ಮಹಾರಾಷ್ಟ್ರದ ಸಂಭಾಜಿ ನಗರದಲ್ಲಿರುವ ಔರಂಗಜೇಬ್ ಸಮಾಧಿಯನ್ನು 300 ವರ್ಷಗಳಿಂದ ಒಂದು ಕುಟುಂಬ ನಿರ್ವಹಿಸಿಕೊಂಡು ಬರುತ್ತಿದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಔರಂಗಜೇಬ್ ಹೆಸರು ಭಾರೀ ಚರ್ಚೆಯಲ್ಲಿದೆ. ಈ ಸಂಬಂಧ ಚರ್ಚೆಗಳು ನಡೆಯುತ್ತಿದೆ. ಔರಂಗಜೇಬ್ ಸಮಾಧಿ ಮಹಾರಾಷ್ಟ್ರದ ಸಂಭಾಜಿ ನಗರದಲ್ಲಿದ್ದು, ಇದೇ ವಿಷಯ ಈಗ ವಿವಾದವಾಗಿ ಪರಿಣಮಿಸಿದೆ. ಮಹಾರಾಜ ಸಂಭಾಜಿಯನ್ನು ಔರಂಗಜೇಬ್ ತುಂಬಾ ಚಿತ್ರಹಿಂಸೆ ನೀಡಿ ಕೊಂದನು ಎಂದು ಹೇಳಲಾಗುತ್ತದೆ. ಹಾಗಾಗಿ ಸಂಭಾಜಿನಗರದಲ್ಲಿ ಔರಂಗಜೇಬ್ ಸಮಾಧಿ ಇರೋದು ಬೇಡ ಎಂಬ ಮಾತುಗಳು ಕೇಳಿ ಬರುತ್ತಿವೆ. ಔರಂಗಜೇಬ ಸಮಾಧಿಯನ್ನು ನಾಶಗೊಳಿಸುತ್ತೇವೆ ಎಂಬ ಹೇಳಿಕೆಯನ್ನು ವಿಶ್ವ ಹಿಂದೂ ಪರಿಷದ್ (ವಿಹೆಚ್‌ಪಿ) ನೀಡಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಕುಟುಂಬವೊಂದು ಔರಂಗಜೇಬ್ ಸಮಾಧಿ ಹಾಗೂ ಸುತ್ತಲಿನ ಪ್ರದೇಶವನ್ನು ನಿರ್ವಹಣೆ ಮಾಡಿಕೊಂಡು ಬರುತ್ತಿದೆ.
ಮಹಾರಾಷ್ಟ್ರದ ಔರಂಗಾಬಾದ್ ನಗರದ ಖುಲ್ದಾಬಾದ್ ಎಂಬಲ್ಲಿರುವ ಔರಂಗಜೇಬ್ ಸಮಾಧಿಯ ನಿರ್ವಹಣೆಯನ್ನು 300 ವರ್ಷಗಳಿಂದ ಕುಟುಂಬವೊಂದು ಮಾಡಿಕೊಂಡು ಬರುತ್ತಿದೆ. ಇದೇ ಕುಟುಂಬದ ಪರ್ವೇಜ್ ಅಹ್ಮದ್ ಎಂಬವರು ಮಾತನಾಡಿದ್ದಾರೆ. ಈ ಕುಟುಂಬ ತಲೆತಲಾಂತರಗಳಿಂದ ಸಮಾಧಿಯ ನಿರ್ವಹಣೆಯನ್ನು ಮಾಡಿಕೊಂಡು ಬರುತ್ತಿದೆ. ಆದ್ರೆ ಈ ಕೆಲಸಕ್ಕಾಗಿ ಕುಟುಂಬ ಸದಸ್ಯರು ಸರ್ಕಾರದಿಂದ ವೇತನ ಮತ್ತು ಯಾವುದೇ ಭತ್ಯೆಯನ್ನು ಪಡೆದುಕೊಳ್ಳಲ್ಲ ಎಂದು ಪರ್ವೇಜ್ ಅಹ್ಮದ್ ಹೇಳುತ್ತಾರೆ.
ಔರಂಗಜೇಬ್ ಸಮಾಧಿಯ ನಿರ್ವಹಣೆಗಾಗಿ ತಮ್ಮ ಕುಟುಂಬದ ಸದಸ್ಯರು ಕೇಂದ್ರ ಅಥವಾ ರಾಜ್ಯ ಅಥವಾ ವಕ್ಫ್‌ನಿಂದ ಯಾವುದೇ ಹಣವನ್ನು ಪಡೆದುಕೊಳ್ಳುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಂಬಳದ ಕುರಿತ ಸುದ್ದಿಗಳು ಸತ್ಯಕ್ಕೆ ದೂರವಾದದ್ದು. ಇಷ್ಟು ವರ್ಷಗಳಲ್ಲಿ ಇಲ್ಲಿ ವಾಸಿಸುವ ಜನರಿಗೆ ಇಲ್ಲಿ ವಾಸಿಸಬೇಡಿ ಎಂದು ಹೇಳಲು ಯಾರೂ ಬಂದಿಲ್ಲ. ಈ ಪ್ರದೇಶದಲ್ಲಿ ಯಾವಾಗಲೂ ಶಾಂತಿ ಮತ್ತು ನೆಮ್ಮದಿ ನೆಲೆಸಿದೆ. ಹಬ್ಬ ಹರಿದಿನಗಳಲ್ಲಿ ಮುಸ್ಲಿಂ ಸಮುದಾಯದ ಜನರು ಇಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಆ ಸಮಯದಲ್ಲಿ ಜನಸಂದಣಿ ಹೆಚ್ಚಿರುತ್ತದೆ. ಒಂದು ರೀತಿಯ ಜಾತ್ರೆಯ ವಾತಾವರಣ ನಿರ್ಮಾಣವಾಗಿರುತ್ತದೆ ಎಂದು ಪರ್ವೇಜ್ ಅಹ್ಮದ್ ತಿಳಿಸುತ್ತಾರೆ.
ಔರಂಗಜೇಬ್ ಸಮಾಧಿ ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು ಸಹ ಇಲ್ಲಿಗೆ ಬರಲ್ಲ. ಸಮೀಪದ ಅಜಂತಾ ಮತ್ತು ಎಲ್ಲೋರಾ ಗುಹೆಗಳನ್ನು ನೋಡಲು ಬರುವ ಪ್ರವಾಸಿಗರಲ್ಲಿ ಬೆರಳಣಿಕೆಯಷ್ಟು ಜನರು ಇಲ್ಲಿಗೆ ಬರುತ್ತಾರೆ. ಪ್ರವಾಸಿ ಕೇಂದ್ರವಾಗಿಯೂ ಈ ಸ್ಥಳ ಗುರುತಿಸಿಕೊಂಡಿಲ್ಲ. ಆದ್ರೂ ಕುಟುಂಬದ ಸದಸ್ಯರು 300 ವರ್ಷಗಳಿಂದ ಸಮಾಧಿಯನ್ನು ನಿರ್ವಹಣೆ ಮಾಡಿಕೊಂಡು ಬರುತ್ತಿದೆ ಎಂದು ಪರ್ವೇಜ್ ಅಹ್ಮದ್ ಹೇಳುತ್ತಾರೆ.
ಇದನ್ನೂಓದಿ: 131 ಕೋಟಿಯ ಈ ಸಿನಿಮಾ ಆಯ್ತು ಬಾಕ್ಸ್ ಆಫಿಸ್‌ನ ಮಹಾಫ್ಲಾಪ್; 29 ಹಾಡುಗಳಿದ್ರೂ ಸೋಲು
ಛಾವಾ ಸಿನಿಮಾ ಬಳಿಕ ಈಗ ಔರಂಗಜೇಬನ ಸಮಾಧಿಯನ್ನು ಧ್ವಂಸ ಮಾಡುವ ಮಾತು ಕೇಳಿಬರುತ್ತಿದೆ. ಈ ಸಂಬಂಧ ವಿಶ್ವ ಹಿಂದೂ ಪರಿಷತ್ ಸಮಾಧಿ ಧ್ವಂಸ ಮಾಡೋದಾಗಿ ಹೇಳಿದೆ. ಔರಂಗಜೇಬ್ ಮರಣದ ನಂತರ ಸಂಭಾಜಿನಗರದ ಖುಲ್ದಾಬಾದ್‌ನಲ್ಲಿ ಸಮಾಧಿ ಮಾಡಲಾಯಿತು. ಇಂದಿಗೂ ಈ ಸಮಾಧಿಯನ್ನು ಕಾಣಬಹುದಾಗಿದೆ.
ಇದನ್ನೂ ಓದಿ: ಸೈಕಲ್ ಪಾರ್ಟ್ಸ್ ಮಾರಾಟ ಮಾಡ್ತಿದ್ದ ವ್ಯಕ್ತಿ, 22 ಬಿಲಿಯನ್ ಆಸ್ತಿಯ ಒಡೆಯನಾದ ಕಥೆ!