ಮಾಲೀಕರ ಆಹಾರದಲ್ಲಿ ಮೂತ್ರ ಸೇರಸ್ತಿದ್ದು ಯಾಕೆ ಎಂಬುದರ ಸತ್ಯ ಬಿಚ್ಚಿಟ್ಟ ರೀನಾ? ಕಾರಣ ಕೇಳಿ ಎಲ್ಲರೂ ಶಾಕ್

Published : Oct 16, 2024, 06:58 PM IST
ಮಾಲೀಕರ ಆಹಾರದಲ್ಲಿ ಮೂತ್ರ ಸೇರಸ್ತಿದ್ದು ಯಾಕೆ ಎಂಬುದರ ಸತ್ಯ ಬಿಚ್ಚಿಟ್ಟ ರೀನಾ? ಕಾರಣ ಕೇಳಿ ಎಲ್ಲರೂ ಶಾಕ್

ಸಾರಾಂಶ

ಎಂಟು ವರ್ಷಗಳಿಂದ ಮಾಲೀಕರ ಆಹಾರದಲ್ಲಿ ಮೂತ್ರ ಬೆರೆಸಿದ್ದಕ್ಕಾಗಿ ಮನೆಗೆಲಸದವಳನ್ನು ಬಂಧಿಸಲಾಗಿದೆ. ಮಾಲೀಕರ ಆರೋಗ್ಯ ಸಮಸ್ಯೆಗಳಿಂದಾಗಿ ಅನುಮಾನಗೊಂಡು ಅಡುಗೆಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಈ ಭಯಾನಕ ಸತ್ಯ ಬಯಲಾಗಿದೆ.

ಲಕ್ನೋ: ಎಂಟು ವರ್ಷದಿಂದ ಮಾಲೀಕರಿಗೆ ಮೂತ್ರ ಬೆರೆಸಿದ ಆಹಾರ ತಿನ್ನಿಸಿದ ಆರೋಪದಡಿ ರೀನಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಲೀಕರು ಅಡುಗೆಮನೆಯ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಮನೆಕೆಲಸದಾಕೆ ರೀನಾ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದ್ದು, ತೀವ್ರ  ವಿಚಾರಣೆಗೊಳಪಡಿಸಿದಾಗ ಪೊಲೀಸರ ಮುಂದೆ ಸತ್ಯವನ್ನು ಕಕ್ಕಿದ್ದಾಳೆ. ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಕ್ರಾಸಿಂಗ್ ರಿಪಬ್ಲಿಕ್ ಪ್ರದೇಶದಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯಲ್ಲಿ ಎಂಟು ವರ್ಷಗಳಿಂದ ರೀನಾ ಅಡುಗೆಕೆಲಸ, ಸ್ವಚ್ಚತಾ ಸೇರಿದಂತೆ ಎಲ್ಲಾ ಕೆಲಸಗಳನ್ನು ಮಾಡಿಕೊಂಡಿದ್ದಳು. ರೀನಾ ಶಾಂತಿನಗರದ ನಿವಾಸಿ ಎಂದು ವರದಿಯಾಗಿದೆ. ಮೂತ್ರದಲ್ಲಿ ಹಿಟ್ಟನ್ನು ಕಲಿಸಿ ಅದರಿಂದ ಚಪಾತಿ ಮಾಡಿ ಉದ್ಯಮಿ ಮನೆಮಂದಿಗೆಲ್ಲಾ ತಿನ್ನಿಸುತ್ತಿದ್ದಳು.

ಕಳೆದ ಕೆಲವವು ತಿಂಗಳಿನಿಂದ ಉದ್ಯಮಿ ಹಾಗೂ ಆತನ ಕುಟುಂಬಸ್ಥರು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದರು. ಕೆಲವರಿಗೆ ಲಿವರ್ ಸಮಸ್ಯೆ ಸಹ ಕಾಣಿಸಿಕೊಂಡಿತ್ತು ಎಂದು ವರದಿಯಾಗಿದೆ. ಹಲವು ವೈದ್ಯರನ್ನು ಸಂಪರ್ಕಿಸಿದರೂ ತಮ್ಮ ಕುಟುಂಬಸ್ಥರ ಅನಾರೋಗ್ಯಕ್ಕೆ ಕಾರಣ ಏನು ಎಂದು ತಿಳಿದು ಬಂದಿರಲಿಲ್ಲ. ವೈದ್ಯರೊಬ್ಬರು ನೀವು ಸೇವಿಸುವ ಆಹಾರದಲ್ಲಿಯೇ ವ್ಯತ್ಯಾಸ ಆಗುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅನುಮಾನಗೊಂಡು ಅಡುಗೆಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ  ಅಳವಡಿಸಿದ್ದರು. ಈ ಕ್ಯಾಮೆರಾದಲ್ಲಿ ಮನೆಕೆಲಸದಾಕೆಯ ಹೊಲಸು ಕೆಲಸ ಬೆಳಕಿಗೆ ಬಂದಿತ್ತು.

ಸಿಸಿಟಿವಿ ಕ್ಯಾಮೆರಾದಲ್ಲಿ ರೀನಾ ಪಾತ್ರೆಯೊಂದರಲ್ಲಿ ಮೂತ್ರ ತಂದ ಅದರೊಳಗೆ ಹಿಟ್ಟು ಸೇರಿಸಿ ಕಲಿಸುತ್ತಿರುವ ದೃಶ್ಯಗಳು ಕಂಡು ಬಂದಿವೆ. ಈ ದೃಶ್ಯ ಕಂಡು ಆತಂಕಕ್ಕೊಳಗಾದ ಉದ್ಯಮಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಅಕ್ಟೋಬರ್ 15ರಂದು ಶಾಂತಿನಗರದ ನಿವಾಸಿಯಾಗಿರೋ ರೀನಾಳನ್ನು ಬಂಧಿಸಿದ್ದಾರೆ.

ದೀರ್ಘಕಾಲದವರೆಗೆ ಮಹಿಳೆಯರು ಕನ್ಯೆಯಾಗಿ ಉಳಿದ್ರೆ ಈ ಸಮಸ್ಯೆಗೆ ಒಳಗಾಗುತ್ತಾರೆ!

ಮೂತ್ರ ಸೇರಿಸಿದ್ದು ಯಾಕೆ?
ಆರಂಭದಲ್ಲಿ ತನ್ನದೇನು ತಪ್ಪಿಲ್ಲ ಎಂದು ವಾದಿಸಿದ್ದಳು. ಸಿಸಿಟಿವಿ ದೃಶ್ಯ ತೋರಿಸಿದಾಗ ಸತ್ಯವನ್ನು ರೀನಾ ಒಪ್ಪಿಕೊಂಡಿದ್ದಾಳೆ. ಮನೆಯೊಡತಿ ರೀನಾ ಮೇಲೆ ಸದಾ ಕಣ್ಣಿಡುತ್ತಿದ್ದಳು. ಸಣ್ಣ ಸಣ್ಣ ತಪ್ಪಿಗೂ ಒಡತಿ ಬೈಯ್ಯುತ್ತಿದ್ದಳು. ಹಾಗಾಗಿ ಆಕೆ ಮೇಲಿನ ಕೋಪದಿಂದ ಆಹಾರದಲ್ಲಿ ಮೂತ್ರ ಬೆರೆಸುತ್ತಿದ್ದೆ ಎಂದು ರೀನಾ ಹೇಳಿದ್ದಾಳೆ. ಇಷ್ಟು ಸಣ್ಣ ವಿಷಯಕ್ಕೆ ಕುಟುಂಬ ಸದಸ್ಯರೆಲ್ಲಾ ಜೀವಕ್ಕೆ ಅಪಾಯ ತರುವ ಕೆಲಸವನ್ನು ಮಾಡಿದ ರೀನಾ ಇದೀಗ ಕಂಬಿ ಹಿಂದೆ ಸೇರಿದ್ದಾಳೆ.

ಮಹಿಳೆ ಆಹಾರದಲ್ಲಿ ಮೂತ್ರ ಬೆರೆಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಹಿಳೆಯ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದು ಜನರನ್ನು ಕೊಲ್ಲುವುದಾಗಿದ್ದು, ಆ ಮಹಿಳೆಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಇಷ್ಟು ವರ್ಷ ಇಂತಹ ಆಹಾರ ಸೇವಿಸಿದ ಕುಟುಂಬದವರ ಸ್ಥಿತಿ ಏನಾಗಿರಬಹುದು ಅಂತ ಒಮ್ಮೆ ಯೋಚಿಸಿ. ಮನೆಯಲ್ಲಿ ಕೆಲಸಗಾರರನ್ನು ನೇಮಿಸಿಕೊಳ್ಳುವ ಮುನ್ನ ಮತ್ತು ನೇಮಕ ಮಾಡಿಕೊಂಡ ನಂತರ ಅವರ ಮೇಲೆ ನಿಗಾ ಇರಿಸಬೇಕು ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ. ಮಹಾನಗರಗಳಲ್ಲಿ ದುಡಿಯುವ ದಂಪತಿ ಇಡೀ ಮನೆಯನ್ನ ಮನೆಕೆಲಸದವರ ಮೇಲೆ ಬಿಟ್ಟು ಹೋಗುತ್ತಿರುತ್ತಾರೆ. ಇಂತಹ ಜನರು ತುಂಬಾನೇ ಎಚ್ಚರಿಕೆಯಿಂದಿರಬೇಕಾಗುತ್ತದೆ.

ವಧುವಿನ ಜೊತೆ ಕಾರ್‌ನಲ್ಲಿ ಶುರು ಹಚ್ಕೊಂಡು ವರ; ಮನೆ ತಲುಪೋವರೆಗಾದ್ರೂ ವೇಟ್ ಮಾಡು ಗುರು ಎಂದ ನೆಟ್ಟಿಗರು 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ