ಕಾರಿನ ಮೇಲೆ ವ್ಯಕ್ತಿ ಬಿದ್ದರೂ ನಿಲ್ಲಿಸದೇ 3 ಕಿ.ಮೀ. ಕಾರು ಓಡಿಸಿದ ಚಾಲಕ

Published : May 03, 2023, 01:09 PM IST
ಕಾರಿನ ಮೇಲೆ ವ್ಯಕ್ತಿ ಬಿದ್ದರೂ ನಿಲ್ಲಿಸದೇ 3 ಕಿ.ಮೀ. ಕಾರು ಓಡಿಸಿದ ಚಾಲಕ

ಸಾರಾಂಶ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾನುವಾರ ಭೀಕರ ಅಪಘಾತವೊಂದು ಸಂಭವಿಸಿದೆ. ಇದರ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೆಚ್ಚಿ ಬೀಳಿಸುವಂತಿದೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾನುವಾರ ಭೀಕರ ಅಪಘಾತವೊಂದು ಸಂಭವಿಸಿದೆ. ಇದರ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೆಚ್ಚಿ ಬೀಳಿಸುವಂತಿದೆ. ರಸ್ತೆ ಬದಿ ಇದ್ದ ವ್ಯಕ್ತಿಗಳಿಬ್ಬರಿಗೆ ಕಾರು ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಯುವಕನೋರ್ವ ಮೇಲಕ್ಕೆ ಹಾರಿ ಅಪಘಾತಕ್ಕೀಡಾದ ಕಾರಿನ ಮೇಲೆಯೇ ಬಿದ್ದಿದ್ದಾನೆ. ಆದರೂ ಕಾರು ಚಾಲಕ ಕಾರನ್ನು ನಿಲ್ಲಿಸದೇ ಸುಮಾರು 3 ಕಿಲೋ ಮೀಟರ್‌ನಷ್ಟು ದೂರ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ. ನಂತರ ಕಾರಿನ ಮೇಲಿದ್ದ ಗಾಯಾಳುವನ್ನು ರಸ್ತೆಬದಿ ಇಳಿಸಿ ಪರಾರಿಯಾಗಿದ್ದಾನೆ. 

ಪರಿಣಾಮ ಕಾರಿನ ರೂಫ್ ಮೇಲೆ ಬಿದ್ದಿದ್ದ ಯುವಕ ತೀವ್ರ ಗಾಯಗಳಿಂದಾಗಿ ಪ್ರಾಣ ಬಿಟ್ಟಿದ್ದಾನೆ. ಆತನ ಸಂಬಂಧಿಯೋರ್ವ ಗಂಭೀರ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 

ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ : ಬೈಕ್ ಸವಾರನನ್ನು ಬಲಿ ಪಡೆದ ಲಾರಿ!

ದೆಹಲಿಯ ಅತ್ಯಧಿಕ ಭದ್ರತೆ ಇರುವ  ವಿಐಪಿ ಪ್ರದೇಶದಲ್ಲಿಯೇ ಈ ಅನಾಹುತ ನಡೆದಿದೆ.  ಪ್ರತ್ಯಕ್ಷದರ್ಶಿಯ ಹಾಗೂ ಈ ವಿಡಿಯೋ ರೆಕಾರ್ಡ್ ಮಾಡಿದವರ ಪ್ರಕಾರ, ಕಸ್ತೂರ್‌ಬಾ ಗಾಂಧಿ ಮಾರ್ಗ್ (Kasturba Gandhi Marg) ಹಾಗೂ ಟಾಲ್‌ಸ್ಟಾಯ್ ಮಾರ್ಗ್‌ನ (Tolstoy Marg) ಇಂಟರ್‌ಸೆಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ಕಾರು ಚಾಲಕ ದ್ವಿಚಕ್ರ  ವಾಹನಕ್ಕೆ ಡಿಕ್ಕಿ ಹೊಡೆದಿದೆ.  ಕಾರು ಡಿಕ್ಕಿ ಹೊಡೆದಿದ ಪರಿಣಾಮ  ಮೋಟರ್ ಸೈಕಲ್‌ನಲ್ಲಿದ್ದ ಒಬ್ಬರು ಕೆಲ ಅಡಿಗಳಷ್ಟು ದೂರ ಹೋಗಿ ಬಿದ್ದರೆ ಮತ್ತೊಬ್ಬರು  ಸುಮಾರು ಅಡಿ ಎತ್ತರಕ್ಕೆ ಹಾರಿ ಡಿಕ್ಕಿ ಹೊಡೆದ ಕಾರಿನ ಮೇಲೇಯೇ ಬಿದ್ದಿದ್ದಾರೆ. ಆದರೆ ಗಾಯಾಳು ಕಾರಿನ ಮೇಲೆ ಬಿದ್ದಿದ್ದರೂ ಕಾರು ಚಾಲಕ ವಾಹನ ನಿಲ್ಲಿಸದೇ ಹೋಗಿದ್ದಾನೆ. 

ಪ್ರತ್ಯಕ್ಷದರ್ಶಿ ಮೊಹಮ್ಮದ್ ಬಿಲಾಲ್ (Mohammad Bilal) ಎಂಬುವವರು ಅಪಘಾತದ ನಂತರ  ಪರಾರಿಯಾಗುತ್ತಿರುವ ಕಾರನ್ನು ತಮ್ಮ ಸ್ಕೂಟರ್‌ನಲ್ಲಿ ಹಿಂಬಾಲಿಸಿ  ವಿಡಿಯೋ ಮಾಡಿದ್ದಲ್ಲದೇ ಹಾರ್ನ್ ಮಾಡುವ ಮೂಲಕ ಹಲವು ಬಾರಿ ಕಾರು ಚಾಲಕನ ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ. ಆದರೂ ಕಾರು ಚಾಲಕ ಕಾರು ನಿಲ್ಲಿಸಿಲ್ಲ.  

Divya Bharati: ಸಾವಿನ ಜೊತೆಯೇ ಸುಟ್ಟು ಭಸ್ಮವಾದ ಮುದ್ದು ನಟಿ ಆ ರಹಸ್ಯ!

ಆದರೆ ಮೂರು ಕಿಲೋ ಮೀಟರ್ ಪ್ರಯಾಣಿಸಿದ ನಂತರ ಡೆಲ್ಲಿ ಗೇಟ್‌ ಬಳಿ ಆತನನ್ನು ಎಸೆದು  ಪರಾರಿಯಾಗಿದ್ದಾನೆ. ಪರಿಣಾಮ 30 ವರ್ಷದ ದೀಪಾಂಶು ಗಾಯಗಳಿಂದಾಗಿ ಪ್ರಾಣ ಬಿಟ್ಟರೆ. 20 ವರ್ಷದ ಅವರ ಸಂಬಂಧಿ ಮುಕುಲ್ (Mukul) ಎಂಬುವವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.  ನಂತರ ಆರೋಪಿ ಕಾರು ಚಾಲಕ ಹರ್ನೀತ್ ಸಿಂಗ್ ಚಾವ್ಲಾ (Harneet Singh Chawla) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತದ ವೇಳೆ ಆತನ ಕುಟುಂಬವೂ ಕಾರಿನಲ್ಲಿತ್ತು ಎಂದು ತಿಳಿದು ಬಂದಿದೆ. ಮೃತ ದೀಪಾಂಶು ವರ್ಮಾ (Deepanshu Verma) ಅವರು ಜ್ಯುವೆಲ್ಲರಿ ಶಾಪ್ ಹೊಂದಿದ್ದು, ಪೋಷಕರು ಹಾಗೂ ಸಹೋದರಿಯನ್ನು ಅಗಲಿದ್ದಾರೆ. 

ಅಪಘಾತವನ್ನು ಗಮನಿಸಿದ್ದ ಇಬ್ಬರೂ ಕಾರನ್ನು ನಿಲ್ಲಿಸುವ ಪ್ರಯತ್ನ ಮಾಡಿದರೂ ಆತ ನಿಲ್ಲಿಸದೇ ವೇಗ ತೀವ್ರಗೊಳಿಸಿದ ಕಾರಿನ ಚಾವಣಿ ಮೇಲೆ ಬಿದ್ದಾಗ ಆತ ಜೀವಂತವಿದ್ದ. ಆದರೆ 4 ಕಿಲೋ ಮೀಟರ್ ಪ್ರಯಾಣಿಸಿದ ನಂತರ ಅವರು ಕಾರಿನ ಚಾವಣಿಯಿಂದ ಆತನನ್ನು ಬೀಳಿಸಿ ಹೋಗಿದ್ದಾರೆ. ಇದರಿಂದ ರಸ್ತೆಗೆ ಬಿದ್ದು, ಆತನ ತಲೆಗೆ ಗಂಭೀರ ಗಾಯವಾಗಿ ಆತ ಮೃತಪಟ್ಟಿದ್ದಾನೆ. ಇದೆಲ್ಲವೂ ಉದ್ದೇಶಪೂರ್ವಕವಾಗಿಯೇ ನಡೆದಿದೆ ಎಂದು ದೀಪಾಂಶು ಸಹೋದರಿ ಉನ್ನತಿ ವರ್ಮಾ (Unnati Verma) ಹೇಳಿದ್ದಾರೆ.  ಈ ಅಪರಾಧ ಎಸಗಿದ ಕಾರು ಚಾಲಕನಿಗೆ ಕಠಿಣ ಶಿಕ್ಷೆಯಾಗಬೇಕು. ಆ ಮೂಲಕ ಯಾರೋಬ್ಬರೂ ಈ ರೀತಿ ಮಾಡುವ ಬಗ್ಗೆ ಯೋಚನೆಯನ್ನು ಮಾಡಬಾರದು ಆ ರೀತಿ ಶಿಕ್ಷೆ ನೀಡಬೇಕು ಎಂದು ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು