ಸಾಫ್ಟ್‌ವೇರ್ ಕೆಲಸ ಸಿಕ್ಕಿದ ಖುಷಿಯಲ್ಲಿ ಪಾರ್ಟಿ ಕೊಟ್ಟ ಗೆಳತಿಯನ್ನೇ ಸಾಮೂಹಿಕ ಅತ್ಯಾಚಾರ ಮಾಡಿದ ಸ್ನೇಹಿತರು

By Sathish Kumar KH  |  First Published Jul 30, 2024, 5:58 PM IST

ಸಾಫ್ಟ್‌ವೇರ್ ಇಂಜಿನಿಯರ್ ಕೆಲಸ ಸಿಕ್ಕಿದೆ ಎಂದು ಖುಷಿಯಲ್ಲಿ ಪಾರ್ಟಿ ಕೊಡಿಸಿದ ಸ್ನೇಹಿತೆಯನ್ನೇ ಗೆಳೆಯರು ಸೇರಿಕೊಂಡು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ.


ಯುವತಿಯೊಬ್ಬಳು ತನಗೆ ಸಾಫ್ಟ್‌ವೇರ್ ಕೆಲಸ ಸಿಕ್ಕಿದೆ ಎಂದು ತನ್ನ ಬಾಲ್ಯದ ಗೆಳೆಯನಿಗೆ ತಿಳಿಸಿದ್ದಾಳೆ. ಆಗ ಪಾರ್ಟಿ ಕೇಳಿದ ಗೆಳಯನಿಗೆ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ನೀನು ಕೇಳಿದಷ್ಟು ಎಣ್ಣೆ ಪಾರ್ಟಿ ಕೊಡಿಸುತ್ತೇನೆ ಎಂದು ಖುಷಿಯಲ್ಲಿ ಪಾರ್ಟಿ ಕೊಡಿಸಿದ್ದಾಳೆ. ಆದರೆ, ಯುವತಿಯ ಬಾಲ್ಯದ ಗೆಳೆಯ ತನ್ನ ಇನ್ನೊಬ್ಬ ಸ್ನೇಹಿತನನ್ನು ಕರೆದುಕೊಂಡು ಬಂದು ಕಂಠಪೂರ್ತಿ ಕುಡಿದು ಪಾರ್ಟಿ ಕೊಡಿಸಿದ ಗೆಳತಿಯನ್ನೇ ಕೋಣೆಯಲ್ಲಿ ಕೂಡಿಹಾಕಿ ಅತ್ಯಾಚಾರ ಮಾಡಿದ್ದಾರೆ.

ಸಾಮಾನ್ಯವಾಗಿ ಯುವಜನರು ತನ್ನ ತಂದೆ ತಾಯಿಯರನ್ನು ನಂಬುವುದಕ್ಕಿಂತ ಹೆಚ್ಚಾಗಿ ಸ್ನೇಹಿತರನ್ನು ನಂಬುತ್ತಾರೆ. ಹೀಗೆಯೇ ಇಲ್ಲೊಬ್ಬ ಯುವತಿ ಕೂಡ ತನ್ನೊಂದಿಗೆ 2ನೇ ತರಗತಿಯಿಂದ 10ನೇ ತರಗತಿವರೆಗೆ ಒಂದೇ ಶಾಲೆಯಲ್ಲಿ ಅಭ್ಯಾಸ ಮಾಡಿಕೊಂಡು ಬಂದಿದ್ದ ಸ್ನೇಹಿತನನ್ನು ನಂಬಿದ್ದಾಳೆ. ಹೀಗಾಗಿ, ತನ್ನ ಯಾವುದೇ ವಿಚಾರಗಳಿದ್ದರೂ ಅದನ್ನು ಬಾಲ್ಯದ ಗೆಳೆಯನೊಂದಿಗೆ ಶೇರ್ ಮಾಡಿಕೊಳ್ಳುತ್ತಿದ್ದಳು. ಈಗ ಯುವತಿಗೆ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸವೂ ಸಿಕ್ಕಿದೆ. ಈ ಖುಷಿಯನ್ನು ಕೂಡ ಸ್ನೇಹಿತನೊಂದಿಗೆ ಹಂಚಿಕೊಂಡಿದ್ದಾಳೆ.

Latest Videos

undefined

ಶಿರೂರು ಗುಡ್ಡ ಕುಸಿತ: ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ 5 ಮಕ್ಕಳನ್ನು ಕಾಪಾಡಿದ ರಿಯಲ್ ಹೀರೋ ಹೂವಾಗೌಡ

ಸ್ನೇಹಿತೆ ಕೆಲಸ ಸಿಕ್ಕಿದ ಖುಷಿಯನ್ನು ಹಂಚಿಕೊಂಡಿದ್ದಕ್ಕೆ ಪಾರ್ಟಿ ಕೇಳಿದ್ದಾನೆ. ಸರಿ ಆಯ್ತು ನೀನು ಏನು ಕೇಳುತ್ತೀಯಾ ಆ ಪಾರ್ಟಿ ಕೊಡುವುದಾಗಿ ಹೇಳಿದ್ದಾಳೆ. ಆಗ ಎಣ್ಣೆ ಪಾರ್ಟಿ ಕೊಡಿಸಲು ಕೇಳಿದ್ದಾನೆ. ಇದಕ್ಕೊಪ್ಪಿದ ಗೆಳತಿ ಆತ ಹೇಳಿದ ಫ್ಯಾಮಿಲಿ ಬಾರ್ ಅಂಡ್‌ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಕೊಡಿಸುವುದಾಗಿ ಹೇಳಿದ್ದಾಳೆ. ಇನ್ನು ಪಾರ್ಟಿಗೆ ಬರುವಾಗ ಯುವತಿಯ ಸ್ನೇಹಿತ ಇನ್ನೊಬ್ಬ ತನ್ನ ಗೆಳಯನನ್ನು ಕೊತೆಗೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿ ಎಲ್ಲರೂ ಸೇರಿ ಪಾರ್ಟಿ ಮಾಡಿದ್ದಾರೆ. ಆಗ ಇಬ್ಬರೂ ಯುವಕರು ಕಂಠಪೂರ್ತಿ ಮದ್ಯ ಸೇವನೆ ಮಾಡಿದ್ದಾರೆ. ಇದಾದ ನಂತರ ಯುವತಿಯನ್ನು ಬಲವಂತವಾಗಿ ಎತ್ತಿಕೊಂಡು ರೆಸ್ಟೋರೆಂಟ್‌ನ ಕೋಣೆಯೊಂದರಲ್ಲಿ ಕೂಡಿ ಹಾಕಿ ಅತ್ಯಾಚಾರ ಮಾಡಿದ್ದಾರೆ.

ಅವಳು ಅಗರ್ಭ ಶ್ರೀಮಂತೆ, ಅವನು ಎಲೆಕ್ಟ್ರಿಷಿಯನ್​​​! ಕೋಟಿ ಕೋಟಿ ಒಡತಿಗೆ ಮಾವನ ಮಗನೇ ವಿಲನ್​​..!

ಈ ಘಟನೆ ಜು.29ರ ಸೋಮವಾರ ಸಂಜೆ ಹೈದರಾಬಾದ್‌ನ ವನಸ್ಥಲಿಪುರಂನಲ್ಲಿರುವ ಬಾರ್‌ಲ್ಲಿ ನಡೆದಿದೆ. ಯುವತಿಯ ಬಾಲ್ಯದ ಸ್ನೇಹಿತ ಗೌತಮ್ ರೆಡ್ಡಿ ಮತ್ತು ಆತನ ಸಾಮಾನ್ಯ ಸ್ನೇಹಿತ ಇಬ್ಬರೂ ಸೇರಿ ಅತ್ಯಾಚಾರ ಮಾಡಿದ್ದಾರೆ ಎಂದು ಸಾಫ್ಟ್‌ವೇ‌ರ್ ಎಂಜಿನಿಯರ್ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ವನಸ್ಥಲಿಪುರಂ ಪೊಲೀಸ್ ಇನ್ಸ್‌ಪೆಕ್ಟರ್ ಡಿ. ಜಲೇಂದರ್ ರೆಡ್ಡಿ ಮಾತನಾಡಿ, ಮೂವರು ಸ್ನೇಹಿತರು ಹೋಟೆಲ್‌ಗೆ ಹೊಂದಿಕೊಂಡಿರುವ ಬಾರ್ ಮತ್ತು ರೆಸ್ಟೋರೆಂಟ್‌ ಗೆ ಹೋಗಿದ್ದರು. ಗೌತಮ್‌ ರೆಡ್ಡಿ ಮತ್ತು ಆತನ ಸ್ನೇಹಿತ ಕುಡಿದ ನಂತರ ಇಬ್ಬರೂ ಹೋಟೆಲ್‌ನ ಕೋಣೆಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

click me!