3 ವರ್ಷದ ಬಾಲಕ ಬ್ರೈನ್‌ ಡೆಡ್‌: ಅಂಗಾಂಗ ದಾನ ಮೂಲಕ ನಾಲ್ವರ ಜೀವ ಉಳಿಸಿದ ಪೋಷಕರು

Published : Jun 24, 2023, 12:00 PM IST
3 ವರ್ಷದ ಬಾಲಕ ಬ್ರೈನ್‌ ಡೆಡ್‌: ಅಂಗಾಂಗ ದಾನ ಮೂಲಕ ನಾಲ್ವರ ಜೀವ ಉಳಿಸಿದ ಪೋಷಕರು

ಸಾರಾಂಶ

ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕನ ಮೇಲೆ ನಿಂತಿದ್ದ ಬೈಕ್‌ ಬಿದ್ದಿದ್ದರಿಂದ ಆತನ ತಲೆಬುರುಡೆಯಲ್ಲಿ ರಕ್ತಸ್ರಾವವಾಗಿದೆ. ಕೂಡಲೇ ಅವನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ವಾಡಿಯಾ ಮಕ್ಕಳ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತಾದರೂ ಬಾಲಕ ಬ್ರೈನ್‌ ಡೆಡ್‌ ಆಗಿದ್ದಾನೆ. 

ಮುಂಬೈ (ಜೂನ್ 24, 2023): ಮುಂಬೈನ ಡೊಂಬಿವಿಲಿಯ ಮೂರು ವರ್ಷದ ಬಾಲಕ ತನ್ನ ಚಿಕ್ಕ ವಯಸ್ಸಿನಲ್ಲೇ ಮೃತಪಟ್ಟಿದ್ರೂ, ಅಂಗಾಂಗ ದಾನ ಮಾಡುವ ಮೂಲಕ ನಾಲ್ಕು ಜನರ ಜೀವವನ್ನು ಉಳಿಸಿದ್ದಾನೆ. ಬ್ರೈನ್ ಡೆಡ್ ಎಂದು ಘೋಷಿಸಿದ ನಂತರ ಬಾಲಕನ ಪೋಷಕರು ಇತರರಿಗೆ ಸಹಾಯ ಮಾಡಲು ನಿರ್ಧರಿಸಿದರು. ಇನ್ನು, ಈ ಬಾಲಕ ಮುಂಬೈನ ಅತ್ಯಂತ ಕಿರಿಯ ದಾನಿಗಳಲ್ಲಿ ಒಬ್ಬ ಎಂದು ವಲಯ ಕಸಿ ಸಮನ್ವಯ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕನ ಮೇಲೆ ನಿಂತಿದ್ದ ಬೈಕ್‌ ಬಿದ್ದಿದ್ದರಿಂದ ಆತನ ತಲೆಬುರುಡೆಯಲ್ಲಿ ರಕ್ತಸ್ರಾವವಾಗಿದೆ. ಕೂಡಲೇ ಅವನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ವಾಡಿಯಾ ಮಕ್ಕಳ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದರೆ, ಬಾಲಕನ ಸ್ಥಿತಿ ತೀರಾ ಹದಗೆಟ್ಟಿತ್ತು ಮತ್ತು ಬ್ರೈನ್ ಡೆಡ್ ಎಂದು ಘೋಷಿಸಲಾಯಿತು. ನಂತರ ಅವರ ಪೋಷಕರು ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ ನಂತರ, ಮೂತ್ರಪಿಂಡಗಳನ್ನು ಕ್ರಮವಾಗಿ ಪರೇಲ್‌ನ ಗ್ಲೋಬಲ್ ಆಸ್ಪತ್ರೆ ಮತ್ತು ಪೆದ್ದಾರ್ ರಸ್ತೆಯ ಜಸ್ಲೋಕ್ ಆಸ್ಪತ್ರೆಯಲ್ಲಿ ಕೊನೆಯ ಹಂತದ ರೋಗಿಗಳಿಗೆ ನೀಡಲಾಯಿತು.

ಇದನ್ನು ಓದಿ: ಮೆಟ್ಟಿಲುಗಳಿಂದ ಕೆಳಗೆ ಬಿದ್ದು ಖ್ಯಾತ ನಟಿ ನಿಧನ: ಅಂಗಾಂಗ ದಾನ ಮಾಡಿದ ಕುಟುಂಬ

ಸ್ಥಳೀಯವಾಗಿ ವಯಸ್ಸಿಗೆ ಅನುಗುಣವಾಗಿ ಸ್ವೀಕರಿಸುವವರು ಲಭ್ಯವಿಲ್ಲದ ಕಾರಣ, ಹೃದಯವನ್ನು ಚೆನ್ನೈಗೆ ಕಳುಹಿಸಲಾಗಿದೆ. ಪೊವೈನಲ್ಲಿರುವ ಎಲ್.ಎಚ್.ಹೀರಾನಂದನಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗೆ ಯಕೃತ್ತನ್ನು ಒದಗಿಸಲಾಗಿದೆ.  ಇನ್ನು, ಈ ಬಗ್ಗೆ ವಾಡಿಯಾ ಆಸ್ಪತ್ರೆಯ ಸಿಇಒ ಮಿನ್ನಿ ಬೋಧನ್ವಾಲಾ ಪೋಷಕರನ್ನು ಶ್ಲಾಘಿಸಿದ್ದು, "ಅವರು ತಮ್ಮ ಊಹಿಸಲಾಗದ ದುಃಖವನ್ನು ಸಹಾನುಭೂತಿ ಮತ್ತು ಉದಾರತೆಯ ಅಸಾಧಾರಣ ಕ್ರಿಯೆಯಾಗಿ ಪರಿವರ್ತಿಸಿದರು, ಅದು ನಮಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತದೆ’’ ಎಂದೂ ಹೇಳಿದ್ದಾರೆ.

ಈ ಮಧ್ಯೆ, ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯ ಹೊಸ ಮಾರ್ಗಸೂಚಿಗಳ ಪ್ರಕಾರ, ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ದಾನಿಯ ದೇಹದ ಸುತ್ತಲೂ ನಿಂತು ನಮಸ್ಕರಿಸಿದರು.

ಇದನ್ನೂ ಓದಿ: ಅಂಗಾಂಗ ದಾನ ಮಾಡಿ: 99ನೇ ಮನ್‌ ಕೀ ಬಾತ್‌ ಭಾಷಣದಲ್ಲಿ ಜನತೆಗೆ ಮೋದಿ ಕರೆ

ಮನ್‌ ಕೀ ಬಾತ್‌ನಲ್ಲಿಅಂಗಾಂಗ ದಾನ ಪ್ರೋತ್ಸಾಹಿಸಿದ್ದ ಮೋದಿ
ಅಂಗಾಂಗ ದಾನದ ಬಗ್ಗೆ ಪ್ರಧಾನಿ ಮೋದಿ ಸಹ ಮಾತನಾಡಿದ್ದಾರೆ. 99ನೇ ಮನ್‌ ಕೀ ಬಾತ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದ ಪ್ರಧಾನಿ, ಅಂಗಾಂಗ ದಾನದಂಥ ಮಾನವೀಯ ಕೆಲಸ ಮಾಡಬೇಕು ಎಂದು ಜನರಲ್ಲಿ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಅಲ್ಲದೇ ‘ಈ ನಿಟ್ಟಿನಲ್ಲಿ ನಮ್ಮ ಏಕರೂಪ ನೀತಿಯನ್ನು ರೂಪಿಸುತ್ತಿದ್ದು, ಅಂಗಾಂಗ ದಾನ ಪ್ರಕ್ರಿಯೆ ಇದರಿಂದ ಸರಳವಾಗಲಿದೆ’ ಎಂದಿದ್ದಾರೆ.

ಭಾನುವಾರ ‘ಮನ್‌ ಕೀ ಬಾತ್‌’ ರೇಡಿಯೋ ಭಾಷಣದ 99ನೇ ಸಂಚಿಕೆಯಲ್ಲಿ ಮಾತನಾಡಿದ ಮೋದಿ, ‘ಮರಣಾನಂತರ ಅಂಗಾಂಗ ದಾನ ಮಾಡುವವರು ಅದನ್ನು ಸ್ವೀಕರಿಸುವವರಿಗೆ ‘ದೇವರ ಸಮಾನ’ ಆಗಿರುತ್ತಾರೆ. ಇತ್ತೀಚೆಗೆ ದೇಶದಲ್ಲಿ ಅಂಗಾಂಗ ದಾನದ ಕುರಿತು ಹೆಚ್ಚಿನ ಜಾಗೃತಿ ಮೂಡಿದ್ದು ತೃಪ್ತಿದಾಯಕವಾಗಿದೆ’ ಎಂದರು. ಅಲ್ಲದೇ ತಮ್ಮ ಮೃತ ಕುಟುಂಬ ಸದಸ್ಯರ ಅಂಗಾಂಗ ದಾನ ಮಾಡುವ ನಿರ್ಧಾರ ಕೈಗೊಂಡ ಕುಟುಂಬಸ್ಥರ ನಿರ್ಧಾರವನ್ನು ಮೋದಿ ಶ್ಲಾಘಿಸಿದರು.

ಇದನ್ನೂ ಓದಿ: ನಿನ್ನಂಥಾ ಮಗಳು ಇಲ್ಲ..ಅಪ್ಪನಿಗೆ ಯಕೃತ್ತು ದಾನ ಮಾಡಿದ 17 ವರ್ಷದ ಮಗಳು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!