ವಿಶ್ವದರ್ಜೆಯ ಸಂಶೋಧನಾ ಸಂಸ್ಥೆ ನಿರ್ಮಾಣಕ್ಕೆ 350 ಕೋಟಿ ರೂ. ದಾನ ನೀಡಿದ ಡಾಕ್ಟರ್!

By Suvarna NewsFirst Published Aug 11, 2021, 6:33 PM IST
Highlights

* ತಮ್ಮ ಸಂಪಾದನೆಯ ಮುಕ್ಕಾಲು ಪಾಲು ದಾನ ಮಾಡಿದ ವೈದ್ಯ
* ಹೈದಾರಾಬಾದಿನಲ್ಲಿ ವಿಶ್ವದರ್ಜೆಯ ವೈದ್ಯ ವಿಜ್ಞಾನ ಸಂಸ್ಥೆ
* 350  ಕೋಟಿ ರೂ. ದಾನ ಮಾಡಿದ ಡಾ. ರವೀಂದ್ರನಾಥ್

ಹೈದರಾಬಾದ್(ಆ. 11)   ಹೈದರಾಬಾದಿನ ವೈದ್ಯರೊಬ್ಬರು ಮಾದರಿ ಕೆಲಸ ಮಾಡಿದ್ದಾರೆ. ತಮ್ಮ ಸಂಪಾದನೆಯ ಶೇ.  70  ರಷ್ಟನ್ನು ದಾನ ಮಾಡಿದ್ದು ಅತ್ಯಾಧುನಿಕ  ಮೆಡಿಕಲ್ ವಿವಿ ಸ್ಥಾಪನೆ   ಮಾಡಲು ತೀರ್ಮಾನಿಸಿದ್ದಾರೆ.

ಗ್ಲೋಬಲ್ ಹಾಸ್ಪಿಟಲ್ ಗ್ರೂಪ್ ಸಂಸ್ಥಾಪಕ ಡಾ. ರವೀಂದ್ರನಾಥ್  ಕಂಚೆರ್ಲಾ   ತಮ್ಮ ಸಂಪಾದನೆಯ ಸುಮಾರು  350  ಕೋಟಿ ರೂ. ದಾನ ಮಾಡಿದ್ದಾರೆ. ವಿಶ್ವ ದರ್ಜೆಯ ವೈದ್ಯಕೀಯ ವಿಜ್ಞಾಬ ಸಂಸ್ಥೆ ಇವರ ಕನಸು.

ಗ್ಲೋಬಲ್ ಹೆಲ್ತ್ ಟೆಕ್ ಯುನಿವರ್ಸಿಟಿ ಮತ್ತು ಇನೋವೇಶನ್ ಹಬ್ ಎನ್‌ಜಿಒ ಸ್ಥಾಪನೆಗೆ ಡಾ. ರವೀಂದ್ರನಾಥ್ ಹೆಜ್ಜೆ ಇಟ್ಟಿದ್ದಾರೆ.  ಭಾರತ ಮತ್ತು ವಿಶ್ವ ಮಟ್ಟದಲ್ಲಿ ಸಂಶೋಧನೆಗೆ ಆದ್ಯತೆ ನೀಡುವುದು ಅವರ ಗುರಿ.

 ದೊಡ್ಡ ಸಂಸ್ಥೆ ಸ್ಥಾಪನೆಗೆ 100 ಮಿಲಿಯನ್ ಡಾಲರ್ ಅಗತ್ಯವಿದೆ. ಸಂಸ್ಥೆ ಸ್ಥಾಪನೆಗೆ ಏಳು ವರ್ಷ ತಗುಲಬಹುದು ಎಂದು ಅಂದಾಜಿಲಸಾಗಿದೆ. 750-1,000 ಬೆಡ್  ಆಸ್ಪತ್ರೆಯ ಜತೆಗೆ ಮೆಡಿಕಲ್ ಟೆಕ್ನಾಲಜಿ ಅಭಿವೃದ್ಧಿ ಮಾಡುವ ಉದ್ದೇಶ ಹೊಂದಿದ್ದಾರೆ.

ಈ ವಸ್ತುಗಳನ್ನು ದಾನ ಮಾಡುವುದು ಮಹಾಪಾಪ

ಹೈದರಾಬಾದಿನಲ್ಲಿ ಸಂಸ್ಥೆ ಸ್ಥಾಪನೆಯಾಗಲಿದ್ದು  ಸರ್ಕಾರಿ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡಿ ಜನರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶವಿದೆ ಎಂದು ಡಾ. ರವೀಂದ್ರನಾಥ್ ತಿಳಿಸಿದ್ದಾರೆ.

ತಮ್ಮ ಸಂಪಾದನೆಯ ಮೂಲಕ ಅರ್ಧದಷ್ಟು ಹಣ ಹೊಂದಿಸಿದ್ದು ಇನ್ನರ್ಧ ವೆಚ್ಚವನ್ನು ಫಂಡ್ ರೈಸಿಂಗ್ ಮೂಲಕ ಭರಿಸುವ ಆಲೋಚನೆಯಲ್ಲಿ ಇದ್ದಾರೆ.  ಹೃದಯ, ಶ್ವಾಸಕೋಶ, ಪಾರ್ಶ್ವವಾಯು ಸೇರಿ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡಬಲ್ಲ ಆಸ್ಪತ್ರೆ  ನಿರ್ಮಾಣ ಗುರಿ ಇಟ್ಟುಕೊಂಡಿದ್ದಾರೆ .

click me!