
ತಿರುವನಂತಪುರಂ: ತನಗೆ ರಾಜಕಾರಣಿಯೊಬ್ಬರು 3 ವರ್ಷದಿಂದ ಅನುಚಿತ ಸಂದೇಶಗಳನ್ನು ಕಳಿಸಿ, ಹೋಟೆಲ್‌ಗೆ ಕರೆಯುತ್ತಿದ್ದ ಬಗ್ಗೆ ನಟಿ ರಿನಿ ಜಾರ್ಜ್ ಆರೋಪಿಸಿದ ಬೆನ್ನಲ್ಲೇ ಕೇರಳ ಕಾಂಗ್ರೆಸ್‌ನ ಯುವ ಘಟಕದ ಅಧ್ಯಕ್ಷ ಸ್ಥಾನ ತೊರೆದಿದ್ದ ಶಾಸಕ ರಾಹುಲ್ ಮಮಕೂಟತಿಲ್, ಇನ್ನೂ ಹಲವು ಹೆಂಗಳೆಯರಿಗೆ ಕಿರುಕುಳ ನೀಡಿರುವುದು ಬಯಲಾಗಿದೆ.
ರಾಹುಲ್‌ರದ್ದು ಎನ್ನಲಾಗುತ್ತಿರುವ ಧ್ವನಿ ಮಹಿಳೆಯೊಬ್ಬರೊಂದಿಗೆ ಕರೆಯಲ್ಲಿ ಮಾತನಾಡಿದ್ದ ಆಡಿಯೋ ಇದೀಗ ವೈರಲ್ ಆಗುತ್ತಿದೆ. ಅದರಲ್ಲಿ ಪುರುಷಧ್ವನಿ, ‘ನಿನ್ನನ್ನು ಕೊಲ್ಲಬೇಕೆಂದುಕೊಂಡರೆ ನನಗೆಷ್ಟು ಸಮಯ ಬೇಕೆಂದುಕೊಂಡಿದ್ದೀಯ’ ಎಂದು ಬೆದರಿಕೆ ಒಡ್ಡುತ್ತಿರುವುದನ್ನು ಕೇಳಬಹುದಾಗಿದೆ.
ಅತ್ತ, ರಿನಿ ಬಳಿಕ ಹನಿ ಭಾಸ್ಕರನ್ ಎಂಬಾಕೆ, ರಾಹುಲ್ ತಮಗೂ ಇನ್‌ಸ್ಟಾಗ್ರಾಂನಲ್ಲಿ ಅಸಭ್ಯ ಸಂದೇಶ ಕಳಿಸುತ್ತಿದ್ದರು ಎಂದಿದ್ದರು. ಇದರ ಬೆನ್ನಲ್ಲೇ, ರಾಹುಲ್ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎಂಬ ಆಗ್ರಹ ತೀವ್ರವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ