
ಕೋಲ್ಕತಾ(ಜು.19): ಭಾರತದ ಹಲವು ನಗರ, ಊರು, ರಸ್ತೆ, ಪಟ್ಟಣಗಳ ಹೆಸರುಗಳು ಬದಲಾಯಿಸಲಾಗಿದೆ. ಇತ್ತೀಚೆಗಷ್ಟೆ ಔರಂಗಬಾದ್ ಹಾಗೂ ಉಸ್ಮಾನಾಬಾದ್ ನಗರದ ಹೆಸರನ್ನೂ ಮರುನಾಮಕರಣ ಮಾಡಲಾಗಿದೆ. ಇದೀಗ ರಾಜ್ಯದ ಹೆಸರನ್ನೇ ಬದಲಾಯಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದು, ಪಶ್ಚಿಮ ಬಂಗಾಳ ರಾಜ್ಯದ ಹೆಸರು ಮರುನಾಮಕರಣಕ್ಕೆ ಮನವಿ ಮಾಡಿದೆ ಎಂದಿದೆ. ಈ ಕುರಿತ ಮನವಿಯನ್ನು ಮಮತಾ ಬ್ಯಾನರ್ಜಿ ಸರ್ಕಾರ ಸಲ್ಲಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ. ಇದೇ ವೇಳೆ 2015ರಿಂದ ಇಲ್ಲೀವರೆಗೆ ಕೇಂದ್ರ ಸರ್ಕಾರ ಹಲವು ಮನವಿಗಳನ್ನು ಸ್ವೀಕರಿಸಿದೆ. ಹೆಸರು ಬದಲಾವಣೆ ಆಗ್ರಹಿಸಿ ಮನವಿ ಮಾಡಲಾಗಿದೆ. ಎಲ್ಲಾ ಮನವಿಗಳನ್ನು ಕೇಂದ್ರ ಪುರಸ್ಕರಿಸಿದೆ. ಪಶ್ಚಿಮ ಬಂಗಳಾದ ಮನವಿ ಪರಿಶೀಲಿಸಿ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ನಿತ್ಯಾನಂದ ರೈ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಹೆಸರನ್ನು ಬಾಂಗ್ಲಾ ಎಂದು ಮರುನಾಮಕರಣ ಮಾಡಲು ಮಮತಾ ಬ್ಯಾನರ್ಜಿ ಸರ್ಕಾರ ಆಗ್ರಹಿಸಿದೆ. ಬಂಗಾಳಿ ಭಾಷೆಯ ರಾಜ್ಯವನ್ನು ಬಾಂಗ್ಲಾ ಎಂದೇ ಕರೆಯಲಾಗುತ್ತಿತ್ತು. ಹೀಗಾಗಿ ಇದೆ ಹೆಸರು ಸೂಕ್ತ ಎಂದು ಪಶ್ಚಿಮ ಬಂಗಾಳ ಸರ್ಕಾರ ಸೂಚಿಸಿದೆ. ಈ ಕುರಿತು ಕೇಂದ್ರ ಸರ್ಕಾರವನ್ನು ತೃಣಮೂಲ ಕಾಂಗ್ರೆಸ್ ಸಂಸದೆ ಸೈಜಾ ಅಹಮ್ಮದ್ ಪ್ರಶ್ನಿಸಿದ್ದಾರೆ. ನಗರ, ಅಥವಾ ಪಟ್ಟಣ , ರಾಜ್ಯಗಳ ಹೆಸರು ಬದಲಾಯಿಸಲು ಇರುವ ಮಾನದಂಡವೇನು? ಕೇಂದ್ರ ಗೃಹ ಇಲಾಖೆ ಯಾವ ಆಧಾರದಲ್ಲಿ ಮರುನಾಮಕರಣಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
Qutub Minar ಕುತುಬ್ ಮಿನಾರ್ ಹೆಸರನ್ನು ವಿಷ್ಣು ಸ್ತಂಭವೆಂದು ಬದಲಾಯಿಸಲು ಪ್ರತಿಭಟನೆ
ಸಾಂಸ್ಕೃತಿ, ಐತಿಹಾಸಿಕ ಸ್ಥಳಗಳ ಹೆಸರು ಬದಲಾಯಿಸಲು ನಿರ್ದಿಷ್ಟ ನಿಯಮವಿಲ್ಲ. 2017ರಲ್ಲಿ ಆಂಧ್ರಪ್ರದೇಶದಲ್ಲಿ ರಾಜಾಮಂದ್ರಿ ಸ್ಥಳದ ಹೆಸರನ್ನು ರಾಜಾಮಹೇಂದ್ರವರ್ಮಾ ಎಂದು ಮರುನಾಮಕರಣ ಮಾಡಲಾಗಿತ್ತು. 2018ರಲ್ಲಿ ಜಾರ್ಖಂಡ್‌ನ ಉಂತರಿ ಸ್ಥಳದ ಹೆಸರನ್ನು ಶ್ರೀ ಬಂಶಿಧಾರ್ ನಗರ್ ಎಂದು ಮರುನಾಮಕರಣ ಮಾಡಲಾಗಿತ್ತು. 2018ರಲ್ಲಿ ಉತ್ತರ ಪ್ರದೇಶದ ಅಲಹಾಬಾದ್ ಹೆಸರನ್ನು ಪ್ರಯಾಗರಾಜ್ ಎಂದು ಮರುನಾಮಕರಣ ಮಾಡಲಾಗಿತ್ತು. ಹೆಸರು ಬದಲಾವಣೆ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇದೆ. ಇದೀಗ ಭಾರಿ ಪ್ರಚಾರ ಪಡೆಯುತ್ತಿದೆ ಎಂದು ನಿತ್ಯಾನಂದ ರೈ ಹೇಳಿದ್ದಾರೆ.
ಔರಂಗಬಾದ್, ಉಸ್ಮಾನಾಬಾದ್ ಹೆಸರು ಬದಲು
ಮಹಾ ಅಘಾಡಿ ಸರ್ಕಾರದ ಪತನದ ಕೆಲವೇ ಕ್ಷಣಗಳ ಮೊದಲು ಉದ್ಧವ್ ಠಾಕ್ರೆ ಮಹಾರಾಷ್ಟ್ರ ಸರ್ಕಾರವು ಔರಂಗಾಬಾದ್ ಹಾಗೂ ಉಸ್ಮಾನಾಬಾದ್ ನಗರಗಳ ಹೆಸರು ಬದಲಿಸಿ ಮಹತ್ವದ ನಿರ್ಧಾರ ಕೈಗೊಂಡಿತ್ತು. ಔರಂಗಾಬಾದ್ ಹೆಸರು ಇನ್ನು ಸಂಭಾಜಿನಗರ ಎಂದು, ಹಾಗೆಯೇ ಉಸ್ಮಾನಾಬಾದ್ ಹೆಸರನ್ನು ಧಾರಾಶಿವ ಎಂದು ಬದಲಿಸಿ ಆದೇಶ ಹೊರಡಿಸಲಾಗಿದೆ.
ಟಿಪ್ಪು ಎಕ್ಸ್ಪ್ರೆಸ್ ರೈಲಿಗೆ ಒಡೆಯರ್ ಹೆರಿಡುವಂತೆ ಪ್ರತಾಪ್ ಸಿಂಹ ಆಗ್ರಹ
‘ಶಿವಸೇನೆ ಹಿಂದುತ್ವದಿಂದ ದೂರ ಆಗುತ್ತಿದೆ’ ಎಂಬ ಬಿಜೆಪಿ ಹಾಗೂ ತನ್ನದೇ ಬಂಡುಕೋರರ ಆಪಾದನೆಗೆ ತಿರುಗೇಟು ನೀಡಲು ಉದ್ಧವ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಈ ನಿರ್ಣಯ ಕೈಗೊಂಡಿದೆ ಎಂದು ಹೇಳಲಾಗಿದೆ. ಇದೇ ವೇಳೆ ನವೀ ಮುಂಬೈ ವಿಮಾನ ನಿಲ್ದಾಣಕ್ಕೆ ರೈತ ನಾಯಕ ‘ಡಿ.ಬಿ. ಪಾಟೀಲ್ ವಿಮಾನ ನಿಲ್ದಾಣ’ ಎಂದು ಬದಲಿಸುವ ನಿರ್ಣಯವನ್ನೂ ಕೈಗೊಳ್ಳಲಾಗಿದೆ. ಅಚ್ಚರಿ ಎಂದರೆ ಈ ಏರ್‌ಪೋರ್ಚ್‌ಗೆ ಬಾಳಾ ಠಾಕ್ರೆ ಹೆಸರಿಡುವ ಪ್ರಸ್ತಾಪ ಈ ಮುಂಚೆ ಇತ್ತು. ಅದರಿಂದ ಶಿವಸೇನೆ ಹಿಂದೆ ಸರಿದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ