ಮೊಘಲ ದೊರೆ ಔರಂಗಜೇಬ್‌ ವಂಶದ ಸದಸ್ಯೆಗೆ ಸರ್ಕಾರದಿಂದ ಸಿಗುವ ಪಿಂಚಣಿ ಎಷ್ಟು?

Mughal emperor Aurangzeb: ಮೊಘಲ್ ದೊರೆ ಔರಂಗಜೇಬ್ ವಂಶದ ಸುಲ್ತಾನಾ ಬೇಗಂ ಸರ್ಕಾರದಿಂದ ಪಿಂಚಣಿ ಪಡೆಯುತ್ತಿದ್ದಾರೆ ಆ ವಂಶಸ್ಥರಿಗೆ ಸರ್ಕಾರದಿಂದ ಸಿಗುವ ಪಿಂಚಣಿ ಎಷ್ಟು ಮತ್ತು ಅವರ ಜೀವನ ಹೇಗಿದೆ ಎಂಬುದರ ಮಾಹಿತಿ ಇಲ್ಲಿದೆ.

How much pension does a member of the Mughal emperor Aurangzeb s family receive mrq

ನವದೆಹಲಿ: ದೇಶದಲ್ಲಿ ಮೊಘಲರ ಆಡಳಿತ ಕೊನೆಯಾಗಿ ಎಷ್ಟೋ ವರ್ಷಗಳು ಕಳೆದವೆ. ಆದ್ರೂ ಮೊಘಲ್ ವಂಶದ ಸದಸ್ಯರು ದೇಶದಲ್ಲಿ ವಾಸವಾಗಿದ್ದಾರೆ. ಔರಂಗಜೇಬ್ ಸಮಾಧಿ ವಿಷಯ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಹಲವು ವಿಚಾರಗಳು ಮುನ್ನಲೆಗೆ ಬರುತ್ತಿವೆ. ಮೊಘಲ್ ಸಾಮ್ರಾಜ್ಯದ ಕೊನೆಯ ರಾಜ ಸಾಮ್ರಾಟ್ ಬಹದ್ದೂರ್ ಶಾ ವಂಶಸ್ಥರು ಭಾರತದಲ್ಲಿಯೇ ವಾಸವಾಗಿದ್ದಾರೆ. ಸಾಮ್ರಾಟ್ ಬಹದ್ದೂರ್ ಶಾ ವಂಶದ ಸದಸ್ಯೆ ಪಡೆಯುವ ಪಿಂಚಣಿ ಎಷ್ಟು ಗೊತ್ತಾ? ಆ ಕುರಿತ ಮಾಹಿತಿ ಇಲ್ಲಿದೆ. 

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಹೌರಾ (howrah kolkata) ನಿವಾಸಿಯಾಗಿರುವ ಸುಲ್ತಾನಾ ಬೇಗಂ ತಮ್ಮನ್ನು ಮೊಘಲ್ ವಂಶಸ್ತೆ ಎಂದು ಹೇಳಿಕೊಳ್ಳುತ್ತಾರೆ. ಸಾಮಾನ್ಯರಂತೆ ಬದುಕು ನಡೆಸುತ್ತಿರುವ ಸುಲ್ತಾನಾ ಬೇಗಂ, ಮೊಘಲ್ ವಂಶದ ಕೊನೆಯ ಚಕ್ರವರ್ತಿ ಸಾಮ್ರಾಟ್ ಬಹದ್ದೂರ್ ಶಾ ಅವರ ಮರಿಮೊಮ್ಮಗನ ಹೆಂಡತಿ ಎಂದು ಹೇಳಿಕೊಳ್ಳುತ್ತಾರೆ. ಚಿಕ್ಕದಾದ ಮನೆಯೊಂದರಲ್ಲಿ ವಾಸವಾಗಿರುವ ಸುಲ್ತಾನಾ ಬೇಗಂ ಸರ್ಕಾರದಿಂದ ದೊರೆಯುವ ಪಿಂಚಣಿಯಿಂದಲೇ ಬದುಕು ನಡೆಸುತ್ತಿದ್ದಾರೆ. 

Latest Videos

ಸುಲ್ತಾನಾ ಬೇಗಂಗೆ ಸಿಗುವ ಪಿಂಚಣಿ ಎಷ್ಟು? 
ಸುಲ್ತಾನಾ ಬೇಗಂ ಪ್ರತಿ ತಿಂಗಳು 6,000 ರೂಪಾಯಿ ಪಿಂಚಣಿಯನ್ನು ಪಡೆದುಕೊಳ್ಳುತ್ತಾರೆ. ಆದ್ರೆ ಈ ಹಣದಿಂದ ಜೀವನ ನಡೆಸೋದು ಕಷ್ಟವಾಗುತ್ತಿದ್ದು, ಪಿಂಚಣಿ ಹಣವನ್ನು 10 ಸಾವಿರ ರೂ.ಗಳಿಗೆ ಹೆಚ್ಚಿಸಬೇಕೆಂದು ಮನವಿ ಮಾಡಿಕೊಳ್ಳುತ್ತಾರೆ. 1960 ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಬಹದ್ದೂರ್ ಶಾ ಜಾಫರ್ ಅವರ ವಂಶಸ್ಥರಿಗೆ ಮಾಸಿಕ 250 ರೂಪಾಯಿ ಪಿಂಚಣಿ ನಿಗದಿಪಡಿಸಿದ್ದರು. ಕಾಲಾನಂತರ ಸರ್ಕಾರಗಳು ಬದಲಾಗುತ್ತಾ ಬಂದವು. ಹಾಗೆ ಈ ಪಿಂಚಣಿ ಹಣವು ಸ್ಪಲ್ಪ ಸ್ವಲ್ಪವೇ ಹೆಚ್ಚಾಗುತ್ತಾ ಬಂದು 6,000 ರೂ.ಗಳಿಗೆ ತಲುಪಿದೆ ಎಂದು ಸುಲ್ತಾನಾ ಬೇಗಂ ಹೇಳುತ್ತಾರೆ.  

ಇದನ್ನೂ ಓದಿ: ಛಾವಣಿ ಇಲ್ಲದ ಔರಂಗಜೇಬ್‌ ಸಮಾಧಿ ಮೇಲೆ ತುಳಸಿ ಗಿಡ ಇರೋದ್ಯಾಕೆ? ಏನಿದು ರಹಸ್ಯ?

ಉತ್ತರ ಪ್ರದೇಶದ ಲಕ್ನೋದಲ್ಲಿ ಜನಿಸಿದ ಸುಲ್ತಾನಾ ಬೇಗಂ ಅವರನ್ನು ಅಜ್ಜಿ ಬಾಲ್ಯದಲ್ಲಿಯೇ ಕೋಲ್ಕತ್ತಾಗೆ ಕರೆದುಕೊಂಡು ಬಂದಿರುತ್ತಾರೆ. ನಂತರ ಸುಲ್ತಾನಾ ಅವರ ಮದುವೆ ಬಹದ್ದೂರ್ ಶಾ ಜಾಫರ್ ಅವರ ಮರಿಮೊಮ್ಮಗ ರಾಜಕುಮಾರ ಮೊಹಮ್ಮದ್ ಮಿರ್ಜಾ ಬೇಡರ್ ಬಖ್ತ್ ಜೊತೆ ನಡೆಯುತ್ತದೆ. ತಮ್ಮ ಕಷ್ಟದ ದಿನಗಳನ್ನು ಹೇಳಿಕೊಳ್ಳುತ್ತಿರುವ ಸಂದರ್ಭದಲ್ಲಿ ಒಂದು ಬಾರಿ ತಾವು  ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿಯಾಗಿರುವ ವಿಚಾರ ಹಂಚಿಕೊಂಡಿದ್ದಾರೆ. ತಮ್ಮ ಪಿಂಚಣಿಯನ್ನು 10,000 ರೂ.ಗಳಷ್ಟು ಹೆಚ್ಚಿಸುವಂತೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ಹೇಳುತ್ತಾರೆ. ಆದ್ರೆ ಈ ಸಂಬಂಧ ಸರ್ಕಾರ ಯಾವ ನಿರ್ಧಾರ ತೆಗೆದುಕೊಂಡಿದೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ.

ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ 
ಮೊಘಲ್‌ ದೊರೆ ಔರಂಗಾಜೇಬ್‌ ಸಮಾಧಿ ತೆರುವ ವಿಷಯ ಸಂಬಂಧ ನಾಗಪುರದಲ್ಲಿ ಗಲಾಟೆ ನಡೆದಿತ್ತು. ಔರಂಗಜೇಬನ ವೈಭವೀಕರಣದ ಯಾವುದೇ ಪ್ರಯತ್ನಗಳನ್ನು ನಾವು ಸಹಿಸುವುದಿಲ್ಲ. ಆತನ ಸಮಾಧಿಯನ್ನು ಕಿತ್ತೆಸೆಯುವ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ನೀಡಿದೆ. ಮಹಾರಾಷ್ಟ್ರ, ಸಂಭಾಜಿ ಮಹಾರಾಜರಿಗೆ ಸೇರಿದ್ದು. ಅವರು ಔರಂಗಜೇಬನಿಂದ ಚಿತ್ರಹಿಂಸೆ ಅನುಭವಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಔರಂಗಜೇಬನ ಯಾವುದೇ ಚಿಹ್ನೆ ಇರಕೂಡದು. ವಿಎಚ್‌ಪಿ ಆತನ ಸಮಾಧಿಯನ್ನು ತೆಗೆದುಹಾಕಲು ನಿರ್ಧರಿಸಿದೆ ಎಂದು ಎಚ್‌ಪಿ ವಿದರ್ಭ ಪ್ರಾಂತ ಸಹ ಮಂತ್ರಿ ದೇವೇಶ್ ಮಿಶ್ರಾ ಹೇಳಿದ್ದಾರೆ.

ಇದನ್ನೂ ಓದಿ: ಔರಂಗಜೇಬ್ ಕ್ರೌರ್ಯಕ್ಕೆ ಸಾಕ್ಷಿ ಬೇಕೆ? ಸಂಭಾಲ್ to ಮಹಾಕುಂಭ ಯೋಗಿ ಉತ್ತರಕ್ಕೆ ತತ್ತರಿಸಿದ ವಿಪಕ್ಷ

The Maratha Empire in 1759
And…
descendants of Aurangzeb Pancharwala’s staying in slums ! pic.twitter.com/2JXeOU1wvJ

— 🚩 Ramesh Shinde 🇮🇳 (@Ramesh_hjs)
vuukle one pixel image
click me!