* ನೀಲಗಿರಿ ಅರಣ್ಯದಲ್ಲಿ ಸಿಡಿಎಸ್ ಬಿಪಿನ್ ರಾವತ್ ಹೆಲಿಕಾಪ್ಟರ್ ಪತನ
* ದುರಂತದಲ್ಲಿ ಒಟ್ಟು ಹದಿಮೂರು ಮಂದಿ ನಿಧನ
* ಹೆಲಿಕಾಪ್ಟರ್ ಹಾರಾಟದ ವೆಳೆ ಹೇಗಿತ್ತು ವಾತಾವರಣ?
ವೆಲ್ಲಿಂಗ್ಟನ್(ಡಿ.10): ದೇಶದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರ ಹೆಲಿಕಾಪ್ಟರ್ ದುರಂತ ಬಹುದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ. ಕೆಲವರು ಇದೊಂದು ಅಪಘಾತ ಎಂದು ಹೇಳುತ್ತಿದ್ದರೆ, ಹಲವರು ಇದನ್ನು ಪಿತೂರಿ ಎಂದು ಪರಿಗಣಿಸುತ್ತಿದ್ದಾರೆ. ಆದರೆ, ವಾಯುಪಡೆ ನಡೆಸುತ್ತಿರುವ ನ್ಯಾಯಾಲಯದ ವಿಚಾರಣೆ ಬಳಿಕವಷ್ಟೇ ಸತ್ಯ ಏನೆಂದು ತಿಳಿಯಲಿದೆ. ಹೀಗಿರುವಾ, ಹವಾಮಾನ ತಜ್ಞರು ಅಪಘಾತಕ್ಕೆ ಕೆಟ್ಟ ಹವಾಮಾನ ಕಾರಣ ಎಂದೇ ಹೇಳುತ್ತಿದ್ದಾರೆ.
ನೀಲಗಿರಿ ಶ್ರೇಣಿಯ ಹವಾಮಾನವು ಅತ್ಯಂತ ಕೆಟ್ಟದಾಗಿತ್ತು
ಹವಾಮಾನ ತಜ್ಞರ ಮಾತುಗಳನ್ನು ಕೇಳುವುದಾದರೆ, ಘಟನೆಯ ಸಮಯದಲ್ಲಿ ನೀಲಗಿರಿ ಶ್ರೇಣಿಯ ಹವಾಮಾನವು ಹೆಲಿಕಾಪ್ಟರ್ ಹಾರಾಟಕ್ಕೆ ಉತ್ತಮವಾಗಿರಲಿಲ್ಲ. ಹೆಲಿಕಾಪ್ಟರ್ ಬಿದ್ದ ಪರ್ವತವು ಅನೇಕ ಗಂಭೀರ ಅಡಚಣೆಗಳ, ಅಪಾಯಗಳ ಕೋಟೆಯಾಗಿದೆ.
ಅಲ್ಲಿನ ವಾತಾವರಣ ಹೇಗಿತ್ತು ಗೊತ್ತಾ?
ಡಿಸೆಂಬರ್ 8 ರಂದು ಮಧ್ಯಾಹ್ನ ತಮಿಳುನಾಡಿನ ಕೂನೂರಿನಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಯಿತು ಎಂಬುವುದು ಉಲ್ಲೇಖನೀಯ. ಹೆಲಿಕಾಪ್ಟರ್ ಅಪಘಾತಕ್ಕೀಡಾದ ಸ್ಥಳವು ಆಗ್ನೇಯ ಇಳಿಜಾರಿನಲ್ಲಿದೆ, ನೀಲಗಿರಿ ಪರ್ವತಗಳ ಮೇಲ್ಭಾಗದಿಂದ ಸುಮಾರು 2,630 ಮೀಟರ್ ಎತ್ತರದಲ್ಲಿದೆ. ತಾಪಮಾನ ಏರಿಕೆಯ ಸನ್ನಿವೇಶದಿಂದಾಗಿ ಟ್ರೋಪೋಸ್ಪಿಯರ್‌ನಲ್ಲಿ ಲಂಬವಾದ ಗಾಳಿ ಬೀಸುತ್ತಿದೆ ಎಂದು ಹವಾಮಾನಶಾಸ್ತ್ರಜ್ಞರ ಹೇಳಿಕೆಯಾಗಿದೆ. ಅಂದರೆ ಮೇಲಿನಿಂದ ಕೆಳಕ್ಕೆ ಗಾಳಿ ಬೀಸುತ್ತದೆ. ಮಧ್ಯ-ಟ್ರೋಪೋಸ್ಪಿಯರ್ ಮಟ್ಟದಲ್ಲಿ ಅವು ವಿಶೇಷವಾಗಿ ಅಪಾಯಕಾರಿ. ಅಂದರೆ, ಅವುಗಳ ಹರಿವಿನ ಸಮತೋಲನವು ಹದಗೆಡುತ್ತದೆ. ಈ ಗಾಳಿ ಪ್ರತಿ ಗಂಟೆಗೆ ಬದಲಾಗುತ್ತವೆ. ಅಂದರೆ, ಮುಂದೆ ಏನಾಗುತ್ತದೆ ಎಂದು ಹವಾಮಾನ ಮುನ್ಸೂಚನೆಯಿಂದ ಕಂಡು ಹಿಡಿಯಲು ಸಾಧ್ಯವಿಲ್ಲ? ಟ್ರೋಪೋಸ್ಪಿಯರ್ ಭೂಮಿಯ ವಾತಾವರಣದ ಅತ್ಯಂತ ಕಡಿಮೆ ಭಾಗವಾಗಿದೆ ಎಂಬುವುದು ಗಮನಾರ್ಹ.
ಗಾಳಿ ಹೇಗಿತ್ತು ನೋಡಿ
ದುರಂತದ ಸಂದರ್ಭದಲ್ಲಿ ಗಾಳಿಯ ವೇಗ ಎಷ್ಟಿತ್ತು ಎಂದು, Null Group ಹೊರತೆಗೆಯಲಾದ ಡೇಟಾವನ್ನು ನೋಡುವ ಮೂಲಕ ಇದನ್ನು ನಿರ್ಣಯಿಸಲಾಗುತ್ತದೆ.
ಮೇಲ್ಮೈ ವಾತಾವರಣ
* ಗಾಳಿಯ ವೇಗ: 6 ಕಿಮೀ / ಗಂಟೆಗೆ
* ಗಾಳಿಯ ದಿಕ್ಕು: 90 ಡಿಗ್ರಿ
850 HPA (ನೆಲದಿಂದ 1.5 ಕಿಮೀ)
* ಗಾಳಿಯ ವೇಗ: 8km/h
* ಗಾಳಿಯ ದಿಕ್ಕು: 70 ಡಿಗ್ರಿ
700 HPA (ನೆಲದಿಂದ 3.5 ಕಿಮೀ)
* ಗಾಳಿಯ ವೇಗ: 6 ಕಿಮೀ / ಗಂ
* ಗಾಳಿಯ ದಿಕ್ಕು: 140 ಡಿಗ್ರಿ
500 HPA (ನೆಲದಿಂದ 5 ಕಿಮೀ)
* ಗಾಳಿಯ ವೇಗ: 16km/h
* ಗಾಳಿಯ ದಿಕ್ಕು: 90 ಡಿಗ್ರಿ
250 HPA (ನೆಲದಿಂದ 10.5 ಕಿಮೀ)
* ಗಾಳಿಯ ವೇಗ: 40km/h
* ಗಾಳಿಯ ದಿಕ್ಕು: 245 ಡಿಗ್ರಿ
70 HPA (ನೆಲದಿಂದ 17.5 ಕಿಮೀ: ಟ್ರೋಪೋಪಾಸ್ ಮಟ್ಟ)
* ಗಾಳಿಯ ವೇಗ: 32km/h
* ಗಾಳಿಯ ದಿಕ್ಕು: 65 ಡಿಗ್ರಿ
(ಭೂಮಿಯ ವಾತಾವರಣವು ಮೇಲ್ಮೈ ಮೇಲೆ ಒತ್ತಡವನ್ನು ಬೀರುತ್ತದೆ. ಒತ್ತಡವನ್ನು ಹೆಕ್ಟೋಪಾಸ್ಕಲ್ಸ್ (hPa) ನಲ್ಲಿ ಅಳೆಯಲಾಗುತ್ತದೆ, ಇದನ್ನು ಮಿಲಿಬಾರ್‌ಗಳು ಎಂದೂ ಕರೆಯುತ್ತಾರೆ)
ಅಪಘಾತದ ಸಮಯದಲ್ಲಿ, ನೀಲಗಿರಿ ಶ್ರೇಣಿಯು ಸುಮಾರು 700 hPa ಎತ್ತರದಲ್ಲಿ 0.5 ರಿಂದ 2 ಜೂಲ್/ಕೆಜಿ ಒಳಗೆ ಗಾಳಿಯನ್ನು ಸೆಳೆಯುತ್ತಿತ್ತು. ಜೌಲ್ಸ್ ಗಾಳಿಯ ನಿರ್ದಿಷ್ಟ ಶಕ್ತಿಯ ಮಾಪನದ ಘಟಕವಾಗಿದೆ. ಸಾಪೇಕ್ಷ ಆರ್ದ್ರತೆಯು 850 hPa ಮಟ್ಟದಲ್ಲಿ ನೆಲದಿಂದ 1.5 ಕಿಮೀ ಎತ್ತರದಲ್ಲಿ ಶೇ 90 ರಷ್ಟಿತ್ತು. ಅಂದರೆ ಎಲ್ಲಿ ಗಾಳಿ ದಟ್ಟವಾಗಿರುತ್ತದೆಯೋ ಅಲ್ಲಿ ಹಾರಾಡುವ ವಸ್ತುಗಳಿಗೆ ತೊಂದರೆಯಾಗುತ್ತದೆ. ಆಗ ಹಾರಲು ಸಾಧ್ಯವಿಲ್ಲ.
ರಾಜನಾಥ್ ಸಿಂಗ್ ಮಾತು
ಜನರಲ್ ಬಿಪಿನ್ ರಾವತ್ ಅವರು ತಮಿಳುನಾಡಿನ ವೆಲ್ಲಿಂಗ್ಟನ್ ಪ್ರವಾಸಕ್ಕೆ ತೆರಳುತ್ತಿತ್ತಿದ್ದರು ರಾಜನಾಥ್ ಸದನಕ್ಕೆ ತಿಳಿಸಿದ್ದಾರೆ. ವಾಯುಪಡೆಯ Mi-17 V5 ಹೆಲಿಕಾಪ್ಟರ್ ನಿನ್ನೆ 11:48 ಗಂಟೆಗೆ ಸೂಲೂರು ವಾಯುನೆಲೆಯಿಂದ ಟೇಕ್ ಆಫ್ ಆಗಿತ್ತು. ಇದು ವೆಲ್ಲಿಂಗ್ಟನ್‌ನಲ್ಲಿ 12:15 ಕ್ಕೆ ಇಳಿಯಬೇಕಿತ್ತು, ಆದರೆ ಸೂಲೂರ್ ಏರ್ ಬೇಸ್‌ನಲ್ಲಿರುವ ಏರ್ ಟ್ರಾಫಿಕ್ ಕಂಟ್ರೋಲ್ 12:08 ಕ್ಕೆ ಹೆಲಿಕಾಪ್ಟರ್‌ನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತು. ಸ್ವಲ್ಪ ಸಮಯದ ನಂತರ ಕುನ್ನೂರು ಸಮೀಪದ ಕಾಡಿನಲ್ಲಿ ಕೆಲವು ಸ್ಥಳೀಯರು ಹೆಲಿಕಾಪ್ಟರ್‌ನ ಅವಶೇಷಗಳನ್ನು ನೋಡಿದರು. ಸ್ಥಳೀಯ ಆಡಳಿತದ ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿತು ಮತ್ತು ಸುಟ್ಟ ಜನರನ್ನು ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ಯಿತು. ಆದರೆ ಹೆಲಿಕಾಪ್ಟರ್‌ನಲ್ಲಿದ್ದ ಒಟ್ಟು 14 ಜನರ ಪೈಕಿ 13 ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್, ಅವರ ಪತ್ನಿ, ಸಿಡಿಎಸ್‌ನ ಸಲಹೆಗಾರರು, ಭದ್ರತಾ ತಂಡದ ಸದಸ್ಯರು ಮತ್ತು ವಾಯುಪಡೆಯ ಸಿಬ್ಬಂದಿ ಸೇರಿದ್ದಾರೆ.