ಕೇಂದ್ರ ಸರ್ಕಾರದ ಕರಷಿ ಮಸೂದೆ/ ಮಸೂದೆಯ ಲಾಭಗಳನ್ನು ತಿಳಿಸಿದ ಸಂಸದ ತೇಜಸ್ವಿ ಸೂರ್ಯ/ ಕಾನೂನು ರೈತ ಪರವಾಗಿದ್ದು ಯಾವುದೇ ಮಾರಕ ಅಂಶ ಇಲ್ಲ/ ಕೆಲ ಪಟ್ಟಭದ್ರಹಿತಾಸಕ್ತಿಗಳ ಮಾತಿಗೆ ರೈತರು ಬಲಿಯಾಗುವುದನ್ನು ತಪ್ಪಿಸಲು ಈ ಕಾನೂನು ತರಲಾಗಿದೆ
ಬೆಂಗಳೂರು(ಡಿ. 22) ರೈತರ ಪ್ರತಿಭಟನೆ ಇಡೀ ದೇಶಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಪರ-ವಿರೋಧದ ಅಭಿಪ್ರಾಯಗಳು ಹರಿದು ಬಂದಿವೆ. ಇದೇ ವಿಚಾರದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ದೇಶ ಬದಲಾಗುತ್ತಿದೆ. ನರೇಂದ್ರ ಮೋದಿಯವರು ಹೇಳುವ ನ್ಯೂ ಇಂಡಿಯಾ ಕಲ್ಪನೆ ಸಾಕಾರವಾಗುತ್ತಿದೆ. ಐಐಟಿಯಲ್ಲಿ ಅಧ್ಯಯನ ಮಾಡಿ ತಮ್ಮ ಸ್ವಂತ ಊರಿಗೆ ತೆರಳಿ ವ್ಯವಸಾಯ ಮಾಡುವುದೇ ಭೂ ಸುಧಾರಣೆ ಕಾಯಿದೆಯ ಸಾರ ಎಂದರು.
undefined
ಹೈದರಾಬಾದಿನಲ್ಲಿ ಗೆಲುವಿನ ರಥ ಎಳೆದ ಸೂರ್ಯ
ರೈತ ಎಂದ ತಕ್ಷಣ ನಮಗೆ ನೆನಪಾಗುವ ಚಿತ್ರವೇ ಬೇರೆ.. ಮಗುವಿಗೆ ರೈತನ ಚಿತ್ರ ಬರೆಯಿರಿ ಎಂದರೆ ಅರ್ಧಂಬರ್ಧ ಬಟ್ಟೆ ಹಾಕಿಕೊಂಡ ರೀತಿ ಬರೆದುಕೊಡುತ್ತದೆ. ಕತೆಗಳು ಶುರುವಾಗುವುದು ಒಂದು ಊರಿನಲ್ಲಿ ಒಬ್ಬ ಬಡ ರೈತ ಇದ್ದ ಎಂದೇ ಶುರುವಾಗುತ್ತದೆ. ರೈತ ಅಂದರೆ ಒಂದು ಸಿದ್ಧ ಸೂತ್ರವನ್ನು.. ಚಿತ್ರವನ್ನು ನಾವೇ ಮಾಡಿಟ್ಟುಕೊಂಡುಬಿಟ್ಟಿದ್ದೇವೆ.
ಇಸ್ಲಾಂ ದಾಳಿಗೂ ಮುನ್ನ ದೇಶದಲ್ಲಿ ದೊಡ್ಡ ದೊಡ್ಡ ಗೋದಾಮುಗಳು ಕಂಡು ಬರುತ್ತಿದ್ದವು. ಭೂ ಸುಧಾರಣೆ ಕಾಯಿದೆ, ಎಪಿಎಂಸಿ ಕಾಯಿದೆ, ಕೃಷಿ ಮಸೂದೆ ತಿದ್ದುಪಡಿ ರೈಥರ ಮೂರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ರೈತರ ಹಿಡುವಳಿ ಸಣ್ಣ ಮತ್ತು ಅತಿ ಸಣ್ಣ,, ಭಾರತದಲ್ಲಿ ಕೃಷಿ ಮುಂಗಾರಿನೊಂದಿಗೆ ಜೂಜಾಟ..ಎಂಥ ಉತ್ಪಾದನೆ ಮಾಡಿದರೂ ದಲ್ಲಾಳಿಗಳ ಕಾರಣಕ್ಕೆ ಉತ್ತಮ ದರ ಸಿಗುತ್ತಿಲ್ಲ. ಇದಕ್ಕೆಲ್ಲ ಪರಿಹಾರ ಎಂಬಂತೆ ಈ ಮೂರು ಕಾನೂನುಗಳು ಬಂದಿವೆ
ಬ್ರಿಟಿಷರ ಕಾಲದ ಕಾನೂನು ತೆಗೆದುಹಾಕುವ ಕೆಲಸ ಆರಂಭಮಾಡಿದ್ದು ಅಟಲ್ ಬಿಹಾರಿ ವಾಜಪೇಯಿ. ಅದಾದ ಮೇಲೆ ಈಗ ನರೇಂದ್ರ ಮೋದಿ ರೈತರಿಗೆ ಸಂಪೂರ್ಣ ಹಕ್ಕು ನೀಡುವ ಕೆಲಸ ಮಾಡಿದ್ದಾರೆ. ಜನರಿಗೆ ತಪ್ಪು ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಸೂರ್ಯ ಹೇಳಿದರು.
ಬದಲಾವಣೆ ತರಲು ಮುಂದಾಗಿರುವುದನ್ನೇ ಮೋಸ ಮಾಡಲಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ. ಅಗ್ರಿಮೆಂಟ್ ಮಾಡಿಕೊಳ್ಳುವುದನ್ನು ಕಾನೂನು ತಿಳಿಸಿಕೊಡುತ್ತದೆ ಎಂದರು.
ಪ್ರತಿ ಎಲೆಕ್ಷನ್ ಬಂದಾಗಲೂ ರೈತರ ಎಷ್ಟು ಸಾವಿರ ಕೋಟಿ ಸಾಲ ಮನ್ನಾ ಆಯಿತು ಎಂದು ಪ್ರಶ್ನೆ ಮಾಡುತ್ತಿದ್ದರು. ಆದರೆ ನರೇಂದ್ರ ಮೋದಿ ಸರ್ಕಾರ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡದೆ ಅವರ ಜೀವನ ಸುಧಾರಿಸುವ ಕೆಲಸ ಮಾಡಿದೆ ಎಂದರು. ಆತ್ಮ ನಿರ್ಭರ ಭಾರತಕ್ಕೆ ಆತ್ಮ ನಿರ್ಭರ ರೈತರನ್ನು ತಯಾರು ಮಾಡುವ ಕೆಲಸ ಮೋದಿ ಅವರಿಂದ ಆಗಿದೆ. ಇದರಲ್ಲಿ ತಪ್ಪು ಹುಡುಕುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ಹುಟ್ಟು ಅಡಗಿಸುವ ಕೆಲಸ ಮಾಡಬೇಕಿದೆ ಎಂದರು.