Aurangzeb Row: ಔರಂಗಜೇಬ್ ಆಸ್ಥಾನದಲ್ಲಿ ಹಿಂದೂಗಳ ಸಂಖ್ಯೆ ಎಷ್ಟಿತ್ತು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಔರಂಗಜೇಬ್ ಆಡಳಿತದಲ್ಲಿ ಹಿಂದೂಗಳ ಪಾತ್ರ ಮತ್ತು ಸಂಖ್ಯೆ ಕುರಿತು ಇತಿಹಾಸಕಾರರು ವಿಶ್ಲೇಷಿಸಿದ್ದಾರೆ.
Aurangzeb tomb controversy: 17ನೇ ಶತಮಾನದ ಮೊಘಲ್ ಚಕ್ರವರ್ತಿ ಔರಂಗಜೇಬ್ ವಿವಾದಾಸ್ಪದ ರಾಜನಾಗಿದ್ದಾನೆ. ಬಾಲಿವುಡ್‌ನ ಛಾವಾ ಸಿನಿಮಾ ಬಳಿಕ ಔರಂಗಜೇಬ್ ವಿಷಯ ಮುನ್ನಲೆಗೆ ಬಂದಿದೆ. ಔರಂಗಾಬಾದ್‌ನಲ್ಲಿರುವ ಔರಂಗಜೇಬ್ ಸಮಾಧಿಯ ತೆರವುಗಳಿಸುವ ಕುರಿತು ಹಿಂದೂ ಸಂಘಟನೆಗಳು ಆಗ್ರಹಿಸುತ್ತಿವೆ. ಮೊಘಲ್ ರಾಜ ಔರಂಗಜೇಬ್ ತನ್ನ ಆಡಳಿತಾವಧಿಯಲ್ಲಿ ಹಿಂದೂಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದ್ದನು ಮತ್ತು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸುತ್ತಿದ್ದನು ಎಂದು ಹೇಳಲಾಗುತ್ತದೆ. ಹಾಗೆ ಸಂಭಾಜಿ ಮಹಾರಾಜರ ದೇಹವನ್ನು ವಿರೂಪಗೊಳಿಸಿ ಹತ್ಯೆಗೈದನು ಎಂದು ಇತಿಹಾಸ ಹೇಳುತ್ತದೆ. ಹಾಗಾಗಿ ಔರಂಗಜೇಬ್‌ನನ್ನು ಮೊಘಲ್ ಚಕ್ರವರ್ತಿಗಳಲ್ಲಿಯೇ ಅತ್ಯಂತ ಕ್ರೂರ ಆಡಳಿತಗಾರ ಎಂದು ಗುರುತಿಸಲಾಗುತ್ತದೆ. ಔರಂಗಜೇಬ್ ಆಡಳಿತಾವಧಿಯಲ್ಲಿ ಮುಸ್ಲಿಮರ ಜೊತೆ ಹಿಂದೂಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದರು.
ಅಲಹಾಬಾದ್ ವಿಶ್ವವಿದ್ಯಾನಿಲಯದ ಮಧ್ಯಕಾಲೀನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಅಖಿಲೇಶ್ ಜೈಸ್ವಾಲ್ ಎಂಬವರು ತಮ್ಮ ‘ಔರಂಗಜೇಬ್ ಮತ್ತು ಹಿಂದೂಗಳೊಂದಿಗೆ ಸಂಬಂಧಗಳು’ ಹೆಸರಿನ ಪುಸ್ತಕದಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಈ ಪುಸ್ತಕದಲ್ಲಿ ಮೊಘಲ್ ದೊರೆ ಔರಂಗಜೇಬ್ ಮೊದಲ ಮತ್ತು ಎರಡನೆಯ ಅಧಿಕಾರಾವಧಿ ವೇಳೆ ಆಸ್ಥಾನದಲ್ಲಿ ಹಿಂದೂಗಳಿದ್ದರು ಎಂದು ಉಲ್ಲೇಖಿಸಿದ್ದಾರೆ.
ಆಸ್ಥಾನದಲ್ಲಿದ್ದ ಹಿಂದೂಗಳ ಸಂಖ್ಯೆ ಎಷ್ಟು?
ಇತಿಹಾಸಕಾರರ ಪ್ರಕಾರ, ಮೊಘಲ್ ದೊರೆ ಔರಂಗಜೇಬ್ ಆಡಳಿತದ ಮೊದಲ ಆಸ್ಥಾನದಲ್ಲಿ (1658 ರಿಂದ 1678ರವರೆಗ) ಒಟ್ಟು 105 ಹಿಂದೂಗಳು ಕೆಲಸ ಮಾಡುತ್ತಿದ್ದರು. ಈ 105ರಲ್ಲಿ 71 ರಜಪೂತ, 27 ಮರಾಠರು ಮತ್ತು 7 ಇತರೆ ಹಿಂದೂ ಸಮುದಾಯದ ಜನರು ಆಸ್ಥಾನದಲ್ಲಿದ್ದರು. ಇನ್ನು ಎರಡನೇ ಆಸ್ಥಾನದಲ್ಲಿ (1679 ರಿಂದ 1707ರವರೆಗೆ) ಹಿಂದೂಗಳ ಸಂಖ್ಯೆ 105ರಿಂದ 182ಕ್ಕೆ ಏರಿಕೆಯಾಗಿತ್ತು. 182ರಲ್ಲಿ 73 ರಜಪೂತರು, 96 ಮರಾಠರು ಮತ್ತು 13 ಇತರೆ ಹಿಂದೂಗಳಿದ್ದರು.
ಮಹಾರಾಷ್ಟ್ರದ ನಾಗ್ಪುರದಲ್ಲಿ ಗಲಾಟೆ
ಮೊಘಲ್ ಸಾಮ್ರಾಜ್ಯದ ಕೊನೆಯ ದೊರೆ ಔರಂಗಜೇಬನ ಸಮಾಧಿಯನ್ನು ತೆರವುಗೊಳಿಸಬೇಕು ಎಂದು ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ದೊಡ್ಡಮಟ್ಟದ ಪ್ರತಿಭಟನೆಗಳು ನಡೆದಿವೆ. ಈ ಪ್ರತಿಭಟನೆ ಎರಡು ಸಮುದಾಯಗಳ ನಡುವಿನ ಗಲಾಟೆಗೆ ತಿರುಗಿತ್ತು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ಗಲಾಟೆಗೆ ಹಲವು ಅಂಗಡಿ, ವಾಹನಗಳು ಮತ್ತು ಸಾರ್ವಜನಿಕ ಆಸ್ತಿಗೆ ಹಾನಿಯುಂಟಾಗಿದೆ. ಈ ಹಿಂಸಾಚಾರ ಸಂಪೂರ್ಣವಾಗಿ ಪ್ಲಾನ್ ಮಾಡಲಾಗಿತ್ತು ಎಂದು ಸಿಎಂ ದೇವೇಂದ್ರ ಫಡ್ನವೀಸ್ ಹೇಳಿಕೆ ನೀಡಿದ್ದಾರೆ.
ಎಲ್ಲಿದೆ ಔರಂಗಜೇಬ್ ಸಮಾಧಿ?
ಮಹಾರಾಷ್ಟ್ರದ ಔರಂಗಾಬಾದ್ ನಗರದ ಖುಲ್ದಾಬಾದ್ ಎಂಬಲ್ಲಿರುವ ಔರಂಗಜೇಬ್ ಸಮಾಧಿಯ ನಿರ್ವಹಣೆಯನ್ನು 300 ವರ್ಷಗಳಿಂದ ಕುಟುಂಬವೊಂದು ಮಾಡಿಕೊಂಡು ಬರುತ್ತಿದೆ. ಈ ಸಮಾಧಿ ನಿರ್ವಹಣೆಗೆ ಯಾವುದೇ ಸಂಭಾವನೆ, ಗೌರವ ಧನವನ್ನು ಪಡೆದುಕೊಳ್ಳುತ್ತಿಲ್ಲ ಎಂದು ಕುಟುಂಬದ ಸದಸ್ಯರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಒವೈಸಿ ಭೇಟಿಗೆ ಗಲಾಟೆ: ಔರಂಗಜೇಬ್ ಸಮಾಧಿ 5 ದಿನಗಳ ಕಾಲ ಬಂದ್