ಶಿಂಧೆ ಬಣದ ವಿರುದ್ಧ ಗೆದ್ದು ಬೀಗಿದ ಠಾಕ್ರೆ ಬಣ, ಶಿವಾಜಿ ಪಾರ್ಕ್ ದಸರಾ ರ‍್ಯಾಲಿಗೆ ಹೈಕೋರ್ಟ್ ಅನುಮತಿ!

By Suvarna NewsFirst Published Sep 23, 2022, 9:00 PM IST
Highlights

ಸರ್ಕಾರ ಪತನ, ಹೊಸ ಸರ್ಕಾರ ರಚನೆಯಿಂದ ಹಿಡಿದು ಉದ್ಧವ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ನಡುವಿನ ಬಡಿದಾಟ ಹೆಚ್ಚಾಗುತ್ತಲೇ ಇದೆ. ಏಕನಾಥ್ ಶಿಂಧೆ ವಿರುದ್ದದ ಬಹುತೇಕ ಹೋರಾಟದಲ್ಲಿ ಹಿನ್ನಡೆ ಅನುಭವಿಸಿದ ಉದ್ದವ್ ಠಾಕ್ರೆ ಬಣಕ್ಕೆ ಇದೀಗ ಮೊದಲ ಗೆಲುವು ಸಿಕ್ಕಿದೆ. 

ಮುಂಬೈ(ಸೆ.23): ಉದ್ದವ್ ಠಾಕ್ರೆ ಬಣದಿಂದ ದೂರ ಸರಿದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ ಏಕನಾಥ್ ಶಿಂಧೆ ಬಣ ಒಂದರ ಮೇಲೊಂದರಂತೆ ಯಶಸ್ಸು ದಾಖಲಿಸಿತ್ತು. ಶಿಂಧೆ ಬಣದ ವಿರುದ್ದದ ಹೋರಾಟದಲ್ಲಿ ಉದ್ಧವ್ ಠಾಕ್ರೆ ಬಣ ಮುಗ್ಗರಿಸುತ್ತಲೇ ಬಂದಿತ್ತು. ಆದರೆ  ಈಬಾರಿ ಉದ್ದವ್ ಠಾಕ್ರೆ ಬಣ ಮೇಲುಗೈ ಸಾಧಿಸಿದೆ. ಶಿವಾಜಿ ಪಾರ್ಕ್‌ನಲ್ಲಿ ದಸರಾ ರ‍್ಯಾಲಿ ಆಯೋಜಿಸುವ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದ ಉದ್ದವ್ ಠಾಕ್ರೆ ಬಣಕ್ಕೆ ಗೆಲುವು ಸಿಕ್ಕಿದೆ. ಐತಿಹಾಸಿಕ ಶಿವಾಜಿ ಪಾರ್ಕ್‌ನಲ್ಲಿ ದಸರಾ ರ‍್ಯಾಲಿ ಆಯೋಜಿಸಲು ಉದ್ಧವ್ ಠಾಕ್ರೆ ಬಣಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಮುಖ್ಯಮಂತ್ರಿ ಶಿಂಧೆ ಹಾಗೂ ಶಿವಸೇನೆ ಬಣ ಶಿವಾಜಿ ಪಾರ್ಕ್‌ನಲ್ಲಿ ದಸರಾ ರ‍್ಯಾಲಿ ಆಯೋಜನೆಗೆ ಪಾಲಿಕೆಗೆ ಮನವಿ ಸಲ್ಲಿಸಿತ್ತು. ಇತ್ತ ಉದ್ಧವ್ ಠಾಕ್ರೆ ಬಣವೂ ಅರ್ಜಿ ಸಲ್ಲಿಸಿತ್ತು. ಹೀಗಾಗಿ ಇದು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು. ಮುಂಬೈ ನಗರ ಪಾಲಿಕೆ ಎರಡೂ ಅರ್ಜಿಯನ್ನು ತರಿಸ್ಕರಿಸಿತ್ತು. ಈ ನಿರ್ಧಾರದ ವಿರುದ್ದ ಕೋರ್ಟ್ ಮೆಟ್ಟಿಲೇರಿದ್ದ ಉದ್ಧವ್ ಬಣಕ್ಕೆ ರ‍್ಯಾಲಿ ಆಯೋಜಿಸಲು ಅನುಮತಿ ನೀಡಿದೆ.

ಜಸ್ಟೀಸ್ ಆರ್‌ಡಿ ಧಾನುಕಾ ಹಾಗೂ ಜಸ್ಟೀಸ್ ಕಮಲಾ ಖತಾ ನೇೃತ್ವದ ದ್ವಿಸದಸ್ಯ ಪೀಠ ಈ ಅರ್ಜಿ ವಿಚಾರಣೆ ನಡೆಸಿತ್ತು. ಮುಂಬೈ ಮಹಾನಗರ ಪಾಲಿಕೆ ನಿರ್ಧಾರವನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಬಣ ಹೈಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ಉದ್ದವ್ ಠಾಕ್ರೆ ಬಣಕ್ಕೆ ಶಿವಾಜಿ ಪಾರ್ಕ್‌ನಲ್ಲಿ ದಸರಾ ರ‍್ಯಾಲಿ ಆಯೋಜಿಸಲು ಅನುಮತಿ ನೀಡಿದೆ. ಇದು ಏಕನಾಥ್ ಶಿಂಧೆ ಬಣಕ್ಕೆ ತೀವ್ರ ಹಿನ್ನಡೆ ತಂದಿದೆ.

ಶಿವಸೇನೆ ಯಾರದ್ದು..? ನಿರ್ಧಾರ ಮಾಡಲಿದೆ ಸಾಂವಿಧಾನಿಕ ಪೀಠ!

ಅಕ್ಟೋಬರ್ 2 ರಿಂದ 6 ವರೆಗೆ ಶಿವಾಜಿ ಪಾರ್ಕ್‌ನಲ್ಲಿ ಉದ್ಧವ್ ಠಾಕ್ರೆ ಬಣ ದಸರಾ ರ‍್ಯಾಲಿ ಆಯೋಜಿಸಲಿದೆ. ಈ ವೇಳೆ ಕಾನೂನು ಸುವ್ಯಸ್ಥೆಗೆ ಧಕ್ಕೆಯಾಗಬಾರದು ಎಂದು ಠಾಕ್ರೆ ಬಣಕ್ಕೆ ಕೋರ್ಟ್ ಎಚ್ಚರಿಸಿದೆ. 

ಕೇಟರಿಂಗ್ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿದ ಶಿವಸೇನಾ ಶಾಸಕ: ವಿಡಿಯೋ ವೈರಲ್

ಮನವಿ ತಿರಸ್ಕರಿಸಿದ್ದ ಪಾಲಿಕೆ 
ಉದ್ದವ್‌ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಮಹಾರಾಷ್ಟ್ರ ಮುಖ್ಯಮಮಂತ್ರಿ ಏಕನಾಥ ಶಿಂದೆ ಬಣಕ್ಕೆ ಶಿವಾಜಿ ಪಾರ್ಕ್ನಲ್ಲಿ ದಸರಾ ಆಚರಣೆ ಮಾಡಲು ಬೃಹತ್‌ ಮುಂಬೈ ನಗರ ಪಾಲಿಕೆ ಅನುಮತಿಯನ್ನು ನಿರಾಕರಿಸಿತ್ತು.  ಕಾನೂನು ಸುವ್ಯವಸ್ಥೆಯ ಹಿನ್ನಲೆಯಲ್ಲಿ ಮುಂಬೈ ಪೋಲಿಸ್‌ ಇಲಾಖೆ ನೀಡಿದ ಸಲಹೆ ಅನ್ವಯ ಅನುಮತಿಯನ್ನು ಗುರುವಾರ ತಡೆಹಿಡಿಯಲಾಗಿತ್ತು.  ದಸರಾ ಆಚರಣೆಗೆ ಅನುಮತಿ ಕೋರಿ ಉದ್ದವ್‌ ಬಣ ನಗರ ಪಾಲಿಕೆಗೆ ಅ.22 ರಂದು ಮನವಿ ಸಲ್ಲಿಸಿತ್ತು, ಅ.30 ರಂದು ಶಿಂದೆ ಬಣ ಮನವಿ ನೀಡಿತ್ತು. ಆದರೆ ಶಿಂದೆ ಬಣಕ್ಕೆ ಎಮ್‌ಎಮ್‌ಆರ್‌ಡಿ ಮೈದಾನದಲ್ಲಿ ದಸರಾ ಆಚರಿಸಲು ಕಳೆದ ವಾರ ಅನುಮತಿ ಸಿಕ್ಕಿತ್ತು. ಇದೀಗ ಎರಡು ಬಣಕ್ಕೂ ನಿರಾಸೆಯಾಗಿದೆ.

ಸೇನೆ ಹುಟ್ಟಿದ ಕ್ಷೇತ್ರದ ಶಾಸಕ ಶಿಂಧೆ ಗುಂಪಿಗೆ!

ಮುಂಬೈ: ಶಿವಸೇನೆ ಪಕ್ಷ ಸ್ಥಾಪನೆಯಾದ ಶಿವಾಜಿ ಪಾರ್ಕ್ ಇರುವ ಸ್ಥಳವನ್ನು ಹೊಂದಿಉರವ ಮತ್ತು ಶಿವಸೇನೆಯ ಮುಖ್ಯ ಕಚೇರಿ ಇರುವ ಮಹಿಮ್‌ ಕ್ಷೇತ್ರದ ಶಾಸಕ ಸರ್ವಾಂಕರ್‌ ಬಂಡಾಯ ಶಾಸಕರ ಗುಂಪನ್ನು ಸೇರಿಕೊಂಡಿದ್ದಾರೆ. ಇದು ಶಿವಸೇನೆಗೆ ಮತ್ತಷ್ಟುಮುಜುಗರ ಉಂಟು ಮಾಡಿದೆ. ಬುಧವಾರ ರಾತ್ರಿ ಏಕನಾಥ ಶಿಂಧೆ ಅವರ ಬಣವನ್ನು ಸೇರಿದ ಮೂವರು ಶಾಸಕರುಗಳಲ್ಲಿ ಇವರು ಸಹ ಒಬ್ಬರಾಗಿದ್ದಾರೆ. ಸರ್ವಾಂಕರ್‌ ಅವರ ಬಂಡಾಯುವು, ಪಕ್ಷದ ನಾಯಕತ್ವದ ಬಗ್ಗೆ ಶಾಸಕರು ಹೊಂದಿರುವ ಅಸಮಾಧಾನಕ್ಕೆ ಸಾಕ್ಷಿ ಎನ್ನಲಾಗಿದೆ.

click me!