ಕೇಳಿದಷ್ಟು ವರದಕ್ಷಿಣೆ ಕೊಡದ್ದಕ್ಕೆ ಗಂಡನ ಮನೆಯವರೆಲ್ಲ ಸೇರಿ ಸೊಸೆಗೆ ಎಚ್‌ಐವಿ ಇಂಜೆಕ್ಷನ್!

Published : Feb 16, 2025, 10:36 AM ISTUpdated : Feb 16, 2025, 10:40 AM IST
ಕೇಳಿದಷ್ಟು ವರದಕ್ಷಿಣೆ ಕೊಡದ್ದಕ್ಕೆ ಗಂಡನ ಮನೆಯವರೆಲ್ಲ ಸೇರಿ ಸೊಸೆಗೆ ಎಚ್‌ಐವಿ ಇಂಜೆಕ್ಷನ್!

ಸಾರಾಂಶ

ಹೆಚ್ಚಿನ ವರದಕ್ಷಿಣೆ ತರದಿದ್ದಕ್ಕೆ ಕೋಪಗೊಂಡ ಗಂಡನ ಮನೆಯವರು ಸೊಸೆಗೆ ಎಚ್‌ಐವಿ ಸೋಂಕಿತ ಸಿರಿಂಜ್‌ನಿಂದ ಇಂಜೆಕ್ಷನ್ ನೀಡಿದ್ದಾರೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಸಂತ್ರಸ್ತೆಯ ಪೋಷಕರು ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಲಖನೌ (ಫೆ.16): ಹೆಚ್ಚಿನ ವರದಕ್ಷಿಣೆ ತರದಿದ್ದಕ್ಕೆ ಕೋಪಗೊಂಡು, ಗಂಡನ ಮನೆಯವರೆಲ್ಲಾ ಸೇರಿ 30 ವರ್ಷದ ಸೊಸೆಗೆ ಎಚ್‌ಐವಿ ಸೋಂಕಿತ ಸಿರಿಂಜ್‌ನಿಂದ ಇಂಜೆಕ್ಷನ್ ನೀಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಕುರಿತು ಸಂತ್ರಸ್ತೆಯ ಪೋಷಕರು ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಗೆ ಕೋರ್ಟ್‌ ಆದೇಶಿಸಿದೆ.

ಸಹರಾನ್‌ಪುರ ಮೂಲದ ಸಂತ್ರಸ್ತೆಯ ಪೋಷಕರು 2023ರಲ್ಲಿ ತಮ್ಮ ಮಗಳನ್ನು ಆರೋಪಿ ಕುಟುಂಬಕ್ಕೆ ಮದುವೆ ಮಾಡಿಕೊಟ್ಟಿದ್ದರು. ಈ ವೇಳೆ 15 ಲಕ್ಷ ರು. ನಗದು ಮತ್ತು ಒಂದು ಕಾರನ್ನು ಉಡುಗೊರೆಯಾಗಿ ನೀಡಲಾಗಿತ್ತು. ಜೊತೆಗೆ ಮದುವೆಗೆ ಕುಟುಂಬ 45 ಲಕ್ಷ ರು. ವೆಚ್ಚ ಮಾಡಿತ್ತು.

ಆದರೆ ಮದುವೆ ಮಾರನೇ ದಿನದಿಂದಲೇ ವರನ ಕುಟುಂಬ ಇನ್ನೂ 10 ಲಕ್ಷ ರು. ನಗದು ಮತ್ತು ದೊಡ್ಡ ಕಾರಿಗೆ ಬೇಡಿಕೆ ಇಟ್ಟಿತ್ತು. ಆದರೆ ಅದಾಗಲೇ ಮದುವೆಗೆ ಭಾರೀ ವೆಚ್ಚ ಮಾಡಿದ್ದ ಕಾರಣ ಹೆಚ್ಚಿನ ವರದಕ್ಷಿಣೆಗೆ ವಧುವಿನ ಕುಟುಂಬ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಗಂಡನ ಮನೆಯಲ್ಲಿ ಆಕೆಗೆ ದೈಹಿಕ ಕಿರುಕುಳ ನೀಡಲಾಗಿತ್ತು.

ಇದನ್ನೂ ಓದಿ: ವರನ ವಿಚಿತ್ರ ಬೇಡಿಕೆಗೆ ಬೇಸತ್ತು ಮದುವೆಗೆ ಮೊದಲೇ ಹೆಣವಾದ ನವವಧು! ವರದಕ್ಷಿಣೆಯಾಗಿ ಭೂಪ ಕೇಳಿದ್ದೇನು ಗೊತ್ತಾ?

ಅದನ್ನು ಸಹಿಸಲಾಗದೇ ಆಕೆ ಪೋಷಕರ ಮನೆಗೆ ಮರಳಿದ್ದಳು. ಈ ವೇಳೆ ಸ್ಥಳೀಯ ಪಂಚಾಯತ್‌ ಸದಸ್ಯರು, ವಧು-ವರರನ್ನು ಕೂರಿಸಿ ಸಂಧಾನ ಮಾಡಿ ಕಳುಹಿಸಿದ್ದರು.

ಆದರೆ ಇದಾದ ಹೊರತಾಗಿಯೂ ವರದಕ್ಷಿಣೆ ಕಿರುಕುಳ ತಪ್ಪಿರಲಿಲ್ಲ. ಅದರ ನಡುವೆ ಕೆಲ ಸಮಯದ ಹಿಂದೆ ಗಂಡನ ಮನೆಯ ಸದಸ್ಯರು ಆಕೆಗೆ ಸುಳ್ಳು ಹೇಳಿ ಇಂಜೆಕ್ಷನ್‌ ನೀಡಿದ್ದರು. ಅದಾದ ಕೆಲ ದಿನಗಳಲ್ಲೇ ಸಂತ್ರಸ್ತೆಯ ಆರೋಗ್ಯ ಕ್ಷೀಣಿಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ತಪಾಸಣೆ ಮಾಡಿದಾಗ ಆಕೆಗೆ ಎಚ್‌ಐವಿ ಸೋಂಕು ತಗುಲಿರುವುದು ಕಂಡುಬಂದಿದೆ. ಆದರೆ ಪತಿಯಲ್ಲಿ ಎಚ್‌ಐವಿ ನೆಗೆಟಿವ್‌ ಬಂದಿದೆ. ಹೀಗಾಗಿ ಇದು ಉದ್ದೇಶಪೂರ್ವಕ ವಾಗಿಯೇ ನಡೆಸಿದ ಕೃತ್ಯ ಎಂದು ಆರೋಪಿಸಿ ಸಂತ್ರಸ್ತೆ ಪೋಷಕರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಗಂಡನ ಮನೆಯವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಕೋರ್ಟ್‌ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆಯು ಪತಿ, ಅತ್ತೆ, ನಾದಿನಿ ಮತ್ತು ಮೈದುನನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ