ಮೊದಲ ಬಾರಿಗೆ ಸಂಸತ್ತಿನಲ್ಲಿ ಶ್ವೇತಪತ್ರ ಹೊರಡಿಸಲಿದೆ ಕೇಂದ್ರ ಸರ್ಕಾರ, ಏನಿದು ವೈಟ್ ಪೇಪರ್?

By Suvarna News  |  First Published Feb 7, 2024, 2:28 PM IST

ದೇಶದ ರಾಜಕಾರಣದಲ್ಲಿ ಶ್ವೇತಪತ್ರ ಸವಾಲು ಜೋರಾಗಿದೆ. ಯುಪಿಎ ಅವಧಿಯಲ್ಲಿ ಆಗಿರುವ ಆರ್ಥಿಕ ದುರುಪಯೋಗ ಹಾಗೂ ಬಿಜೆಪಿ ಸರ್ಕಾರ ಸರಿದೂಗಿಸಿದ ಕ್ರಮಗಳ ಶ್ವೇತಪತ್ರ ಸಂಸತ್ತಿನಲ್ಲಿ ಇದೇ ಮೊದಲ ಬಾರಿಗೆ ಮಂಡನೆಯಾಗುತ್ತಿದೆ. ಏನಿದು ಶ್ವೇತಪತ್ರ? ಪ್ರತಿ ಬಾರಿ ನಾಯಕರು ಶ್ವೇತಪತ್ರ ಹೊರಡಿಸಿ ಎಂದು ಸವಾಲು ಹಾಕುವುದೇಕೆ? 
 


ನವದೆಹಲಿ(ಫೆ.07) ಕೇಂದ್ರ ಸರ್ಕಾರ ಈಗಾಗಲೇ ಶ್ವೇತಪತ್ರ ಹೊರಡಿಸುವುದಾಗಿ ಘೋಷಿಸಿದೆ. ಯುಪಿಎ ಅವಧಿಯ 10 ವರ್ಷದಲ್ಲಿ ಆಗಿರುವ ಆರ್ಥಿಕ ದುರುಪಯೋಗದ ಶ್ವೇತಪತ್ರವನ್ನು ಇದೇ ಮೊದಲ ಬಾರಿಗೆ ಸಂಸತ್ತಿನಲ್ಲಿ ಮಂಡಿಸಲು ಮೋದಿ ಸರ್ಕಾರ ಮುಂದಾಗಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಬಿಜೆಪಿ ಸರ್ಕಾರ ಕಳೆದ 10 ವರ್ಷದಲ್ಲಿ ಕರ್ನಾಟಕಕ್ಕೆ ಮಾಡಿರುವ ಅನ್ಯಾಯದ ಕುರಿತು ಕರ್ನಾಟಕ ಬಜೆಟ್ ಬಳಿಕ ಶ್ವೇತಪತ್ರ ಹೊರಡಿಸಲು ಮುಂದಾಗಿದೆ. ದೇಶದ ರಾಜಕೀಯದಲ್ಲಿ ಶ್ವೇತಪತ್ರ ಸವಾಲುಗಳು ಜೋರಾಗುತ್ತಿದೆ. ಇದೀಗ ಕೇಂದ್ರ ಸರ್ಕಾರ ಒಂದು ದಿನ ಬಜೆಟ್ ಅಧಿವೇಶವನ್ನೇ ವಿಸ್ತರಿಸಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಆರ್ಥಿಕ ದುರುಪಯೋಗದ ಶ್ವೇತಪತ್ರ ಹೊರಡಿಸಲು ಮುಂದಾಗಿದೆ. 

2004ರಿಂದ 2014ರವರೆಗೆ ಆಡಳಿತ ನಡೆಸಿದ ಯುಪಿಎ ಸರ್ಕಾರದ ಅವಧಿಯಲ್ಲಾದ ಆರ್ಥಿಕ ಅವ್ಯವಸ್ಥೆ ಮತ್ತು ಆರ್ಥಿಕತೆಯ ಮೇಲೆ ಇದರ ಪರಿಣಾಮದ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ಈ ಶ್ವೇತಪತ್ರ ಒಳಗೊಂಡಿರಲಿದೆ. ಅಲ್ಲದೇ ಇದನ್ನು ಸರಿಮಾಡಲು ಎನ್‌ಡಿಎ ಸರ್ಕಾರ ತೆಗೆದುಕೊಂಡ ನಿರ್ಧಾರಗಳನ್ನು ಇದು ಒಳಗೊಂಡಿರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 

Tap to resize

Latest Videos

2014ಕ್ಕೂ ಮುನ್ನ ದೇಶದ ಆರ್ಥಿಕತೆ ದುರುಪಯೋಗ, ಶ್ವೇತಪತ್ರ ಹೊರಡಿಸಲು ಮುಂದಾದ ಕೇಂದ್ರ ಸರ್ಕಾರ!

ಏನಿದು ಶ್ವೇತಪತ್ರ?
ಶ್ವೇತಪತ್ರ ಮೂಲ ಹೆಸರು ವೈಟ್ ಪೇಪರ್(White paper). ಬ್ರಿಟೀಷ್ ಸರ್ಕಾರ ಈ ವೈಟ್ ಪೇಪರ್ ಸಂಪ್ರದಾಯ ಆರಂಭಿಸಿತು.ಭಾರತದಲ್ಲೂ ಬ್ರಿಟಿಷ್ ಸರ್ಕಾರವೇ ಆಡಳಿತ ನಡೆಸಿದ ಕಾರಣ ವೈಟ್ ಪೇಪರ್ ಅಷ್ಟೇ ಮಹತ್ವ ಪಡೆದುಕೊಂಡಿದೆ. ಶ್ವೇತಪತ್ರದಲ್ಲಿ ಪ್ರಮುಖವಾಗಿ ಕೆಲ ವಿಧಗಳಿವೆ. ಒಂದು ಸರ್ಕಾರ ಹೊರಡಿಸುವ ಶ್ವೇತಪತ್ರ, ಇನ್ನು ಬ್ಯೂಸಿನೆಸ್ ಶ್ವೇತಪತ್ರ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಶ್ವೇತಪತ್ರಗಳಿವೆ. ಸುಲಭ ಮಾತಿನಲ್ಲಿ ಹೇಳಬೇಕು ಎಂದರೆ ಇದೊಂದು ದಾಖಲೆ ಪತ್ರ.  

ಸರ್ಕಾರ ಹೊರಡಿಸುವ ಶ್ವೇತಪತ್ರ ಭಾರಿ ಕೋಲಾಹಲ ಸೃಷ್ಟಿಸುತ್ತದೆ. ಕಾರಣ, ಈ ಶ್ವೇತಪತ್ರ ಸರ್ಕಾರದ ಆಯವ್ಯಯ, ಸರ್ಕಾರದ ಆದಾಯ, ಬೊಕ್ಕಸ, ಸರ್ಕಾರದ ನೀತಿ, ಸರ್ಕಾರದ ನೀತಿಗಳಿಂದ ಸಮಾಜದಲ್ಲಿನ ಬದಲಾವಣೆ, ಮಹತ್ತರ, ಆಡಳಿತದಲ್ಲಿನ ಖರ್ಚು ವೆಚ್ಚಗಳ ಲೆಕ್ಕ, ಯೋಜನೆಗಳಿಗೆ ನೀಡಿದ  ಅನುದಾನ, ರಾಜ್ಯಗಳಿಗೆ ಕೊಟ್ಟ ಅನುದಾನ, ಮೂಭೂತ ಸೌಕರ್ಯಗಳ ನೀತಿ,ಅನುದಾನ ಸೇರಿದಂತೆ ಪ್ರಮುಖ ವಿಚಾರಗಳನ್ನು ಸರ್ಕಾರ ಶ್ವೇತಪತ್ರದ ಮೂಲಕ ಹೊರಡಿಸಲಿದೆ. ಇದು ಸರ್ಕಾರದ ಅಧಿಕೃತ ದಾಖಲೆ, ಅಂಕಿ ಅಂಶಗಳ ಮಾಹಿತಿಯಾಗಿದೆ. ಈ ವರದಿಯನ್ನು ಸರ್ಕಾರಗಳು ಹೊರಡಿಸುತ್ತದೆ.

ಇದೇ ಮೊದಲ ಬಾರಿಗೆ ಕೇಂದ್ರ ಬಿಜೆಪಿ ಸರ್ಕಾರ ಸಂಸತ್ತಿನಲ್ಲಿ ಶ್ವೇತಪತ್ರ ಹೊರಡಿಸುತ್ತಿದೆ. 2014ರ ಮೊದಲಿನ 10 ವರ್ಷಗಳ ಅವಧಿಯಲ್ಲಿ ಯಪಿಎ ಸರ್ಕಾರದ ಹಣಕಾಸು ದುರುಪಯೋಗದ,  ಈ ಅವ್ಯವಸ್ಥೆಗಳನ್ನು ಸರಪಡಿಸಿ ದೇಶದ ಆರ್ಥಿಕತೆಯನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯಲು ಬಿಜೆಪಿ ಸರ್ಕಾರ ಮಾಡಿರುವ ಕ್ರಮಗಳ ಕುರಿತು ಶ್ವೇತಪತ್ರ ಹೊರಡಿಸುತ್ತಿದೆ. 

ಕೇಂದ್ರದ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಿ: ಸರ್ಕಾರಕ್ಕೆ ಸವಾಲು ಹಾಕಿದ ಆರ್.ಅಶೋಕ್

ಮೊದಲ ಶ್ವೇತಪತ್ರ ಹೊರಡಿಸಿದ ಹೆಗ್ಗಳಿಕೆಗೆ ಬ್ರಿಟಿಷ್ ಸರ್ಕಾರಕ್ಕೆ ಸಲ್ಲಲಿದೆ. 1922ರಲ್ಲಿ ಇಂಗ್ಲೆಂಡ್‌ನ ಬ್ರಿಟಿಷ್ ಸರ್ಕಾರ ಶ್ವೇತಪತ್ರ ಹೊರಡಿಸಿತ್ತು. ಇದು ಚರ್ಚಿಲ್ ಶ್ವೇತಪತ್ರ ಎಂದೇ ಖ್ಯಾತಿಗೊಂಡಿದೆ. ಪ್ಯಾಲೆಸ್ತಿನ್ ಕುರಿತು ಬ್ರಟಿಷ್ ನೀತಿಗಳ ಶ್ವೇತಪತ್ರ ಇದಾಗಿತ್ತು. 9 ದಾಖಲೆಗಳ ಈ ಶ್ವೇತಪತ್ರ ಪ್ಯಾಲೆಸ್ತಿನ್ ವಿಚಾರದಲ್ಲಿ ಬ್ರಿಟಿಷ್ ಸರ್ಕಾರದ ಬದ್ಧತೆಯನ್ನು ಜಗತ್ತಿಗೆ ತಿಳಿಸಲು ಹೊರಡಿಸಿದ ಪತ್ರವಾಗಿತ್ತು.  ಅಂದು ಬ್ರಿಟಿಷ್ ಸರ್ಕಾರಗಳು ಸುದೀರ್ಘ ದಾಖಲೆಗಳನ್ನು ಬ್ಲೂ ಬುಕ್ ಮೂಲಕ ಬಿಡುಗಡೆ ಮಾಡುತ್ತಿತ್ತು. ದಾಖಲೆ ಪತ್ರಗಳ ವಿವರ ಒಳಗೊಂಡ ಪುಸ್ತಕ. ಇದರ ಮುಖಪುಟ ನೀಲಿ ಬಣ್ಣದಿಂದ ಕೂಡಿರುತ್ತಿತ್ತು. ಹೀಗಾಗಿ ಬ್ಲೂ ಬುಕ್ ಅಥವಾ ಬ್ಲೂ ಪೇಪರ್ಸ್ ಅನ್ನೋ ಹೆಸರು ಬಂದಿದೆ. ಇಂದರ ಮುಂದುವರಿದ ಬಾಗವಾಗಿ, ನಿರ್ದಿಷ್ಟ ವಿಷಯ, ದಾಖಲೆ ಕುರಿತು ಹೊರಡಿಸುವ ದಾಖಲೆಗಳಿಗೂ ಬ್ಲೂ ಪೇಪರ್ಸ್ ಅಥವಾ ಬ್ಲೂ ಬುಕ್ ಎಂಬ ಹೆಸರಿನಿಂದಲೇ ಕರೆಯಲಾಗುತ್ತಿತ್ತು. ಆದರೆ ಕ್ರಮೇಣ, ನೀಲಿ ಬಣ್ಣದ ಬದಲು ಪ್ರತಾಪ್ರಭುತ್ತವನ್ನು ಪ್ರತಿನಿಧಿಸು ಶುಭ್ರ ಬಿಳಿ ಬಣ್ಣದ ಮುಖಮುಟ ಬಳಸಲಾಗಿತ್ತು. ಹೀಗಾಗಿ ಶ್ವೇತಪತ್ರ ಅನ್ನೋ ಹೆಸರೇ ಅತ್ಯಂತ ಜನಪ್ರಿಯವಾಗಿದೆ.   

click me!