ವಯಸ್ಸಾದ ಪೋಷಕರನ್ನು ಮನೆಯಿಂದ ಹೊರದಬ್ಬುವ, ಅನಾಥ ಆಶ್ರಮಕ್ಕೆ ಸೇರಿಸುವ ಘಟನೆಗಳು ನಡೆಯತ್ತಲೇ ಇದೆ. ಹೀಗೆ ಮಾಡಿದ ಮಕ್ಕಳಿಗೆ 80 ಹರೆಯದ ತಂದೆ ಸರಿಯಾಗಿ ಬುದ್ದಿ ಕಲಿಸಿದ್ದಾರೆ.
ಲಖನೌ(ಮಾ.06) ಪೋಷಕರನ್ನು ನೋಡಿಕೊಳ್ಳುತ್ತಿಲ್ಲ, ಆಸ್ತಿ ಹಣ ಕಿತ್ತುಕೊಂಡು ಪೋಷಕರನ್ನು ಮನೆಯಿಂದ ಹೊರದಬ್ಬಿದ ಘಟನೆ, ಮಕ್ಕಳಿದ್ದರೂ ಪೋಷಕರು ಅನಾಥ ಈ ರೀತಿಯ ಘಟನೆಗಳು ವರದಿಯಾಗುತ್ತಲೇ ಇದೆ. ಮಕ್ಕಳನ್ನು ಬೆಳೆಸಿ ಉತ್ತಮ ನೆಲೆ ಕಟ್ಟಿಕೊಡ್ಡ ಬಳಿಕ ಇಳಿವಯಸ್ಸಿನಲ್ಲಿ ತುತ್ತು ಅನ್ನಕ್ಕಾಗಿ, ಬೆಚ್ಚಗೆ ಮಲಗಲು ಪರದಾಡುವ ಅದೆಷ್ಟು ಪೋಷಕರು ಪ್ರತಿ ದಿನ ಕಣ್ಣೀರಿನಿಂದಲೇ ಕೈತೊಳೆಯುತ್ತಿದ್ದಾರೆ. ಉತ್ತರ ಪ್ರದೇಶದ ಮುಝಾಫರ್ ನಗರದಲ್ಲಿ ಘಟನೆ ಇದೀಗ ಬಾರಿ ಚರ್ಚೆಗೆ ಕಾರಣಾಗಿದೆ. ಮಗನನ್ನು ಸಾಕಿ ಬೆಳಿಸಿ ಉತ್ತಮ ಉದ್ಯೋಗ ಗಿಟ್ಟಿಸುವಂತೆ ಮಾಡಿದ್ದಾರೆ. ಇಷ್ಟೇ ಅಲ್ಲ ಮದುವೆಯನ್ನೂ ಮಾಡಿದ್ದಾರೆ.ಆದರೆ ಸೊಸೆ ಹಾಗೂ ಮಗ ತಂದೆಯನ್ನು ನೋಡಿಕೊಳ್ಳುತ್ತಿಲ್ಲ. ಅನಾರೋಗ್ಯ ಕಾರಣ ತಂದೆಗೆ ನೆರವಿನ ಅವಶ್ಯಕತೆ ಇದೆ. ಹೀಗಾಗಿ ತಂದೆಯನ್ನೇ ಮನೆಯಿಂದ ಹೊರದಬ್ಬಿದ್ದಾರೆ. ಇತ್ತ ಮನೆಯಿಂದ ಹೊರಬಿದ್ದ ತಂದೆ ಅನಾಥಾಶ್ರಮ ಸೇರಿಕೊಂಡಿದ್ದಾರೆ. ಇಷ್ಟಕ್ಕೆ ಕತೆ ಮುಗಿದಿಲ್ಲ. ಅನಾಥಾಶ್ರಮ ಸೇರಿಕೊಂಡ ಬೆನ್ನಲ್ಲೇ ತನ್ನ 1.5 ಕೋಟಿ ರೂಪಾಯಿ ಆಸ್ತಿಯನ್ನು ಉತ್ತರ ಪ್ರದೇಶ ರಾಜ್ಯಪಾಲರಿಗೆ ವರ್ಗಾಯಿಸಿದ್ದಾರೆ. ಇದೀಗ ತಂದೆಯ ಈ ನಡೆಯಿಂದ ಮಗ ಹಾಗೂ ಸೊಸೆ ಕೈಕೈಹಿಸುಕಿಕೊಳ್ಳುವಂತಾಗಿದೆ.
ಬಿರಲ್ ಗ್ರಾಮದ ನಾಥು ಸಿಂಗ್ ವಯಸ್ಸು 80. ವಯೋಸಹಜ ಅನಾರೋಗ್ಯ ಕಾಡುತ್ತಿದೆ. ಓಡಾಡಲು ಸೇರಿದಂತೆ ಎಲ್ಲಾ ಕಾರ್ಯಕ್ಕೂ ಇನ್ನೊಬ್ಬರ ನೆರವು ಬೇಕಿದೆ. ಮಗ ಹಾಗೂ ಸೊಸೆ ಇದ್ದರೂ ಇಳಿವಯಸ್ಸಿನ ತಂದೆಯ ಆರೈಕೆ ಮಾಡುತ್ತಿಲ್ಲ. ತಂದೆಯ ಆರೈಕೆ ಮಾಡಲು ಸಾಧ್ಯವಿಲ್ಲ ಎಂದು ಪತ್ನಿ ಹೇಳಿದ್ದಾಳೆ. ಇತ್ತ ವಯಸ್ಸಾದ ತಂದೆಯನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಾಗ್ವಾದ ಜಗಳು ನಡೆದು ಹೋಗಿದೆ.
undefined
ಮಗ ಶ್ರೀಮಂತ ಉದ್ಯಮಿ ಅನ್ನೋದೇ ಪೋಷಕರಿಗೆ ತಿಳಿದಿಲ್ಲ, ಹೇಳಿದರೆ ಬದಲಾಗಲಿದೆ ಚಿತ್ರಣ!
ಸೊಸೆಯ ಕಿರಿಕಿರಿ, ಮಗನ ಮಾತುಗಳು ತಂದೆಯನ್ನು ಮತ್ತಷ್ಟು ಅನಾರೋಗ್ಯ ಪೀಡಿತರಾಗುವಂತೆ ಮಾಡಿದೆ. ಒಂದು ದಿನ ನಡೆದ ಜಗಳದಿಂದ 80 ಹರೆಯದ ತಂದೆಯಿಂದ ಮನೆಯಿಂದ ಹೊರಬರಬೇಕಾಯಿತು. ಬೇರೆ ದಾರಿ ಕಾಣದ ಅನಾಥಶ್ರಮ ಸೇರಿಕೊಂಡಿದ್ದಾರೆ. ಆದರೆ ಕಷ್ಟ ಕಾಲದಲ್ಲಿ ತನ್ನನ್ನು ಆರೈಕೆ ಮಾಡದ ಮಗ ಹಾಗೂ ಸೊಸೆ ವಿರುದ್ಧ ಆಕ್ರೋಶ ಮಡುಗಟ್ಟಿದೆ. ಹೀಗಾಗಿ ನಿರ್ಧಾರವೊಂದನ್ನು ಮಾಡಿದ್ದಾರೆ.
ನಾಥು ಸಿಂಗ್ ತಮ್ಮ 1.5 ಕೋಟಿ ರೂಪಾಯಿ ಆಸ್ತಿಯನ್ನು ಉತ್ತರ ಪ್ರದೇಶದ ರಾಜ್ಯಪಾಲರಿಗೆ ವರ್ಗಾಯಿಸಿದ್ದಾರೆ. ಈ ಕುರಿತು ವಕೀಲರ ಸಂಪರ್ಕಿಸಿ, ರಿಜಿಸ್ಟ್ರೇಶನ್ ಕಚೇರಿಯಲ್ಲಿ ಅಫಿದತ್ ವಿತ್ ಹಾಗೂ ಮರಣಶಾಸನ ಮಾಡಿದ್ದಾರೆ. ತನ್ನ ಮರಣದ ಬಳಿಕ ಈ ಆಸ್ತಿಯಲ್ಲಿ ಶಾಲೆ ಅಥವಾ ಆಸ್ಪತ್ರೆ ಕಟ್ಟಿಸಿ ಎಂದು ಬರೆದಿದ್ದಾರೆ. ಮಜಾಫರ್ ನಗರದಲ್ಲಿರುವ ನಿವೇಶಷನ,ಕೃಷಿ ಭೂಮಿ ಸೇರಿದಂತೆ ಒಟ್ಟು ಮೌಲ್ಯ 1.5 ಕೋಟಿ ರೂಪಾಯಿ ಆಸ್ತಿ ಇದೀಗ ಉತ್ತರ ಪ್ರದೇಶ ರಾಜ್ಯಪಾಲರಿಗೆ ವರ್ಗಾಯಿಸಿದ್ದಾರೆ. ನನ್ನ ಮಗ ಹಾಗೂ ಸೊಸೆ ನನ್ನನ್ನು ಸರಿಯಾಗಿ ನೋಡಿಕೊಂಡಿಲ್ಲ. ನಾನೀನ ಅನಾಥಾಶ್ರಮದಲ್ಲಿ ಇರಬೇಕಾಗಿದೆ.ಹೀಗಾಗಿ ನನ್ನ ಆಸ್ತಿಯನ್ನು ಮಕ್ಕಳಿಗೆ ನೀಡುತ್ತಿಲ್ಲ. ಈ ಆಸ್ತಿ ಸಮಾಜಸೇವೆಗೆ ಬಳಕೆಯಾಗಲಿ ಎಂದು ಬರೆದಿದ್ದಾರೆ.
ಮನೆ ಆಸ್ತಿ ಕಿತ್ಕೊಂಡು ಕ್ಯಾನ್ಸರ್ ಪೀಡಿತ ತಾಯಿಯನ್ನೇ ಹೊರಗಟ್ಟಿದ ಮಗ, ಬುದ್ಧಿಕಲಿಸಿದ ಕರ್ನಾಟಕದ ಡಿಸಿ!
ಇದೀಗ ತಂದೆಯ ಆಸ್ತಿ ಕೈತಪ್ಪಿದೆ ಅನ್ನೋ ವಿಚಾರ ತಿಳಿದ ಮಗ ಹಾಗೂ ಸೊಸೆ ಆಘಾತಕ್ಕೊಳಗಾಗಿದ್ದಾರೆ. ಇತ್ತ ಈ ಆಸ್ತಿಯನ್ನು ಕೋರ್ಟ್ ಮೂಲಕ ಮರಳಿ ಪಡೆಯಲು ಸಾಧ್ಯವೇ ಎಂದು ವಿಚಾರಿಸಿದ್ದಾರೆ. ಆದರೆ ಇತ್ತೀಚೆಗೆ ಕೋರ್ಟ್ ಪೋಷಕರನ್ನು ನೋಡಿಕೊಳ್ಳದ ಮಕ್ಕಳಿಗೆ ಆಸ್ತಿ ಪಾಲಿನ ಕುರಿತು ಮಹತ್ವದ ಆದೇಶ ನೀಡಿದೆ. ಹೀಗಾಗಿ ಕೋರ್ಟ್‌ಗೆ ತೆರಳಿದರೂ ಆಸ್ತಿ ದಕ್ಕುವುದಿಲ್ಲ ಎಂದು ವಕೀಲರು ಸೂಚಿಸಿದ್ದಾರೆ.