ಸೂಪರ್‌ ಮಾರ್ಕೆಟ್‌ನಲ್ಲಿ ಫ್ರಿಡ್ಜ್‌ ಮುಟ್ಟಿದ ಪುಟಾಣಿ ಕರೆಂಟ್ ಶಾಕ್‌ಗೆ ಬಲಿ: ಆಘಾತಕಾರಿ ವೀಡಿಯೋ ವೈರಲ್

Published : Oct 03, 2023, 03:33 PM IST
ಸೂಪರ್‌ ಮಾರ್ಕೆಟ್‌ನಲ್ಲಿ ಫ್ರಿಡ್ಜ್‌ ಮುಟ್ಟಿದ ಪುಟಾಣಿ ಕರೆಂಟ್ ಶಾಕ್‌ಗೆ ಬಲಿ: ಆಘಾತಕಾರಿ ವೀಡಿಯೋ ವೈರಲ್

ಸಾರಾಂಶ

ಸೂಪರ್‌ ಮಾರ್ಕೆಟ್‌ಗೆ ಪೋಷಕರೊಂದಿಗೆ ಹೋದ ಬಾಲಕಿಯೊಬ್ಬಳು ಕರೆಂಟ್ ಶಾಕ್‌ಗೆ ಬಲಿಯಾದ ದಾರುಣ ಘಟನೆ ನೆರೆಯ ರಾಜ್ಯ ತೆಲಂಗಾಣದ ನಿಜಮಾಬಾದ್‌ನಲ್ಲಿ ನಡೆದಿದೆ.

ನಿಜಮಾಬಾದ್‌: ಸೂಪರ್‌ ಮಾರ್ಕೆಟ್‌ಗೆ ಪೋಷಕರೊಂದಿಗೆ ಹೋದ ಬಾಲಕಿಯೊಬ್ಬಳು ಕರೆಂಟ್ ಶಾಕ್‌ಗೆ ಬಲಿಯಾದ ದಾರುಣ ಘಟನೆ ನೆರೆಯ ರಾಜ್ಯ ತೆಲಂಗಾಣದ ನಿಜಮಾಬಾದ್‌ನಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೋಡುಗರ ಕಣ್ಣಲ್ಲಿ ನೀರು ತರಿಸುತ್ತಿದೆ. ಮೃತ ಬಾಲಕಿಯನ್ನು 4 ವರ್ಷದ ರುಚಿತಾ ಎಂದು ಗುರುತಿಸಲಾಗಿದೆ. ಈಕೆ ತನ್ನ ತಂದೆ ರಾಜಶೇಖರ್ ಜೊತೆ  ನಂದಿಪೇಟ್‌ನ ನವಿಪೇಟ್ ಬಳಿ ಇರುವ ಸೂಪರ್‌ ಮಾರ್ಕೆಟ್‌ಗೆ ಬಂದಿದ್ದಳು. 

ಮನೆಗೆ ದಿನಸಿ ತರುವ ಸಲುವಾಗಿ ಸೂಪರ್ ಮಾರ್ಕೆಟ್‌ಗೆ ಹೊರಟಿದ್ದ ರಾಜಶೇಖರ್ ಜೊತೆಗೆ ತಮ್ಮ 4 ವರ್ಷದ ಮಗಳನ್ನು ಕರೆದುಕೊಂಡು ಬಂದಿದ್ದರು. ಇಲ್ಲಿ ತಂದೆ ಶಾಪಿಂಗ್‌ನಲ್ಲಿ ತೊಡಗಿದ್ದ ವೇಳೆ ಬಾಲಕಿ ಸಮೀಪದಲ್ಲೇ ಇದ್ದ ರೆಪ್ರಿಜರೇಟರ್  ಬಾಗಿಲು ತೆರೆಯಲು ಹೋಗಿದ್ದಾಳೆ. ಈ ವೇಳೆ ಆಕೆಗೆ ಶಾಕ್ ತಗುಲಿದ್ದು, ಆಕೆ ಫ್ರಿಡ್ಜ್‌ ಬಾಗಿಲಿನಲ್ಲಿ ನೇತಾಡುತ್ತಿದ್ದಾಳೆ. ಪಕ್ಕದಲ್ಲಿದ್ದ ತಂದೆಗೆ ಈ ವಿಚಾರ ತಿಳಿಯಬೇಕಾದರೆ ಸುಮಾರು 15 ಸೆಕೆಂಡ್‌ಗಳೇ ಕಳೆದಿವೆ. ಅಷ್ಟರಲ್ಲಿ ಬಾಲಕಿ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ. ಈ ಭಯಾನಕ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಭಯ ಮೂಡಿಸುತ್ತಿದೆ. 

ಪ್ರಧಾನಿಗೆ ಸಿಕ್ಕಿದ ಗಿಫ್ಟ್‌ಗಳ ಹರಾಜು: ಈ ಪ್ರಕ್ರಿಯೆಯಲ್ಲಿ ನೀವೂ ಭಾಗವಹಿಸಬಹುದು

ವಿದ್ಯುತ್ ಶಾಕ್‌ಗೆ ಒಳಗಾಗಿದ್ದನ್ನು ನೋಡಿ ತಂದೆ ಕೂಡಲೇ ತನ್ನ ಕೈಯಲ್ಲಿದ್ದ ವಸ್ತುಗಳನ್ನೆಲ್ಲಾ ಎಸೆದು ಸಮೀಪ ಬಂದು ಮಗಳನ್ನು ಎತ್ತಿಕೊಳ್ಳುವ ದೃಶ್ಯವಿದ್ದು, ಅಷ್ಟೋತ್ತಿಗಾಗಲೇ ಬಾಲಕಿ ಉಸಿರು ಚೆಲ್ಲಿದ್ದಾಳೆ. ಕೆಲ ಸೆಕೆಂಡ್‌ಗಳಲ್ಲಿ ಎಲ್ಲವೂ ನಡೆದು ಹೋಗಿದೆ. ಘಟನೆಯ ವೀಡಿಯೋ ನೋಡಿದ ಎಲ್ಲರೂ ಶಾಕ್‌ಗೆ ಒಳಗಾಗಿದ್ದಾರೆ. ಮಕ್ಕಳನ್ನು ಶಾಪಿಂಗ್ ಎಂದು ಹೊರಗಡೆ ಕರೆದೊಯ್ಯುವ ವೇಳೆ ಅವರ ಮೇಲೆ ಒಂದು ಕಣ್ಣು ಸದಾ ಇಟ್ಟಿರಬೇಕು ಇಲ್ಲದೇ ಹೋದರೆ ಇಂತಹ ಅನಾಹುತಗಳು ಸಂಭವಿಸುತ್ತವೆ ಎಂದು ವೀಡಿಯೋ ನೋಡಿದ ಒಬ್ಬರು ಪ್ರತಿಕ್ರಿಯಿಸಿದ್ದಾರೆ.  ಮತ್ತೆ ಕೆಲವರು ಬಾಲಕಿಯ ಸಾವಿಗೆ ಶೋಕ ವ್ಯಕ್ತಪಡಿಸಿದ್ದು, ತಂದೆಯ ಸ್ಥಿತಿ ನೆನೆದು ಮರುಗಿದ್ದಾರೆ.

ಗೋಲ್ಡನ್‌ ಟೆಂಪಲ್‌ಗೆ ಭೇಟಿ ನೀಡಿ ಪಾತ್ರೆ ತೊಳೆದ ರಾಹುಲ್‌ ಗಾಂಧಿ

ಅನೇಕ ಸೂಪರ್ ಮಾರ್ಕೆಟ್‌ಗಳಲ್ಲಿ ಫ್ರಿಡ್ಜ್‌ಗಳನ್ನು ಸರಿಯಾಗಿ ನಿರ್ವಹಿಸುವುದೇ ಇಲ್ಲ, ಇಂತಹ ಘಟನೆಗಳಾದರೆ ಜೀವಕ್ಕೆ ಯಾರು ಹೊಣೆ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಈ ಸೂಪರ್ ಮಾರ್ಕೆಟ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. 

ದೇಶದ ಹಲವು ರಾಜ್ಯಗಳಲ್ಲಿದೆ ಜಗದೋದ್ಧಾರಕನಿಗೆ ಆಸ್ತಿ: ಪುರಿ ಜಗನ್ನಾಥ ಎಷ್ಟೊಂದು ಶ್ರೀಮಂತ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ