
ಅವಂತಿಪುರ(ಮೇ.06): ವಿಶ್ವವೇ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದ್ದರೆ ಇತ್ತ ಭಾರತೀಯ ಸೇನೆ ಕೊರೋನಾ ವೈರಸ್ ಜೊತೆಗೆ ಭಯೋತ್ಪಾದಕರ ವಿರುದ್ಧ, ಪಾಕಿಸ್ತಾನ ಅಪ್ರಚೋದಿತ ದಾಳಿ ವಿರುದ್ಧ ಹೋರಾಟ ನಡೆಸುತ್ತಿದೆ. ಜಮ್ಮ ಮತ್ತು ಕಾಶ್ಮೀರದಲ್ಲಿ ಇದೀಗ ಪರಿಸ್ಥಿತಿ ಗಂಭೀರವಾಗುತ್ತಿದೆ. ಹಂದ್ವಾರದಲ್ಲಿ ಭಾರತೀಯ ಸೇನೆಯ ಐವರು ಯೋಧರು ಹುತಾತ್ಮರಾಗಿದ್ದರು. ಹೀಗಾಗಿ ಕಾಶ್ಮೀರದಲ್ಲಿ ಹೆಚ್ಚಿನ ಉಗ್ರರ ಅಡಗಿರುವ ಶಂಕೆ ವ್ಯಕ್ತವಾಗಿತ್ತು. ಈ ಕಾರಣದಿಂದ ಸರ್ಚ್ ಆಪರೇಶನ್ ನಡೆಸಿದ ಭಾರತೀಯ ಸೇನೆ ಇದೀಗ ಹಿಜ್ಬುಲ್ ಮುಜಾಯಿದ್ದೀನ್ ಕಮಾಂಡರ್‌ನನ್ನು ಹತ್ಯೆಯಾಗಿರುವ ಸಾಧ್ಯತೆಯನ್ನು ಸೇನೆ ಹೇಳಿದೆ.
ಉಗ್ರರ ಪುಂಡಾಟ: ಕರ್ನಲ್, ಮೇಜರ್ ಸೇರಿ ಐವರು ಯೋಧರು ಹುತಾತ್ಮ!
ಪುಲ್ವಾಮದ ಅವಿಂತಿಪುರದಲ್ಲಿ ಭಾರತೀಯ ಸೇನೆ ನಡೆಸಿದ ಮಹತ್ವದ ಕಾರ್ಯಚರಣೆಯಲ್ಲಿ ಹಿಜ್ಬುಲ್ ಕಮಾಂಡರ್ ರಿಯಾಝ್ ನೈಕೂ ಹತ್ಯೆಯಾಗಿರುವು ಸಾಧ್ಯತೆ ಇದೆ ಎಂದಿದೆ. ಕಾಶ್ಮೀರದಲ್ಲಿ ಭಯೋತ್ವಾದನಾ ಚಟುವಟಿಕೆಗೆ ರಿಯಾಝ್ ನೈಕೂ ಯುವಕರನ್ನು ಪ್ರಚೋದಿಸುತ್ತಿದ್ದ ಹಾಗೂ ಅವರಿಗೆ ಆರ್ಥಿಕ ನೆರವಿನ ಮೂಲಕ ಹಿಜ್ಬುಲ್ ಭಯೋತ್ವಾದನ ಸಂಘಟನೆಗೆ ಸೆಳೆಯುತ್ತಿದ್ದ. ಬಳಿಕ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಯುವಕರನ್ನು ಬಳಸುತ್ತಿದ್ದ. ಈ ಕುರಿತು ಮಾಹಿತಿ ಕಲೆ ಹಾಕಿದ್ದ ಸೇನೆ ಆಪರೇಶನ್‌ಗೆ ಇಳಿದಿತ್ತು.
ಪಾಕ್ ಕುಮ್ಮಕ್ಕು: ಭಾರತದೊಳಕ್ಕೆ ನುಗ್ಗಲು 300 ಉಗ್ರರು ಸಜ್ಜು!..
ಭಾರತೀಯ ಸೇನೆ, ಸಿಆರ್‌ಪಪಿಎಫ್ ಹಾಗೂ ಜಮ್ಮ ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ಹಿಜ್ಬುಲ್ ಕಮಾಂಡರ್ ವಾಸಿಸುತ್ತಿದ್ದ ಬೈಗ್‌ಪೊರಾ ಗ್ರಾವನ್ನು ಸುತ್ತುವರಿದೆ ಆಪರೇಶನ್ ನಡೆಸಿತ್ತು. ಈ ವೇಳೆ ಮನೆಯ ಮಹಡಿ ಮೇಲೆ ಹತ್ತಿ ಸೇನೆಯತ್ತ ಗುಂಡಿನ ದಾಳಿ ನಡೆಸಿದ ಕಮಾಂಡರ್ ಮೇಲೆ ಭಾರತೀಯ ಸೇನೆ ಗುಂಡಿನಿಂದಲೇ ಪ್ರತ್ಯುತ್ತರ ನೀಡಿದೆ. ಈ ಗುಂಡಿನ ಚಕಮಕಿಯಲ್ಲಿ ಹಿಜ್ಬುಲ್ ಕಮಾಂಡರ್ ರಿಯಾಝ್ ಹತ್ಯೆಯಾಗಿರುವ ಸಾಧ್ಯತೆ ಹೆಚ್ಚು ಎಂದು ಸೇನೆ ಹೇಳಿದೆ.
ಆಪರೇಶನ್ ಬೆನ್ನಲ್ಲೇ ಸುರಕ್ಷತೆಯ ದೃಷ್ಟಿಯಿಂದ ಕಾಶ್ಮೀರದಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಭಾರೀಯ ಸೇನೆ ಸ್ಥಗಿತಗೊಳಿಸದೆ. ಇನ್ನು ದಕ್ಷಿಣ ಕಾಶ್ಮೀರದ ಪಾಂಪೋರ್‌ನ ಶಾರ್ ವಲಯದಲ್ಲಿ ಇದೇ ರೀತಿ ಸೇನಾ ಕಾರ್ಯಚರಣೆ ನಡೆಯುತ್ತಿದೆ. ಇಲ್ಲೂ ಕೂಡ ಭಯೋತ್ವಾದಕರು ಅಡಗಿರುವ ಶಂಕೆ ವ್ಯಕ್ತವಾದ ಕಾರಣ ಸೇನೆ ಸರ್ಚ್ ಆಪರೇಶನ್ ನಡೆಸುತ್ತಿದೆ.
ಕಾಶ್ಮೀರದಲ್ಲಿ ಕಳೆದ ಕೆಲ ತಿಂಗಳುಗಳಿಂದ ಭಯೋತ್ಪಾದಕರು ಅಟ್ಟಾಹಸ ಮೆರೆಯಲು ಯತ್ನಿಸುತ್ತಿದ್ದಾರೆ. ಪಾಕಿಸ್ತಾನ ಬೆಂಬಲಿತ ಉಗ್ರರ ಗುಂಪು ಭಯೋತ್ಪಾದನ ಚಟುವಟಿಕೆಗೆ ಮುಂದಾಗಿದೆ. ಕಳೆದ ಭಾನುವಾರ( ಮೇ.03)ರಂದು ಐವರು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ರಕ್ಷಣಾ ಸಚಿವಾ ರಾಜನಾಥ್ ಸಿಂಗ್, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಇಡೀ ದೇಶವೇ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ