ತೆಲಂಗಾಣದಲ್ಲಿ ಹೈದರಾಬಾದ್ ರಸ್ತೆಗೆ ಡೋನಾಲ್ಡ್ ಟ್ರಂಪ್ ಹೆಸರು, ಶರಣಾಗಿದ್ದು ಯಾರು ಪ್ರಶ್ನಿಸಿದ ಬಿಜೆಪಿ

Published : Jun 16, 2026, 09:28 PM IST
Donald Trump Road in Hyderabad

ಸಾರಾಂಶ

ತೆಲಂಗಾಣ ಸರ್ಕಾರ ಹೈದರಾಬಾದ್‌ನಲ್ಲಿ ರಸ್ತೆಗೆ ಡೋನಾಲ್ಡ್ ಟ್ರಂಪ್ ಅವನ್ಯೂ ರಸ್ತೆ ಎಂದು ನಾಮಕರಣ ಮಾಡಿದೆ. ಇದರ ಬೆನ್ನಲ್ಲೇ ವಿವಾದಗಳು ಶುರುವಾಗಿದೆ. ಅಮೆರಿಕ ಮುಂದೆ ಶರಣಾಗಿದ್ದು ಯಾರು ಎಂದು ಬಿಜೆಪಿ ಪ್ರಶ್ನಿಸಿದೆ. 

ಹೈದರಾಬಾದ್ (ಜೂ.16) ಭಾರತದಲ್ಲಿ ಐತಿಹಾಸಿಕ ಹಿನ್ನಲೆ, ಪರಂಪರೆಯಿಂದ ಕೂಡಿದ್ದ ಹೆಸರುಗಳು ಕಾಲಕಾಲಕ್ಕೆ ಹಲವು ದಾಳಿಗಳು, ಆಡಳಿತಗಳಿಂದ ಬದಲಾಗಿದೆ. ಇದೇ ವೇಳೆ ಹಲವು ಬಾರಿ ಹೊಸ ಹೆಸರನ್ನಿಟ್ಟು ಇತಿಹಾರ ರಚಿಸಲಾಗಿದೆ. ಇದೀಗ ಹೈದರಾಬಾದ್‌ನಲ್ಲಿ ತೆಲಂಗಾಣದ ಕಾಂಗ್ರೆಸ್ ಸರ್ಕಾರ ರಸ್ತೆಯೊಂದಕ್ಕೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೆಸರಿಟ್ಟಿದೆ. ಜೂನ್ 23ರಂದು ಈ ರಸ್ತೆಯನ್ನು ಮುಖ್ಯಂತ್ರಿ ರೇವಂತ್ ರೆಡ್ಡಿ ಹಾಗೂ ಅಮೆರಿಕ ಕಾನ್ಸುಲೇಟ್ ಉದ್ಘಾಟನೆ ಮಾಡಲಿದ್ದಾರೆ. ಈ ಹೆಸರು ಇದೀಗ ವಿವಾದಕ್ಕೆ ಕಾರಣಾಗಿದೆ. ಅಮೆರಿಕ ಮುಂದೆ, ಟ್ರಂಪ್ ಮುಂದೆ ಶರಣಾಗಿದ್ದು ಯಾರು ಎಂದು ಬಿಜೆಪಿ ಪ್ರಶ್ನಿಸಿದೆ.

ಡೋನಾಲ್ಡ್ ಟ್ರಂಪ್ ಹೆಸರೇಕೆ, ಬಿಜೆಪಿ ಪ್ರಶ್ನೆ

ಹೈದರಾಬಾದ್ ರಸ್ತೆಗೆ ಡೋನಾಲ್ಡ್ ಟ್ರಂಪ್ ಅವೆನ್ಯೂ ಎಂಬ ಹೆಸರೇಕೆ ಎಂದು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ರಾಮಚಂದ್ರ ರಾವ್ ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ಎಲ್ಲೆಡೆ ಬಿಜೆಪಿ ಹಾಗೂ ಮೋದಿ ಸರ್ಕಾರದ ಮೇಲೆ ಆರೋಪ ಮಾಡುತ್ತಾರೆ. ಟ್ರಂಪ್ ಮುಂದೆ ಮೋದಿ ಶರಣಾಗಿದ್ದಾರೆ ಎಂದು ಆರೋಪಿಸಿದ್ದರು. ಈಗ ಹೇಳೆ ಟ್ರಂಪ್ ಮುಂದೆ ನಿಜಕ್ಕೂ ಶರಣಾಗಿದ್ದು ಯಾರು ಎಂದು ರಾಮಚಂದ್ರ ರಾವ್ ಪ್ರಶ್ನಿಸಿದ್ದಾರೆ.

ರಾಹುಲ್ ಶರಣಾದರೆ, ರೇವಂತ್ ರೆಡ್ಡಿ ಶರಣಾದರೇ?

ಹೈದರಾಬಾದ್ ರಸ್ತೆಗೆ ಟ್ರಂಪ್ ಹೆಸರಿಡುವ ಯಾವುದೇ ಅವಶ್ಯಕತೆ ಇರಲಿಲ್ಲ. ಆದರೆ ಇಲ್ಲಿ ರಾಹುಲ್ ಗಾಂಧಿ ಅಥವಾ ರೇವಂತ್ ರೆಡ್ಡಿ ಯಾರು ಟ್ರಂಪ್ ಮುಂದೆ ಶರಣಾಗಿದ್ದಾರೆ ಅನ್ನೋದು ಬಹಿರಂಗಪಡಿಸಲಿ ಎಂದು ರಾಮಚಂದ್ರ ರಾವ್ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಭಾರತದ ಹಲವು ರಾಷ್ಟ್ರಗಳಿಗೆ ಶರಣಾಗಿದೆ. ಈಗಲೂ ಅದೇ ಪದ್ಧತಿ ಮುಂದುವರಿಸುತ್ತಿದ್ದಾರೆ ಎಂದು ರಾಮಚಂದ್ರ ರಾವ್ ಆರೋಪಿಸಿದ್ದಾರೆ.

ಹೆಸರು ಸಮರ್ಥಿಸಿದ ತೆಲಂಗಾಣ ಕಾಂಗ್ರೆಸ್ ಸರ್ಕಾರ

ಹೈದರಾಬಾದ್‌ನಲ್ಲಿರುವ ಅಮೆರಿಕ ಕಾನ್ಸುಲೇಟ್ ಕಚೇರಿಯ ಪಕ್ಕದಲ್ಲಿರುವ ರಸ್ತೆಗೆ ಡೋನಾಲ್ಡ್ ಟ್ರಂಪ್ ಅವೆನ್ಯೂ ಎಂಬ ಹೆಸರಿಡಲಾಗಿದೆ. ಹೈದರಾಬಾದ್‌ನ ಅಭಿವೃದ್ಧಿಯಲ್ಲಿ ಅಮೆರಿಕ ವ್ಯಾಪಾರ ವಹಿವಾಟಿನ ಕೊಡುಗೆ ಇದೆ. ಅಮೆರಿಕನ್ ಕಂಪನಿಗಳು ಹೈದರಾಬಾದ್‌ನಲ್ಲಿ ಹೂಡಿಕೆ ಮಾಡಿದೆ. ಈ ಎಲ್ಲಾ ಕಾರಣಗಳಿಂದ ಡೋನಾಲ್ಡ್ ಟ್ರಂಪ್ ರಸ್ತೆ ಅನ್ನೋ ಹೆಸರಿಡಲಾಗಿದೆ. ಇಲ್ಲಿ ಯಾವುದೇ ಶರಣಾಗತಿ ಇಲ್ಲ ಎಂದು ತೆಲಂಗಾಣ ಸರ್ಕಾರ ಸ್ಪಷ್ಟಪಡಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

NH 150C Project: ಬಿಸಿಲುನಾಡು ರಾಯಚೂರು ಆಗಲಿದೆ ಹೈವೇಗಳ ಹಬ್: ದೆಹಲಿಯಲ್ಲಿ ಮಹತ್ವದ ಸಭೆ
ಭಾರತಕ್ಕೆ ಗಂಡಾಂತರ, ಭಾರಿ ಮಳೆಗಾಲದಲ್ಲೂ ಎಲ್ಲೆಡೆ ಬಿಸಿಲು, ಬೆಚ್ಚಿ ಬೀಳಿಸಿದ ಸ್ಯಾಟಲೈಟ್ ವರದಿ