'ನ್ಯಾಷನಲ್​ ಕ್ರಷ್'​ ರಿಷಬ್​ ಸಿಂ​ಗ್​ಗೆ ಇನ್​ಸ್ಟಾದಿಂದ್ಲೇ ಮಾಸಿಕ 3 ಲಕ್ಷ ಆದಾಯ! ಮಾಜಿ ಎಸಿಡಿ ರೋಚಕ ಸ್ಟೋರಿ ಕೇಳಿ

Published : Sep 23, 2026, 09:45 PM IST
Major Rishabh Singh Sambyal

ಸಾರಾಂಶ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಎಡಿಸಿ ಆಗಿದ್ದ ಮೇಜರ್ ರಿಷಬ್ ಸಿಂಗ್ ಸಂಬ್ಯಾಲ್ 12 ವರ್ಷಗಳ ಸೇವೆ ಬಳಿಕ ಅಕಾಲಿಕ ನಿವೃತ್ತಿ ಪಡೆದು ಅಚ್ಚರಿ ಮೂಡಿಸಿದ್ದಾರೆ. ಪ್ರಸ್ತುತ ಇನ್‌ಸ್ಟಾಗ್ರಾಮ್‌ನಲ್ಲಿ ಪೇಯ್ಡ್ ಸಬ್‌ಸ್ಕ್ರಿಪ್ಷನ್ ಮೂಲಕ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುತ್ತಿರುವ ಇವರು, ತಮ್ಮ ನಿವೃತ್ತಿಗೆ ಕೌಟುಂಬಿಕ ಕಾರಣಗಳೇ ಹೊರತು ಮದುವೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಹಾಯಕ (ಎಡಿಸಿ) ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೇಜರ್​ ರಿಷಬ್​ ಸಿಂಗ್ ಸಂಬ್ಯಾಲ್ ನ್ಯಾಷನಲ್​ ಕ್ರಷ್​ ಆದವರು. ಇವರ ರೂಪವಷ್ಟೇ ಅಲ್ಲದೇ, ಇವರ ಕರ್ತವ್ಯ ನಿಷ್ಠೆ, ಇವರು ತೋರುವ ಗೌರವದಿಂದ ಇವರನ್ನು ಲಕ್ಷಾಂತರ ಮಂದಿ ನ್ಯಾಷನಲ್​ ಕ್ರಷ್​ ಎಂದೇ ಹೇಳುತ್ತಿದ್ದಾರೆ. ಆದರೆ ಅವರ ಏಕಾಏಕಿ ರಾಜೀನಾಮ ನೀಡಿ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದರು. ಆದರೆ ಅನೇಕರಿಗೆ ಅಚ್ಚರಿ ಮೂಡಿಸುವಂತೆ, ಅವರು ಕೇವಲ 12 ವರ್ಷಗಳ ಸೇವೆಯ ನಂತರ ಅಕಾಲಿಕ ನಿವೃತ್ತಿ ಪಡೆದರು. ಈ ಸಂದರ್ಭದಲ್ಲಿ ಅವರು, ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳನ್ನು ಭೇಟಿಯಾದ ಚಿತ್ರಗಳನ್ನು ಹಂಚಿಕೊಂಡರು. ಮುಂದೆ ಭರವಸೆಯ ವೃತ್ತಿಜೀವನವನ್ನು ಹೊಂದಿದ್ದ ಅಧಿಕಾರಿಯೊಬ್ಬರು ಸೇವೆಯಿಂದ ಹಿಂದೆ ಸರಿಯಲು ಏಕೆ ನಿರ್ಧರಿಸಿದರು ಎಂದು ಅವರ ಅಭಿಮಾನಿಗಳು ಆಶ್ಚರ್ಯ ಪಡುವಂತೆ ಮಾಡಿತು. ಕೊನೆಗೇ ಅವರೇ ಖುದ್ದು ಲಕ್ಷಾಂತರ ಮಂದಿಯ ಪ್ರಶ್ನೆಗೆ ಲೈವ್​ನಲ್ಲಿ ಬಂದು ಉತ್ತರ ಕೊಟ್ಟರು.

ಅವರು ನಿವೃತ್ತರಾಗುತ್ತಲೇ ಸಿಕ್ಕಾಪಟ್ಟೆ ವೈರಲ್​ ಆಗಿಬಿಟ್ಟರು. ಅಷ್ಟಕ್ಕೂ ಹ್ಯಾಂಡ್​ಸಮ್​ ರಿಷಬ್​, ಕೋಟ್ಯಂತರ ಯುವತಿಯರಿಗೆ ಅಚ್ಚುಮೆಚ್ಚು. ಅದಕ್ಕಾಗಿಯೇ ಹುಚ್ಚೆದ್ದು, ಇವರ ಇನ್​ಸ್ಟಾಗ್ರಾಮ್​ಗೆ ಅವರು ಫಾಲೋವರ್ಸ್​ ಆಗುತ್ತಿದ್ದಾರೆ. ಇದೀಗ ನಿವೃತ್ತ ಮೇಜರ್ ರಿಷಭ್ ಸಿಂಗ್ ಸಂಬ್ಯಾಲ್ ಅವರ ಪಾವತಿಸಿದ ಇನ್‌ಸ್ಟಾಗ್ರಾಮ್ (Payed Instagram) ವಿಷಯವು ಆನ್‌ಲೈನ್ ಚರ್ಚೆಯನ್ನು ಹುಟ್ಟುಹಾಕಿದೆ. 1,500 ಕ್ಕೂ ಹೆಚ್ಚು ಜನರು ಈಗಾಗಲೇ ಅವರ ವಿಶೇಷ ಪೋಸ್ಟ್‌ಗಳಿಗೆ ಚಂದಾದಾರರಾಗಿದ್ದಾರೆ. ಐಫೋನ್ ಬಳಕೆದಾರರಿಗೆ ತಿಂಗಳಿಗೆ 199 ರೂಪಾಯಿ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ 180 ರೂಪಾಯಿ ಶುಲ್ಕವಿರುವ ಹಿನ್ನೆಲೆಯಲ್ಲಿ ತಿಂಗಳಿಗೆ ಪೇಯ್ಡ್​ ಸಬ್​ಸ್ಕ್ರಿಪ್ಷನ್​ನಿಂದ ರಿಷಬ್​ ಅವರು ಸರಿಸುಮಾರು ಮೂರು ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ.

ದಿನದಿಂದ ದಿನಕ್ಕೆ ಅವರಿಗೆ ಪೇಯ್ಡ್​ ಸಬ್​ಸ್ಕ್ರಿಪ್ಷನ್​ ಬರುತ್ತಿರುವುದು, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಅಚ್ಚರಿಗೊಳಿಸಿದೆ. ಇವರ ಇನ್​ಸ್ಟಾಗ್ರಾಮ್​ಗೆ ಹಣ ಪಾವತಿಸಿ ಚಂದಾದಾರರಾದರೆ, ಅಂಥವರಿಗೆ ಬ್ಯಾಡ್ಜ್ ಮತ್ತು ಸಾಮಾಜಿಕ ಚಾನೆಲ್‌ಗಳಿಗೆ ಪ್ರವೇಶ ಸಿಗುತ್ತದೆ. ಅವರು "ನನ್ನನ್ನು ಏನು ಬೇಕಾದರೂ ಕೇಳಿ" (Ask Me Anything)ನಂಥ ಸೆಷನ್ಸ್​ ನಡೆಸುತ್ತಿದ್ದಾರೆ. ಇವೆಲ್ಲ ಆಪ್ಷನ್ಸ್​ ಈ ಚಂದಾದಾರರಿಗೆ ಸಿಗುತ್ತದೆ. ಪ್ರಸ್ತುತ, ಅವರು ಇನ್​ಸ್ಟಾದಲ್ಲಿ ಪಾವತಿಸಿದ ಚಂದಾದಾರರಿಗೆ ಐದು ವಿಶೇಷ ಕಥೆಗಳು ಮತ್ತು ಒಂದು ರೀಲ್ ಲಭ್ಯವಿದೆ.

ನಿವೃತ್ತಿಗೆ ಕಾರಣವೇನು?

ಮೇಜರ್ ರಿಷಬ್​ ಸಿಂಗ್ ಸಂಬ್ಯಾಲ್ ತಮ್ಮ ರಾಜೀನಾಮೆ ನಿರ್ಧಾರವು ವೈಯಕ್ತಿಕ ಮತ್ತು ಕೌಟುಂಬಿಕ ಕಾರಣಗಳಿಂದ ಬೇರೂರಿದೆ ಎಂದು ಹೇಳಿದ್ದಾರೆ. ಅವರ ನಿರ್ಧಾರದ ಮೇಲೆ ಯಾವುದೇ ವೃತ್ತಿಪರ ಅತೃಪ್ತಿ ಪ್ರಭಾವ ಬೀರಿಲ್ಲ ಎಂದು ಸ್ಪಷ್ಟಪಡಿಸಿದರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದು ನನ್ನ ಬಾಲ್ಯದ ಕನಸಾಗಿತ್ತು. ನನ್ನ ವೃತ್ತಿಜೀವನದ ಆರಂಭದಲ್ಲಿ ಸಮವಸ್ತ್ರವನ್ನು ತೆಗೆದುಹಾಕಬೇಕಾಗುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ. ಆದಾಗ್ಯೂ, ಕೆಲವು ಸನ್ನಿವೇಶಗಳು ವ್ಯಕ್ತಿಯ ಪ್ರಯಾಣವನ್ನು ಬದಲಾಯಿಸಬಹುದು. ನನ್ನ ಜೀವನದಲ್ಲಿಯೂ ಹಾಗೆಯೇ ಆಯಿತು ಎಂದಿದ್ದಾರೆ.

ಕೆಲವು ಘಟನೆಗಳು ಕಾರಣ

ನನ್ನ ವೈಯಕ್ತಿಕ ಜೀವನದಲ್ಲಿ ನಡೆದ ಕೆಲವು ಘಟನೆಗಳು ನನ್ನ ನಿರ್ಧಾರಕ್ಕೆ ಕಾರಣವಾಗಿವೆ. ನನ್ನ ಕುಟುಂಬದೊಂದಿಗೆ ಎಚ್ಚರಿಕೆಯಿಂದ ಪರಿಗಣಿಸಿದ ನಂತರ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದಿದ್ದಾರೆ. ಇದೇ ವೇಳೆ ತಮ್ಮ ನಿವೃತ್ತಿಯ ಸುತ್ತಲಿನ ಊಹಾಪೋಹಗಳ ಬಗ್ಗೆಯೂ ಚರ್ಚಿಸಿದ ಅವರು, ನನ್ನ ರಾಜೀನಾಮೆಗೆ ಸಂಭವನೀಯ ಕಾರಣಗಳ ಕುರಿತು ಅನೇಕ ವದಂತಿಗಳು ಮತ್ತು ಊಹಾಪೋಹಗಳು ವೈರಲ್ ಆಗುತ್ತಿವೆ. ಕೆಲವರು ನಾನು ಮದುವೆಯಾಗಲು ರಾಜೀನಾಮೆ ನೀಡಿರುವುದಾಗಿಯೂ ಹೇಳಿದ್ದಾರೆ. ಆದರೆ ಇದ್ಯಾವುದೂ ನಿಜವಲ್ಲ, ಸದ್ಯ ಇಂಥ ಯೋಜನೆ ಇಲ್ಲ ಎಂದಿದ್ದಾರೆ ರಿಷಬ್​. ಒಟ್ಟಾರೆಯಾಗಿ, ರಿಷಬ್​ ಸೇವೆಯಿಂದ ಕೆಳಗಿಳಿಯಲು ಕಾರಣವನ್ನು ಬಹಿರಂಗಪಡಿಸಲಿಲ್ಲ, ಆದರೆ ತಮ್ಮ ಜೀವನದ ಮುಂದಿನ ಅಧ್ಯಾಯದ ಬಗ್ಗೆ ಶೀಘ್ರದಲ್ಲೇ ವಿವರಗಳನ್ನು ಹಂಚಿಕೊಳ್ಳುವುದಾಗಿ ಸುಳಿವು ನೀಡಿದರು. ಅವರು ಇನ್ನು ಮುಂದೆ ಸಕ್ರಿಯ ಸೇವೆಯಲ್ಲಿಲ್ಲದಿದ್ದರೂ, ತಮ್ಮ ರಾಜೀನಾಮೆಯು ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಬಯಕೆಯನ್ನು ಕೊನೆಗೊಳಿಸುವುದಿಲ್ಲ ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶತಾಬ್ದಿ Vs ವಂದೇ ಭಾರತ್ ರೈಲುಗಳ ನಡುವಿನ ವ್ಯತ್ಯಾಸವೇನು? ಟಿಕೆಟ್ ಬುಕ್ ಮಾಡುವ ಮುನ್ನ ಇದನ್ನು ತಿಳಿಯಿರಿ!
ಅನುಕಂಪದ ಆಧಾರದ ಹುದ್ದೆ: ಮರುಮದ್ವೆಯಾದ್ರೂ ಸೊಸೆ ಸಂಬಳದ ಶೇ.25 ಭಾಗ ಅತ್ತೆಗೆ- ಹೈಕೋರ್ಟ್​ ಮಹತ್ವದ ತೀರ್ಪು