಣ್ಣ ಸುಳಿವೂ ಸಿಗದೇ ಇದ್ದಿದ್ದಕ್ಕೆ ನನ್ನನ್ನು ನಾನು ಕತ್ತೆ ಎಂದು ಕರೆದುಕೊಳ್ಳುತ್ತೇನೆ.
ಯಾರೋ ಹೇಳುತ್ತಿದ್ದರು ಆತ 5000 ಕೋಟಿ ರು. ಸಂಪಾದಿಸಿದ್ದಾನೆ ಎಂದು. ನಾನು ಮಿಡ್ನಾಪುರದ ಜನರ ಅಭ್ಯುದಯಕ್ಕಾಗಿ ಕೆಲಸ ಮಾಡುತ್ತಿದ್ದರೆ, ದ್ರೋಹಿಗಳು ಅದರ ಹಿರಿಮೆ ಪಡೆದುಕೊಂಡರು. ಈ ಚುನಾವಣೆಯಲ್ಲಿ ಜನರು ದ್ರೋಹಿಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಅಬ್ಬರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ