
ರಾಂಚಿ(ಏ.20): ಕೊರೋನಾ ವೈರಸ್‌ಗೆ ದೇಶವೇ ತತ್ತರಿಸಿದೆ. ಆಸ್ಪತ್ರೆ ಸಿಗದೆ ಸೋಂಕಿತರು ನರಳಾಡುತ್ತಿದ್ದಾರೆ. ಬೆಡ್ ಸಿಕ್ಕಿದ್ರೆ ಸಾಕು ಅನ್ನೋ ಪರಿಸ್ಥಿತಿ ಎದುರಾಗಿದೆ. ಇನ್ನು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಆಮ್ಲಜನಕ ಕೊರತೆ ಕಾಡುತ್ತಿದೆ. ಇದರ ನಡುವೆ ಕೆಲ ಆಸ್ಪತ್ರೆಗಳು ಇದೇ ಸಂದರ್ಭವನ್ನು ಬಳಸಿಕೊಂಡು ಸೋಂಕಿತರ ಚಿಕಿತ್ಸೆಗೆ ಲಕ್ಷ ಲಕ್ಷ ರೂಪಾಯಿ ಸುಲಿಗೆ ಮಾಡುತ್ತಿರುವ ಹಲವು ಪ್ರಕರಣಗಳು ನಡೆದಿದೆ. ಇದೀಗ ಹೀಗೆ ಸೋಂಕಿತನ 3 ದಿನದ ಚಿಕಿತ್ಸೆಗೆ 1.6 ಲಕ್ಷ ರೂಪಾಯಿ ವಸೂಲಿ ಮಾಡಿ ಕೊನೆಗೆ ಕೈಸುಟ್ಟ ಗೊಂಡ ಘಟನೆ ಜಾರ್ಖಂಡನ್ ರಾಂಚಿಯಲ್ಲಿ ನಡೆದಿದೆ.
ಕೋವಿಡ್‌ಗೆ ಬಲಿಯಾದ 756 ವೈದ್ಯರ ಪೈಕಿ 168 ಜನರಿಗೆ ಮಾತ್ರ ವಿಮೆ ಲಭ್ಯ!.
ಸೋಂಕಿತನ 3 ದಿನದ ಚಿಕಿತ್ಸೆಗೆ 1.6 ಲಕ್ಷ ರೂಪಾಯಿ ವಸೂಲಿ ಮಾಡಿದ ದ್ವಾರಾಕ ಆಸ್ಪತ್ರೆ ಬಿಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆ ಬೆನ್ನಲ್ಲೇ ಜಾರ್ಖಂಡ್ ಆರೋಗ್ಯ ಸಚಿವ ಬನ್ನಾ ಗುಪ್ತ ತನಿಖೆ ಆದೇಶಿಸಿದ್ದರು. ಇತ್ತ ಜಿಲ್ಲಾಧಿಕಾರಿ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ ಅನ್ನೋದು ಅರಿತ ದ್ವಾರಕ ಆಸ್ಪತ್ರೆ ಬಿಲ್ ಮಾಡಿದ 1.6 ಲಕ್ಷ ರೂಪಾಯಿ ಹಣವನ್ನೂ ಹಿಂತಿರುಗಿಸಿದೆ.
ಈ ಘಟನೆ ಬೆಳಕಿಗೆ ಬಂದಿದ್ದು, ಜೆಎಮ್ಎಮ್ MLA ಸಿತಾ ಸೊರೆನ್ ಆಸ್ಪತ್ರೆಗಳ ಸುಲಿಗೆ ದಂಧೆ ಕುರಿತು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ನಲ್ಲಿ ದ್ವಾರಕ ಆಸ್ಪತ್ರೆ 3 ದಿನದ ಚಿಕಿತ್ಸೆಗೆ 1.6 ಲಕ್ಷ ಬಿಲ್ ಮಾಡಿರುವುದನ್ನು ಪೋಸ್ಟ್ ಮಾಡಿದ್ದರು. ಬಳಿಕ ಸರ್ಕಾರ ಈ ಕುರಿತು ಗಮನಹರಿಸಬೇಕು. ಬಡವರು ಚಿಕಿತ್ಸೆ ಪಡೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಬಿಲ್ ಭಾರಿ ಸದ್ದು ಮಾಡಿತ್ತು.
ರಾಹುಲ್ ಗಾಂಧಿಗೆ ಕೊರೋನಾ, ಸಂಪರ್ಕದಲ್ಲಿದ್ದವರು ಟೆಸ್ಟ್ ಮಾಡಿಸಿ ಎಂದು ಮನವಿ!.
ಪೋಸ್ಟ್ ವೈರಲ್ ಆಗತ್ತಿದ್ದಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಈ ಕುರಿತು ಗಮನ ಹರಿಸುವಂತೆ ಆರೋಗ್ಯ ಸಚಿವರಿಗೆ ಸೂಚಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಸಿತಾ ಸೊರೆನ್ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಇಷ್ಟೇ ಅಲ್ಲ ವಸೂಲಿ ದಂಧೆ ಅಂತ್ಯಗೊಳಿಸಲು ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ಇದನ್ನು ಅರಿತ ಆಸ್ಪತ್ರೆ, ತಕ್ಷಣವೇ ಕಟ್ಟಿಸಿಕೊಂಡಿದ್ದ 1.6 ಲಕ್ಷ ರೂಪಾಯಿ ಸಂಪೂರ್ಣ ಹಣ ವಾಪಸ್ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ