ಕಾಲೇಜಿನಲ್ಲಿ ನಮಾಜ್‌ಗೆ ಅನುಮತಿ ನಿರಾಕರಣೆ, ಮುಸ್ಲಿಮ್ ವಿದ್ಯಾರ್ಥಿನಿಯರ ಪ್ರತಿಭಟನೆ!

By Suvarna News  |  First Published Feb 24, 2024, 10:19 PM IST

ಹಿಜಾಬ್ ಬಳಿಕ ಇದೀಗ ನಜಾಜ್ ಗದ್ದಲ ಶುರುವಾಗಿದೆ. ಕಾಲೇಜಿನಲ್ಲಿ ನಮಾಜ್‌ಗೆ ಅವಕಾಶ ನಿರಾಕರಿಸಿದ ಕಾಲೇಜು ಆಡಳಿತ ಮಂಡಳಿ ಮಂಡಳಿ ವಿರುದ್ದ ಮುಸ್ಲಿಮ್ ವಿದ್ಯಾರ್ಥಿನಿಯರು ಭಾರಿ ಪ್ರತಿಭಟನೆ ನಡೆಸಿದ್ದಾರೆ. 


ಹೈದರಾಬಾದ್(ಫೆ.24) ಹಿಜಾಬ್‌ನಿಂದ ಆರಂಭಗೊಂಡ ಗದ್ದಲ ದೇಶವ್ಯಾಪಿ ಹರಡಿ ಕೋಲಾಹಲವನ್ನೇ ಸೃಷ್ಟಿಸಿದೆ. ಹಿಜಾಬ್ ತಣ್ಣಗಾಗುತ್ತಿದ್ದಂತೆ ಇದೀಗ ನಮಾಜ್ ಹೋರಾಟ ಶುರುವಾಗಿದೆ. ಹೈದರಾಬಾದ್‌ನ ಕೆವಿ ರಂಗಣ್ಣ ರೆಡ್ಡಿ ಮಹಿಳಾ ಪದವಿ ಕಾಲೇಜಿನಲ್ಲಿ ಇದೀಗ ಧರ್ಮ ದಂಗಲ್ ಜೋರಾಗುತ್ತಿದೆ. ಕಾಲೇಜಿನಲ್ಲಿ ನಮಾಜ್‌‌ಗೆ ಕಾಲೇಜು ಆಡಳಿತ ಮಂಡಳಿ ನಿರಾಕರಿಸಿದೆ. ಇದು ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಕೆರಳಿಸಿದೆ. ಹೀಗಾಗಿ ಇಂದು ಮುಸ್ಲಿಮ್ ವಿದ್ಯಾರ್ಥಿನಿಯರು ಕಾಲೇಜು ವಿರುದ್ದ ಭಾರಿ ಪ್ರತಿಭಟನೆ ನಡೆಸಿದ್ದಾರೆ. 

ಕೆವಿ ರಂಗಣ್ಣ ರೆಡ್ಡಿ ಮಹಿಳಾ ಕಾಲೇಜಿನಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದೆ. ಕಳೆದ ವರ್ಷ ಹಿಜಾಬ್ ಗದ್ದಲವೂ ಇಲ್ಲಿ ನಡೆದಿತ್ತು. ಇದೀಗ ಕಾಲೇಜು ತರಗತಿಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರು ನಮಾಜ್ ಮಾಡಲು ಆರಂಭಿಸಿದ್ದಾರೆ. ಮುಸ್ಲಿಮ್ ವಿದ್ಯಾರ್ಥಿನಿಯರ ಈ ನಡೆಯನ್ನು ಕಾಲೇಜು ಆಡಳಿತ ಮಂಡಳಿ ವಿರೋಧಿಸಿದೆ. ಇಷ್ಟೇ ಅಲ್ಲ ನಮಾಜ್‌ಗೆ ಅವಕಾಶವಿಲ್ಲ ಎಂದು ಎಚ್ಚರಿಸಿದೆ.

Tap to resize

Latest Videos

ರಾಜ್ಯಸಭೆಯಲ್ಲಿ 30 ನಿಮಿಷದ ನಮಾಜ್‌ ಬ್ರೇಕ್‌ ರದ್ದು ಮಾಡಿದ ಚೇರ್ಮನ್‌ ಜಗದೀಪ್‌ ಧನ್‌ಕರ್‌!

ಆದರೆ ಮುಸ್ಲಿಮ್ ವಿದ್ಯಾರ್ಥಿನಿಯರು ಕಾಲೇಜು ತರಗತಿ, ಆವರಣದಲ್ಲಿ ನಮಾಜ್ ಮಾಡಿ ಆಡಳಿತ ಮಂಡಳಿಗೆ ಸೆಡ್ಡು ಹೊಡೆದಿದ್ದಾರೆ. ಇತ್ತ ಕಾಲೇಜಿನ ಶಿಸ್ತು ಸಮಿತಿ ಸದಸ್ಯರು ಕೆಲ ವಿದ್ಯಾರ್ಥಿನಿಯರ ಐಡಿ ಕಾರ್ಡ್ ತೆಗೆದುಕೊಂಡಿದ್ದರೆ. ನಮಾಜ್ ಮುಂದುವರಿಸಿದರೆ ಅಮಾನತು ಮಾಡುವುದಾಗಿ ಎಚ್ಚರಿಸಿದ್ದಾರೆ. ಇತ್ತ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ನಮಾಜ್‌ಗೆ ಅನುಮತಿ ನೀಡಬೇಕು ಎಂದು ಮುಸ್ಲಿಮ್ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. 

denies permission for namaz

ಮುಸ್ಲಿಮ್ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಕಾಲೇಜು ವಿರುದ್ದ ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಆಡಳಿತ ಮಂಡಳಿ ಸಮಿತಿಯಲ್ಲಿ ಚರ್ಚಿಸಿ ನಿರ್ಧರಿಸುವುದಾಗಿ ಹೇಳಿತ್ತು. ಇಂದಿನಿಂದ ಮುಸ್ಲಿಮ್ ವಿದ್ಯಾರ್ಥಿನಿಯರು ಕಾಲೇಜು ತರಗತಿಯಲ್ಲಿ ನಮಾಜ್‌ಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು ಭಾರಿ ಪ್ರತಿಭಟನೆ ನಡೆಸಿದ್ದಾರೆ. 

ದೇವಸ್ಥಾನದೊಳಗೆ ನಮಾಜ್‌ ಮಾಡಿದ ಮಹಿಳೆಯರು: ವಿಡಿಯೋ ವೈರಲ್‌

ಕಾಲೇಜು ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ನಮಾಜ್‌ಗೆ ಅವಕಾಶ ನೀಡಬೇಕು. ಇದು ನಮ್ಮ ಧಾರ್ಮಿಕ ಹಕ್ಕು ಎಂದು ಕಾಲೇಜಿನ ವಿರುದ್ಧ ಭಾರಿ ಪ್ರತಿಭಟನೆ ನೆಡೆಸಿದ್ದಾರೆ. ಪ್ರತಿಭಟನೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೇ ಕೆವಿ ರಂಗಣ್ಣ ರೆಡ್ಡಿ ಮಹಿಳಾ ಕಾಲೇಜಿನಲ್ಲಿ ಕಳೆದ ವರ್ಷ ಹಿಜಾಬ್ ಗಲಾಟೆಯೂ ನಡೆದಿತ್ತು. ಪ್ರತಿಭಟನೆಗೂ ಮಣಿದು ಹಿಜಾಬ್‌ಗೆ ಅವಕಾಶ ನೀಡಿದ ಬಳಿಕ ಇದೀಗ ನಮಾಜ್‌ಗೆ ಹೋರಾಟ ನಡೆಯುತ್ತಿದೆ.

click me!