* ಲಾಲೂ ಯಾದವ್ ಪುತ್ರ ತೇಜಸ್ವಿ ಮದುವೆ
* ಬಾಲ್ಯದ ಗೆಳತಿ ರಚೆಲ್ ಅವರನ್ನು ತೇಜಸ್ವಿ ವಿವಾಹ
* ಈಕೆಗಾಗಿ 44 ಸಾವಿರ ಸಂಬಂಧಗಳನ್ನು ತಿರಸ್ಕರಿಸಿದ್ದ ತೇಜಸ್ವಿ
ಲಕ್ನೋ(ಡಿ.10): ರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರ ಪುತ್ರ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಮದುವೆ ಗುರುವಾರ ದೆಹಲಿಯಲ್ಲಿ ನೆರವೇರಿತು. ಹರ್ಯಾಣ ಮೂಲದ ಉದ್ಯಮಿಯ ಪುತ್ರಿ, ಬಾಲ್ಯದ ಗೆಳತಿ ರಚೆಲ್ ಅವರನ್ನು ತೇಜಸ್ವಿ ವಿವಾಹವಾಗಿದ್ದಾರೆ. ಹಲಿಯ ಸೈನಿಕ್ ಫಾಮ್‌ರ್‍ನಲ್ಲಿ ಅತ್ಯಂತ ಬಿಗಿ ಭದ್ರತೆಯಲ್ಲಿ ಹಾಗೂ ಖಾಸಗಿಯಾಗಿ ನಡೆದ ಮದುವೆ ಕಾರ್ಯಕ್ರಮಕ್ಕೆ ಕನಿಷ್ಠ ಸಂಖ್ಯೆಯ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಈ ಸಮಾರಂಭದಲ್ಲಿ ಕುಟುಂಬದವನ್ನು ಹೊರತು ಪಡಿಸಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮಾತ್ರ ಭಾಗವಹಿಸಿದ್ದರು. ಮದುವೆಯ ಫೋಟೋಗಳು ವೈರಲ್ ಆಗುತ್ತಿದ್ದಂತೆ ಪಟನಾದಲ್ಲಿ ಲಾಲು ಅವರ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಎಲ್ಲರಿಗೂ ತೇಜಸ್ವಿ ವಧು ಯಾರೆಂದು ತಿಳಿಯುವ ಕುತೂಹಲ
ನಿಜವಾಗಿ, ತೇಜಸ್ವಿಯ ವಧು ಆಗಲಿರುವ ಹುಡುಗಿ ಯಾರು ಎಂದು ಲಕ್ಷಾಂತರ ಜನರು ಗೂಗಲ್‌ನಲ್ಲಿ ಹುಡುಕಾಡಿದ್ದಾರೆ. ಲಾಲು ಅವರ ಮಗ ಯಾರಿಗೆ ತನ್ನ ಹೃದಯವನ್ನು ಕೊಟ್ಟಿದ್ದಾನೆ ಎಂಬುವುದೇ ಈ ಹುಡುಕಾಟಕ್ಕೆ ಕಾರಣವಾಗಿತ್ತು.
ಸರ್ಕಾರಿ ವೆಬ್‌ಸೈಟ್‌ನಲ್ಲಿ ಹುಡುಗಿಯರ ಲೈನ್
ತೇಜಸ್ವಿ ಯಾದವ್ ಅವರ ಮದುವೆಯ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಚರ್ಚೆ ನಡೆಯುತ್ತಿದೆ ಎಂಬುವುದು ಉಲ್ಲೇಖನೀಯ. ಅವರು ರಾಜಕೀಯಕ್ಕೆ ಬಂದಾಗ ಅವರಿಗೆ ಸಂಬಂಧಗಳು ಬರಲಾರಂಭಿಸಿದವು. ಈ ಮಧ್ಯೆ ಅವರು ಬಿಹಾರದಲ್ಲಿ ಉಪಮುಖ್ಯಮಂತ್ರಿಯಾದಾಗ ಹೆಣ್ಣುಮಕಕ್ಕಳು ಅವರನ್ನು ಮದುವರಯಾಗಲು ಪೈಪೋಟಿಗಿಳಿದಿದ್ದರು. ಅಲ್ಲದೇ ಸರ್ಕಾರಿ ವೆಬ್‌ಸೈಟ್‌ನಲ್ಲಿ ಹೆಣ್ಣುಮಕ್ಕಳ ಸಂಬಂಧಗಳೂ ಹರಿದು ಬಂದಿದ್ದವು.
ತೇಜಸ್ವಿಯವರಿಗೆ ಬಂದಿತ್ತು 44,000 ಪ್ರೊಪೋಸಲ್ಸ್
ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತೇಜಸ್ವಿ ಅವರು ತಮ್ಮ ವಾಟ್ಸಾಪ್ ನಂಬರ್ ಒಂದನ್ನು ಸರ್ಕಾರಿ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದ್ದರು. ಇದರಿಂದ ಜನರು ತಮ್ಮ ಸಮಸ್ಯೆಗಳನ್ನು ಫೋಟೋಗಳೊಂದಿಗೆ ಹಂಚಿಕೊಳ್ಳುವಂತೆ ತಿಳಿಸಿದ್ದರು. ಆದರೆ ಜನರು ಮದುವೆಗೆಯಾಗುವಂತೆ ಕೇಳಿ ತಮ್ಮ ಹೆಣ್ಣು ಮಕ್ಕಳ ಫೋಟೋ ಹಾಕಲು ಶುರು ಮಾಡಿದರು. ಇದರಲ್ಲಿ ಕುಟುಂಬದ ಎಲ್ಲಾ ವಿವರಗಳು ಸೇರಿದಂತೆ ಜಾತಕವನ್ನೂ ಕಳುಹಿಸುತ್ತಿದ್ದರು. ಸರ್ಕಾರದ ಅಂಕಿಅಂಶಗಳ ಪ್ರಕಾರ, ಸುಮಾರು 44,000 ಹುಡುಗಿಯರ ಸಂಬಂಧಗಳು ಈ ವಾಟ್ಸಾಪ್ ಸಂಖ್ಯೆಗೆ ಮದುವೆಯಾಗುವಂತೆ ಕೋರಿ ಬಂದಿದ್ದವು. ಎಲ್ಲರೂ ತೇಜಸ್ವಿಯನ್ನು ತಮ್ಮ ಅಳಿಯನನ್ನಾಗಿ ಮಾಡಲು ಬಯಸಿದ್ದರು.
ತೇಜಸ್ವಿ ವಧು ಹರಿಯಾಣದ ಬೆಡಗಿ
ಲಾಲು ಅವರ ಕಿರಿಯ ಸೊಸೆ ಮೂಲತಃ ಹರಿಯಾಣದವರು. ಅವರ ಭಾವಿ ಸೊಸೆ ಕ್ರಿಶ್ಚಿಯನ್ ಕುಟುಂಬದಿಂದ ಬಂದವರು ಎಂದು ಕೂಡ ಚರ್ಚಿಸಲಾಗಿದೆ. ಆದರೆ, ಇದೆಲ್ಲವೂ ಅಧಿಕೃತವಾಗಿ ಇನ್ನೂ ದೃಢಪಟ್ಟಿಲ್ಲ.
ತೇಜಸ್ವಿ ಬಗ್ಗೆ ಕೆಲ ಮಾಹಿತಿ
ಲಾಲು ಯಾದವ್ ಅವರಿಗೆ 7 ಪುತ್ರಿಯರು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ತೇಜಸ್ವಿ ಯಾದವ್ (32 ವರ್ಷ) ಅತ್ಯಂತ ಕಿರಿಯ. ಆದಾಗ್ಯೂ, ತೇಜಸ್ವಿ ಅವರನ್ನು ಲಾಲು ಯಾದವ್ ಅವರ ರಾಜಕೀಯ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿದೆ. ಲಾಲು ಅನುಪಸ್ಥಿತಿಯಲ್ಲಿ ಪಕ್ಷಕ್ಕೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಿದ್ದಾರೆ. ಸದ್ಯ ತೇಜಸ್ವಿ ಬಿಹಾರದ ವಿರೋಧ ಪಕ್ಷದ ನಾಯಕನೂ ಆಗಿದ್ದಾರೆ. ತೇಜಸ್ವಿ ರಾಘೋಪುರ ಕ್ಷೇತ್ರದಿಂದ ಶಾಸಕರಾಗಿದ್ದಾರೆ ಮತ್ತು 2015 ರಿಂದ 2017 ರವರೆಗೆ ಬಿಹಾರದ ಉಪ ಮುಖ್ಯಮಂತ್ರಿಯಾಗಿದ್ದಾರೆ. ತೇಜಸ್ವಿ ಅವರು ಕ್ರಿಕೆಟ್ ಕ್ಷೇತ್ರದಲ್ಲೂ ಸಾಧನೆ ಮಾಡಲು ಪ್ರಯತ್ನಿಸಿದ್ದಾರೆ. ಅವರು ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿ ಆಡಿದ್ದಾರೆ. ಅಲ್ಲದೇ ಜಾರ್ಖಂಡ್ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು
ಹಿರಿಯ ಸಹೋದರ ತೇಜ್ ಪ್ರತಾಪ್ ವಿಚ್ಛೇದನ ಪಡೆದರು
ತೇಜಸ್ವಿಯವರ ಹಿರಿಯ ಸಹೋದರ ತೇಜ್ ಪ್ರತಾಪ್ 2018 ರಲ್ಲಿ ವಿವಾಹವಾಗಿದ್ದರು. ಅವರು ದರೋಗಾ ರೈ ಅವರ ಮೊಮ್ಮಗಳು ಮತ್ತು ಚಂದ್ರಿಕಾ ರೈ ಅವರ ಮಗಳು ಐಶ್ವರ್ಯಾ ರೈ ಅವರನ್ನು ವಿವಾಹವಾದರು. ಆದರೆ ಮದುವೆಯಾದ ಕೆಲವು ತಿಂಗಳ ನಂತರ ತೇಜ್ ಪ್ರತಾಪ್ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ತೇಜ್ ಪ್ರತಾಪ್ ಮತ್ತು ಐಶ್ವರ್ಯಾ ಪರಸ್ಪರ ಗಂಭೀರ ಆರೋಪ ಮಾಡಿದ್ದರು. ಹೈವೋಲ್ಟೇಜ್ ನಾಟಕದ ನಂತರ ಇಬ್ಬರೂ ಈಗ ವಿಚ್ಛೇದನ ಪಡೆದಿದ್ದಾರೆ.