
ಕೊಚ್ಚಿ(ಡಿ.07): ವಾಹನ ಸುರಕ್ಷತೆ, ಮೋಟಾರು ನಿಯಮಗಳ ಕುರಿತು ಹಲವು ಘಟನೆಗಳು ಭಾರಿ ಚರ್ಚೆ ಮಾಡುವಂತೆ ಮಾಡುತ್ತದೆ. ಇದೀಗ ಕೇರಳದ ಎರ್ನಾಕುಲಂನಲ್ಲಿ ನಡೆದ ಘಟನೆಯೊಂದು ಆತಂಕದ ಜೊತೆಗೆ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಲಾರಿನಲ್ಲಿ ತುಂಬಿದ್ದ ಸರಕುಗಳನ್ನು ಅನ್‌ಲೋಡ್ ಮಾಡುತ್ತಿರುವಾಗ ಲಾರಿಯ ಹೈಡ್ರಾಲಿಕ್ ಜ್ಯಾಕ್ ಸಿಡಿದು ಚಾಲಕ ಮೃತಪಟ್ಟ ಘಟನೆ ನಡೆದಿದೆ. ಕಲ್ಲು ತುಂಬಿದ್ದ ಲಾರಿ ಪಲ್ಟಿಯಾಗಿ ಈ ಘಟನೆ ನಡೆದಿದೆ ಎಂದೇ ವರದಿಯಾಗಿತ್ತು. ಆದರೆ ಲಾರಿಯ ಹೈಡ್ರಾಲಿಕ್ ಜ್ಯಾಕ್ ಸಿಡಿದ ಪರಿಣಾಮದ ಅಪಘಾತದಲ್ಲಿ ಚಾಲಕ ಮೃತಪಟ್ಟಿರುವುದು ಸಿಸಿಟಿವಿ ವಿಡಿಯೋದಲ್ಲಿ ಬಹಿರಂಗವಾಗಿದೆ.
ಎರ್ಣಾಕುಳಂ ಕಳಮಶ್ಶೇರಿಯಲ್ಲಿ ಕರಿಕಲ್ಲು ಲಾರಿ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿದ ಘಟನೆಯ ಸಿಸಿಟಿವಿ ದೃಶ್ಯಗಳು ಬಹಿರಂಗಗೊಂಡಿವೆ. ಚಾಲಕ ಅಜು ಮೋಹನ್ ಅವರ ಸಾವಿಗೆ ವಾಹನದ ಹೈಡ್ರಾಲಿಕ್ ಜಾಕ್ ಸಿಡಿದಿದ್ದೇ ಕಾರಣ ಎಂದು ದೃಶ್ಯಗಳಿಂದ ಸ್ಪಷ್ಟವಾಗಿದೆ. ಬೆಳಿಗ್ಗೆ 3:45 ರ ಸುಮಾರಿಗೆ ನಡೆದ ಅಪಘಾತದ ಸಿಸಿಟಿವಿ ದೃಶ್ಯಗಳು ಇದೀಗ ಬಹಿರಂಗಗೊಂಡಿವೆ. ಕ್ರಷರ್‌ನಲ್ಲಿ ಕಲ್ಲು ಇಳಿಸುತ್ತಿದ್ದಾಗ ಹಠಾತ್ತನೆ ಹೈಡ್ರಾಲಿಕ್ ಜಾಕ್ ಕೈಕೊಟ್ಟಿದೆ.
ವೆಡ್ಡಿಂಗ್ ಕಾರ್ಡ್ ಬಂತೆಂದು ಲಿಂಕ್ ಓಪನ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ! ಏನಿದು ಹೊಸ ವಂಚನೆ?
ಲಾರಿ ಕ್ಯಾಬಿನ್‌ನಲ್ಲಿ ಕುಳಿತು ಕಲ್ಲುಗಳನ್ನ ಅನ್‌ಲೋಡ್ ಮಾಡುತ್ತಿದ್ದ ವೇಳೆ ಜ್ಯಾಕ್ ಸಿಡಿದಿದೆ. ಪರಿಣಾಮ ಲಾರಿ ಪಲ್ಟಿಯಾಗಿದೆ. ಆದರೆ ಕ್ಯಾಬಿನ್‌ನಲ್ಲಿ ಚಾಲಕ ಅಜು ಮೋಹನ್ ತಕ್ಷಣವೇ ಪ್ರಾಣ ಉಳಿಸಿಕೊಳ್ಳಲು ಲಾರಿ ಕ್ಯಾಬಿನ್‌ನಿಂದ ಹೊರಗೆ ಹಾರಿದ್ದರೆ. ಆದರೆ ಹಾರಿದ ರಭಸಕ್ಕೆ ಅಜು ಮೋಹನ್ ತಲೆ ಹತ್ತಿರದ ಶೀಟ್‌ಗೆ ಬಡಿದಿದೆ. ಇತ್ತ ಆಸ್ಪತ್ರೆ ದಾಖಲಿಸಲು ವಿಳಂಭವಾಗಿದೆ ಅನ್ನೋ ಆರೋಪಗಳು ಕೇಳಿಬಂದಿದೆ. ಅಜು ಮೋಹನ್ ಸಾವಿಗೆ ಪ್ರಮುಖವಾಗಿ ವಾಹನ ಸುರಕ್ಷತೆ ಕಾರಣ ಎಂದು ವರದಿಯಾಗಿದೆ. ಹೈಡ್ರಾಲಿಕ್ ಜ್ಯಾಕ್ ಸಿಡಿದಿದೆ. ಇದು ವಾಹನದ ಸುರಕ್ಷತೆ ಪ್ರಶ್ನೆ ಮೂಡಿಸಿದೆ.ಪೊಲೀಸುರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ವಾಹನ ಅಧಿಕಾರಿಗಳಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ