
ನವ ದೆಹಲಿ(ಏ.13): ಕೊರೋನಾ ಹೆಚ್ಚಾಗುತ್ತಿರುವ ಕಾರಣ ನಿರ್ಬಂಧಗಳು ಅನಿವಾರ್ಯವಾಗಿದೆ. ಆದರೆ ನಿರ್ಬಂಧ ಹೇರುವಲ್ಲಿ ತಾರತಮ್ಯ ಯಾಕೆ ಎಂದು ದೆಹಲಿ ಕೋರ್ಟ್ ಪ್ರಶ್ನಿಸಿದೆ. ರಂಝಾನ್ ಹಿನ್ನಲೆಯಲ್ಲಿ ನಿಜಾಮುದ್ದೀನ್ ಮರ್ಕಜ್‌ನಲ್ಲಿ ನಮಾಜ್ ಮಾಡಲು ಕೇಲ 20 ಮಂದಿಗೆ ಮಾತ್ರ ಅವಕಾಶ ನೀಡಿರುವುದು ಯಾಕೆ? ಇತರ ಧರ್ಮದಲ್ಲಿ ಈ ರೀತಿಯ ನಿರ್ಬಂಧ ಹೇರದೇ ಮರ್ಕಜ್‌ಗೆ ಮಾತ್ರ ಯಾಕೆ ನಿರ್ಬಂಧ ಎಂದು ದೆಹಲಿ ಕೋರ್ಟ್ ಪ್ರಶ್ನಿಸಿದೆ.
ಮಹಾರಾಷ್ಟ್ರದಲ್ಲಿ ಸಂಪೂರ್ಣ ಲಾಕ್‌ಡೌನ್; ಸರ್ಕಾರದಿಂದ ಅಧೀಕೃತ ಘೋಷಣೆ ಸಾಧ್ಯತೆ!
200 ಮಂದಿ ಪಟ್ಟಿಯಲ್ಲಿ 20 ಮಂದಿಗೆ ಅವಕಾಶ ನೀಡಲು ಸೂಚಿಸಲಾಗಿದೆ. ಇತರ ಭಾಗಗಳಿಂದ ಮರ್ಕಜ್‌ಗೆ ಆಗಮಿಸುವ ಕಾರಣ ಹೆಚ್ಚಿನ ನಿರ್ಬಂಧ ಅಗತ್ಯವಿದೆ ಎಂದು ಸರ್ಕಾರ ಹೇಳಿದೆ. ರಂಜಾನ್ ದಿನಗಳಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡಲಾಗಿದೆ. ಆದರೆ ಮಸೀದಿ ಆಡಳಿತ ಮಂಡಳಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂದಿದೆ.
ಮಸೀದಿ ಆಡಳಿತ ಮಂಡಳಿ ಅಧಿಕಾರ ನೀಡಲಾಗಿದೆ. ಕೊರೋನಾ ಮಾರ್ಗಸೂಚಿ ಪಾಲನೆ, ಕೊರೋನಾ ಹರಡದಂತೆ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ನಿರ್ಬಂಧ ವಿಧಿಸಲಾಗಿದೆ. ಒಂದೇ ಬಾರಿ ಒಟ್ಟಿಗೆ ಹೆಚ್ಚಿನ ಮಂದಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿಲ್ಲ. ಇದು ಮರ್ಕಝ್‌ಗೆ ಮಾತ್ರ ಸೀಮಿತವಲ್ಲ ಎಂದು ಸರ್ಕಾರ ಹೇಳಿದೆ.
ಕಳೆದ ವರ್ಷ ಕೊರೋನಾ ವಕ್ಕರಿಸಿದ ಆರಂಭದಲ್ಲಿ ಇದೇ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಭಾರಿ ಸದ್ದು ಮಾಡಿತ್ತು. ಮರ್ಕಜ್‌ನಲ್ಲಿ ಸಭೆ ಸೇರಿದ್ದ ತಬ್ಲೀಘಿಗಳಿಂದ ದೇಶದಲ್ಲಿ ಕೊರೋನಾ ಸಂಖ್ಯೆ ಹೆಚ್ಚಾಗಿದೆ ಅನ್ನೋ ಆರೋಪವೂ ಕೇಳಿಬಂದಿತ್ತು. ನಿರ್ಬಂಧದ ನಡುವೆ 2,000ಕ್ಕೂ ಹೆಚ್ಚು ಮಂದಿ ಸಬೆಯಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ