FTA ಬೆನ್ನಲ್ಲೇ ಭಾರತದಲ್ಲಿ ಬ್ರಿಟನ್‌ ಸ್ಕಾಚ್‌ ವಿಸ್ಕಿಗೆ ಭರ್ಜರಿ ಬೇಡಿಕೆ: ನೂರು, ಇನ್ನೂರಲ್ಲ ಆಮದು ಪ್ರಮಾಣದಲ್ಲಿ ಸಾವಿರ ಪಟ್ಟು ಹೆಚ್ಚಳ!

Published : Nov 03, 2026, 08:58 PM IST
Whisky scotch

ಸಾರಾಂಶ

ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಸ್ಕಾಚ್ ವಿಸ್ಕಿ ಮೇಲಿನ ತೆರಿಗೆ ಶೇ. 75ಕ್ಕೆ ಇಳಿಕೆಯಾಗಿದೆ. ಇದರಿಂದಾಗಿ ಭಾರತಕ್ಕೆ ಬೃಹತ್ ಟ್ಯಾಂಕರ್‌ಗಳಲ್ಲಿ ಸ್ಕಾಚ್ ಆಮದು ಗಣನೀಯವಾಗಿ ಹೆಚ್ಚಾಗಿದ್ದು, ಸ್ಥಳೀಯವಾಗಿ ಬಾಟಲಿಂಗ್ ಮಾಡಲಾಗುತ್ತಿದೆ.

ನವದೆಹಲಿ: ಮದ್ಯ ಪ್ರಿಯರು ಕಡಿಮೆ ಬೆಲೆಗೆ ಎಣ್ಣೆ ಸಿಗುತ್ತೆ ಅಂದ್ರೆ ಯಾರು ಬೇಡ ಅಂತಾರೆ? ಈಗ ಭಾರತದಲ್ಲಿ ಅದೇ ಆಗ್ತಿದೆ. ಬ್ರಿಟನ್ ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದದ ನಂತರ ಸ್ಕಾಚ್ ವಿಸ್ಕಿ ಮೇಲಿನ ತೆರಿಗೆ ಕಡಿಮೆಯಾಗಿದೆ. ಇದರಿಂದ ಭಾರತದಲ್ಲಿ ಬ್ರಿಟಿಷ್ ಸ್ಕಾಚ್ ಗೆ ಭಾರೀ ಬೇಡಿಕೆ ಬಂದಿದೆ.

ಕಳೆದ ಜುಲೈ 15 ರಂದು ಭಾರತ ಮತ್ತು ಯುಕೆ ನಡುವೆ ವ್ಯಾಪಾರ ಒಪ್ಪಂದ ಆಗಿದೆ. ಆಗ ಸ್ಕಾಚ್ ವಿಸ್ಕಿ ಮೇಲಿದ್ದ 150% ತೆರಿಗೆಯನ್ನು 75% ಗೆ ಇಳಿಸಲಾಯಿತು. ತೆರಿಗೆ ಅರ್ಧಕ್ಕೆ ಇಳಿದಿದ್ದೇ ತಡ.. ಕಂಪನಿಗಳು ಭಾರತಕ್ಕೆ ಸ್ಕಾಚ್ ಕಳುಹಿಸಲು ಶುರು ಮಾಡಿದವು. ಅದರಿಂದ ಅಮದು ಪ್ರಮಾಣವು ಶೇಕಡಾ 1000 ರಷ್ಟು ಹೆಚ್ಚಳವಾಗಿದೆ.

ಈಗ ಕಂಪನಿಗಳು ಸಣ್ಣ ಬಾಟಲಿಗಳಲ್ಲಿ ಕಳುಹಿಸುವ ಬದಲು ದೊಡ್ಡ ಟ್ಯಾಂಕರ್ ಗಳಲ್ಲಿ ಸ್ಕಾಚ್ ಕಳುಹಿಸುತ್ತಿವೆ. ಅದನ್ನು ಭಾರತದಲ್ಲೇ ಬಾಟಲಿಗೆ ತುಂಬಿ ಮಾರಾಟ ಮಾಡುತ್ತಿವೆ. ಇದರಿಂದ ಕಂಪನಿಗಳಿಗೆ ಲಾಭ ಹೆಚ್ಚಾಗಿದೆ. ಮನಿ ಕಂಟ್ರೋಲ್ ವರದಿ ಪ್ರಕಾರ.. ಆಗಸ್ಟ್ ತಿಂಗಳಲ್ಲಿ ಬೃಹತ್ ಪ್ರಮಾಣದ ಸ್ಕಾಚ್ ಆಮದು ಶೇ. 679ರಷ್ಟು ಹೆಚ್ಚಾಗಿದೆ. ಒಟ್ಟು 2.5 ಮಿಲಿಯನ್ ಲೀಟರ್ ಸ್ಕಾಚ್ ಭಾರತಕ್ಕೆ ಬಂದಿದೆ. ಕಳೆದ ವರ್ಷ ಇದೇ ತಿಂಗಳು ಕೇವಲ 3.20 ಲಕ್ಷ ಲೀಟರ್ ಮಾತ್ರ ಬಂದಿತ್ತು.

ಎಣ್ಣೆ ನಿಮ್ದು, ಬಾಟಲಿ ನಮ್ದು

2 ಲೀಟರ್ ಗಿಂತ ದೊಡ್ಡ ಕಂಟೇನರ್ ಗಳಲ್ಲಿ ಬಂದ ಸ್ಕಾಚ್ ಮೌಲ್ಯ 12.39 ಮಿಲಿಯನ್ ಡಾಲರ್ ಅಂದರೆ ಸುಮಾರು 104 ಕೋಟಿ ರೂಪಾಯಿ ಆಗಿದೆ. ಸಣ್ಣ ಬಾಟಲಿಗಳಿಗೆ ಬೇಡಿಕೆ ಕಡಿಮೆದೊಡ್ಡ ಪ್ರಮಾಣದಲ್ಲಿ ಸ್ಕಾಚ್ ಬರುತ್ತಿದ್ದರೂ, ಸಣ್ಣ ಬಾಟಲಿಗಳ ಆಮದು ಕಡಿಮೆಯಾಗಿದೆ. 2 ಲೀಟರ್ ಅಥವಾ ಅದಕ್ಕಿಂತ ಚಿಕ್ಕ ಬಾಟಲಿಗಳ ಆಮದು ಶೇ. 30ರಷ್ಟು ಇಳಿದು 3.08 ಮಿಲಿಯನ್ ಡಾಲರ್ ಗೆ ಬಂದಿದೆ. ಬಾಟಲಿಗಳ ಸಂಖ್ಯೆ 5.71 ಲಕ್ಷದಿಂದ 4.02 ಲಕ್ಷಕ್ಕೆ ಇಳಿದಿದೆ. ಅಂದರೆ ಮದ್ಯ ವಿದೇಶದ್ದು, ಬಾಟಲಿಂಗ್ ಭಾರತದ್ದು ಎಂಬಂತಾಗಿದೆ.

ಜಿನ್, ರಮ್ ಗೂ ಲಾಭ

ಕೇವಲ ಸ್ಕಾಚ್ ಮಾತ್ರವಲ್ಲ.. ಜಿನ್ ಮತ್ತು ರಮ್ ಪ್ರಿಯರಿಗೂ ಖುಷಿಯ ಸುದ್ದಿ ಇದೆ. ಜಿನ್ ಆಮದು ಶೇ. 150ರಷ್ಟು ಹೆಚ್ಚಾಗಿ 0.84 ಮಿಲಿಯನ್ ಡಾಲರ್ ಗೆ ತಲುಪಿದೆ. ಪ್ರಮಾಣ ಶೇ. 185ರಷ್ಟು ಹೆಚ್ಚಾಗಿ 2.16 ಲಕ್ಷ ಲೀಟರ್ ಆಗಿದೆ. ವಿದೇಶಿ ರಮ್ ಆಮದು ಕೂಡ ಶೇ. 147ಕ್ಕಿಂತ ಹೆಚ್ಚು ಏರಿಕೆಯಾಗಿದೆ.ಸಣ್ಣ ತಾಂತ್ರಿಕ ಸಮಸ್ಯೆಈ ನಡುವೆ ಒಂದು ಸಣ್ಣ ಸಮಸ್ಯೆ ಬಂದಿದೆ. ಭಾರತಕ್ಕೆ ಬೃಹತ್ ಪ್ರಮಾಣದಲ್ಲಿ ಬಂದು ಇಲ್ಲಿ ಪ್ಯಾಕ್ ಆಗುವ ಮದ್ಯಕ್ಕೆ 75% ತೆರಿಗೆ ಅನ್ವಯ ಆಗುತ್ತಾ ಎಂಬ ಬಗ್ಗೆ ಗೊಂದಲ ಇದೆ.

ಇನ್ನೂ ಮದ್ಯಪ್ರಿಯರಿಗೆ ಮತ್ತೊಂದು ಗುಡ್‌ನ್ಯೂಸ್ ಏನೆಂದರೆ.. ಇದು ಇಲ್ಲಿಗೆ ಮುಗಿಯುವುದಿಲ್ಲ. ಒಪ್ಪಂದದ ಪ್ರಕಾರ ಮುಂದಿನ 10 ವರ್ಷಗಳಲ್ಲಿ ಸ್ಕಾಚ್ ಮೇಲಿನ ತೆರಿಗೆ 75% ರಿಂದ 40% ಗೆ ಇಳಿಯಲಿದೆ. ಅಂದರೆ ಮುಂದಿನ ದಿನಗಳಲ್ಲಿ ವಿದೇಶಿ ಸ್ಕಾಚ್ ಇನ್ನೂ ಅಗ್ಗವಾಗಿ ಭಾರತಕ್ಕೆ ಬರಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡೇಟಾ ಸೆಂಟರ್‌ ಸ್ಟಾರ್ಟ್‌ ಮಾಡ್ಬೇಕು ಅಂತಿದೀನಿ, 12,500 ಕೋಟಿ ಸಾಲ ಕೊಡಿ ಎಂದು ಬ್ಯಾಂಕ್‌ ಮುಂದೆ ನಿಂತ ಗೌತಮ್‌ ಅದಾನಿ!
23 ತಿಂಗಳ ಕಂದನ ₹9 ಕೋಟಿಯ ಚಿಕಿತ್ಸೆಗೆ ಸ್ಪಂದಿಸಿದ Anant Ambani, ವಿಡಿಯೋ ಕಾಲ್‌ನಲ್ಲಿ ಕಣ್ಣೀರಿಟ್ಟು ಕೃತಜ್ಞತೆ ತಿಳಿಸಿದ ತಾಯಿ!