ರಸ್ತೆ ಬದಿಯಲ್ಲೇ ತನ್ನ ವಾಸ, ಯಾರೋ ಕೊಟ್ಟ ಆಹಾರವೇ ಭೋಜನ. ಹೀಗಿರುವಾಗ ತನಗೆ ಕೊಟ್ಟ ಆಹಾರ ತಿನ್ನಲು ಆರಂಭಿಸಿದ ಬೆನ್ನಲ್ಲೇ ನಾಯಿ ಮರಿಗಳು ಈತನ ಬಳಿ ಆಗಮಿಸಿದೆ. ಹಸಿವಿನಿಂದ ಬಂದ ನಾಯಿ ಮರಿಗೆ ತನಗೆ ಸಿಕ್ಕ ಅಹಾರವನ್ನೇ ಹಂಚಿದ ನಿರ್ಗತಿಕನ ಹೃದಯ ಸ್ಪರ್ಶಿ ವಿಡಿಯೋ ಇಲ್ಲಿದೆ.
ದಯೆ, ಕರುಣೆ, ಸಹಾಯ, ಮಾನವೀಯತೆಗೆ ಪರ್ಸ್ ದೊಡ್ಡದಾಗಿರಬೇಕಿಲ್ಲ, ಒಳ್ಳೆ ಮನಸ್ಸು ಬೇಕು. ಈ ರೀತಿ ದೊಡ್ಡ ಮನಸ್ಸು, ಅಷ್ಟೇ ಉತ್ತಮ ಹೃದಯ ವೈಶಾಲ್ಯತೆ ಹೊಂದಿದ ನಿರ್ಗತಿಕನ ವಿಡಿಯೋ ಒಂದು ಭಾರಿ ಸದ್ದು ಮಾಡುತ್ತಿದೆ. ಆತನಿಗೆ ಮನೆ ಇಲ್ಲ, ತನ್ನವರು ಎಂದು ಯಾರು ಇಲ್ಲ. ಕೆಲಸ ಮಾಡುವ ಶಕ್ತಿಯೂ ಇಲ್ಲ, ಕೈಯಲ್ಲಿ ಬಿಡಿಗಾಸು ಇಲ್ಲ. ಯಾರೋ ಕೊಟ್ಟ ಆಹಾರವನ್ನೇ ತಿಂದು ದಿನ ದೂಡುತ್ತಿದ್ದಾನೆ. ಹಸಿವಿನಿಂದ ಇದ್ದ ಈ ನಿರ್ಗತಿಕನಿಗೆ ಯಾರೋ ಒಬ್ಬರು ಆಹಾರ ನೀಡಿದ್ದಾರೆ. ಇದನ್ನು ತಿನ್ನಲು ಆರಂಭಿಸುತ್ತಿದ್ದಂತೆ ಬೀದಿಯಲ್ಲಿ ಹಸಿವಿನಿಂದ ಅಲೆದಾಡುತ್ತಿದ್ದ ನಾಯಿ ಮರಿಗಳು ಆಗಮಿಸಿದೆ. ತನ್ನಲ್ಲಿರುವುದೇ ಒಂದು ತುತ್ತು. ಅದರಲ್ಲೂ ನಾಯಿ ಮರಿಗೆ ಹಂಚಿ ತಿಂದ ನಿರ್ಗತಿಕ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ.
ಈ ನಿರ್ಗತಿಕ ರಸ್ತೆ ಬದಿಯಲ್ಲೇ ವಾಸ. ದಾರಿಯಲ್ಲಿ ಸಾಗುವವರು ಬಿಡಿಗಾಸು, ಆಹಾರ ಪೊಟ್ಟಣ ನೀಡುತ್ತಾರೆ. ಇದನ್ನೇ ತಿಂದು ಬದುಕು ಸಾಗಿಸುತ್ತಿರುವ ಈ ನಿರ್ಗತಿಕ ಎಂದಿನಂತೆ ರಸ್ತೆ ಬದಿಯಲ್ಲಿ ಕುಳಿತುಕೊಂಡಿದ್ದಾನೆ. ಈತನ ಪಕ್ಕದಲ್ಲೇ ಬೀದಿ ನಾಯಿಯ ಮರಿಗಳು ಕುಳಿತಿದೆ. ದಾರಿಯಲ್ಲಿ ಸಾಗಿದ ಅಪರಿಚಿತರು ನಿರ್ಗತಿಕನಿಗೆ ಆಹಾರದ ಪೊಟ್ಟಣ ನೀಡಿದ್ದಾರೆ.
ಕಿಮೋಥೆರಪಿಗೊಳಗಾದ ಮಹಿಳೆ ಕೂದಲು ಕಟ್..ತಲೆ ಬೋಳಿಸಿಕೊಂಡು ಸಾಂತ್ವಾನ ಹೇಳಿದ ಸಲೂನ್ ಬಾಯ್!
ಆಹಾರದ ಪೊಟ್ಟಣ ಸಿಗುತ್ತಿದ್ದಂತೆ ಈತನ ಬಳಿಗೆ ಬೀದಿ ನಾಯಿ ಮರಿಗಳು ಆಗಮಿಸಿದೆ. ಆರಂಭದಲ್ಲಿ ಮೂರು ನಾಯಿ ಮರಿಗಳು ಆಗಮಿಸಿ ಈತನ ಪಕ್ಕದಲ್ಲೇ ಕುಳಿತುಕೊಂಡಿದೆ. ಅಷ್ಟೇ ವೇಗದಲ್ಲಿ ಮತ್ತೊಂದು ನಾಯಿ ಮರಿ ಆಗಮಿಸಿದೆ. ನಾಲ್ಕು ನಾಯಿ ಮರಿಗಳು ಈತನ ಮಡಿಲಲ್ಲೇ ಕುಳಿತುಕೊಂಡಿದೆ. ಈ ನಾಯಿ ಮರಿಗಳಿಗೆ ತನಗೆ ಸಿಕ್ಕ ತುತ್ತು ಆಹಾರದ ಪಾಲನ್ನು ಹಂಚಿದ್ದಾನೆ. ಹಸಿವಿನಿಂದಿದ್ದ ನಾಯಿ ಮರಿಗಳು ಈತ ನೀಡಿದ ಆಹಾರ ತಿಂದಿದೆ. ಇತ್ತ ಮತ್ತೊಂದು ಸಣ್ಣ ಪಾಲನ್ನು ಈತ ತಿಂದಿದ್ದಾನೆ.
ತನ್ನಲ್ಲಿರುವುದು ಸ್ವಲ್ಪವಾದರೂ ತನಗಿಂತ ಅಗತ್ಯವಿರುವವರಿಗೆ ನೀಡಿದ ಈ ನಿರ್ಗತಿಕನ ಮನಸ್ಸು, ಪ್ರೀತಿ ಸಹಬಾಳ್ವೆ ಎಲ್ಲರಿಗೂ ಇರಲಿ ಎಂದು ವಿಡಿಯೋದಲ್ಲಿ ಬರೆಯಲಾಗಿದೆ. ಈ ವಿಡಿಯೋ ಭಾರಿ ಲೈಕ್ಸ್ ಹಾಗೂ ಕಮೆಂಟ್ ಪಡೆದಿದೆ. ಈ ನಿರ್ಗತಿಕನಿಗೆ ಪ್ರತಿ ದಿನ ಮೂರು ಹೊತ್ತು ಆಹಾರ ಸಿಗುವಂತಾಗಲಿ, ಆತನ ವಿಳಾಸ ಹೇಳಿ, ಆಶ್ರಮದಲ್ಲಿ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಮನುಷ್ಯತ್ವ, ಪ್ರೀತಿ, ಸ್ನೇಹ ನಶಿಸುತ್ತಿರುವ ಈ ಜಗತ್ತಿನಲ್ಲಿ ನಿರ್ಗತಿಕನ ನಿಸ್ವಾರ್ಥ, ಹಸಿದವರಿಗೆ ಅನ್ನ ಹಾಕುವ ಹೃದಯವೈಶಾಲ್ಯತೆಯನ್ನು ನಾವು ರೂಢಿಸಿಕೊಳ್ಳಬೇಕು ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಇವತ್ತು ಮದ್ವೆಯಾಗಿ ನಾಳೆ ಡಿವೋರ್ಸ್ ಮಾಡೋರು ಈ ವೀಡಿಯೋ ನೋಡಿ ಬದುಕೋದ ಕಲೀರಿ!