ಕುಟುಂಬ ಸಾಲ: ದೇಶದ ಸರಾಸರಿಗಿಂತ ಕರ್ನಾಟಕದ್ದೇ ಹೆಚ್ಚು!

Published : Sep 29, 2021, 07:41 AM ISTUpdated : Sep 29, 2021, 08:00 AM IST
ಕುಟುಂಬ ಸಾಲ: ದೇಶದ ಸರಾಸರಿಗಿಂತ ಕರ್ನಾಟಕದ್ದೇ ಹೆಚ್ಚು!

ಸಾರಾಂಶ

* ಕರ್ನಾಟಕ ಕುಟುಂಬಗಳ ಸಾಲ ದೇಶದ ಸರಾಸರಿಗಿಂತ ಹೆಚ್ಚು * ಗ್ರಾಮೀಣ ಕುಟುಂಬಗಳ ಸಾಲ: ತೆಲಂಗಾಣ ನಂ.1 * ನಗರ ಕುಟುಂಬಗಳ ಸಾಲ: ಕೇರಳ ನಂ.1 * ನಗರ-ಗ್ರಾಮೀಣ ಎರಡೂ ಸೇರಿಸಿದರೆ ಆಂಧ್ರ ನಂ.1, ಕರ್ನಾಟಕ ನಂ.5

ಮುಂಬೈ(ಸೆ.29): ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ರಾಜ್ಯಗಳಲ್ಲಿನ(Southern States) ಕುಟುಂಬಗಳ ಸಾಲ ಹೆಚ್ಚು ಇದೆ ಎಂದು ಸಮೀಕ್ಷೆಯೊಂದು(Survey) ಹೇಳಿದೆ. ಜೊತೆಗೆ ಇಡೀ ದೇಶದ ಸಾಲದ ಸರಾಸರಿಗಿಂತ ಕರ್ನಾಟಕದ(Karnataka) ಕುಟುಂಬಗಳ ಸಾಲದ ಸರಾಸರಿ ಹೆಚ್ಚಿದೆ ಎಂದೂ ಅದು ತಿಳಿಸಿದೆ. 2013ರಿಂದ 2019ರ ನಡುವಿನ ಅಖಿಲ ಭಾರತ ಸಾಲ ಹಾಗೂ ಬಂಡವಾಳ ಸಮೀಕ್ಷೆಯ ದತ್ತಾಂಶ ಆಧರಿಸಿ ‘ಇಂಡಿಯಾ ರೇಟಿಂಗ್ಸ್‌’ ಎಂಬ ಸಂಸ್ಥೆಯು ದತ್ತಾಂಶಗಳನ್ನು ವಿಶ್ಲೇಷಿಸಿದೆ.

ಗ್ರಾಮೀಣ ಭಾಗಗಳಲ್ಲಿ ಗಮನಿಸಿದರೆ ತೆಲಂಗಾಣದ(Telangana) ಶೇ.67 ಕುಟುಂಬಗಳು ಸಾಲ ಹೊಂದಿವೆ. ಅತಿ ಕಡಿಮೆ ಎಂದರೆ ಕೇವಲ ಶೇ.6.6ರಷ್ಟುಕುಟುಂಬಗಳು ನಾಗಾಲ್ಯಾಂಡ್‌ನಲ್ಲಿ(Nagaland) ಸಾಲ ಪಡೆದಿವೆ.

ನಗರ ಪ್ರದೇಶದಲ್ಲಿ ಕೇರಳ(Kerala) ನಂ.1 ಆಗಿದ್ದು, ಅಲ್ಲಿನ ಶೇ.47.8ರಷ್ಟುಕುಟುಂಬಗಳು ಸಾಲ ಹೊಂದಿವೆ. ಮೇಘಾಲಯದಲ್ಲಿ(Meghalaya) ಅತಿ ಕಡಿಮೆ (ಶೇ.5.1) ನಗರ ಕುಟುಂಬಗಳು ಸಾಲ ಮಾಡಿಕೊಂಡಿವೆ.

ದಕ್ಷಿಣ ರಾಜ್ಯಗಳ ಕುಟುಂಬಗಳ ತಲಾದಾಯವು ಇತರ ರಾಜ್ಯಗಳಿಗಿಂತ ಹೆಚ್ಚಿದೆ. ಆದರೆ ಋುಣಭಾರವೂ ಹೆಚ್ಚಿದ್ದು ಗಮನಾರ್ಹ.

ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡನ್ನೂ ಸೇರಿಸಿದರೆ ಅತಿ ಹೆಚ್ಚು ಸಾಲ ಹೊಂದಿದ ಟಾಪ್‌-5 ರಾಜ್ಯಗಳಲ್ಲಿ ಆಂಧ್ರಪ್ರದೇಶ, ಕೇರಳ, ತಮಿಳುನಾಡು ಹಾಗೂ ತೆಲಂಗಾಣ ಇವೆ. 5ನೇ ಸ್ಥಾನದಲ್ಲಿರುವ ಕರ್ನಾಟಕದ ಕುಟುಂಬಗಳ ಸಾಲ ಅಖಿಲ ಭಾರತ ಸರಾಸರಿಗಿಂತ ಹೆಚ್ಚಿದೆ.

ಹಣದ ಅವಶ್ಯಕತೆ ಇದ್ದರೆ ಮಾತ್ರ ಜನರು ಹೆಚ್ಚು ಸಾಲ ಮಾಡಲ್ಲ. ಹೆಚ್ಚು ಸಾಲ ಮರುಪಾವತಿ ಸಾಮರ್ಥ್ಯ ಇದ್ದವರೂ ಹೆಚ್ಚು ಸಾಲ ಮಾಡುತ್ತಾರೆ. ಇದು ಕೂಡ ಸಾಲದ ಪ್ರಮಾಣ ಹೆಚ್ಚಲು ಕಾರಣ ಎಂದು ಅಧ್ಯಯನ ವಿವರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಧಾರ್ಮಿಕ ಪ್ರಾರ್ಥನೆಗೆ ಧ್ವನಿವರ್ಧಕ ಕಡ್ಡಾಯವಲ್ಲ : ಹೈಕೋರ್ಟ್‌
ಭಾರತ ಎಂದಿಗೂ ಶಾಂತಿ ಪರ : ಪುಟಿನ್‌ಗೆ ಮೋದಿ