ತನ್ನದಲ್ಲದ ತಪ್ಪಿಗೆ ಬೈಕ್ ಸವಾರನೋರ್ವ ಚಲಿಸುತ್ತಿದ್ದ ಲಾರಿ ಕೆಳಗೆ ಬಿದ್ದ ಆಘಾತಕಾರಿ ಘಟನೆಯ ವೀಡಿಯೋವೊಂದು ವೈರಲ್ ಆಗಿದೆ.
ಕೆಲವೊಮ್ಮೆ ಕೆಲವರು ತಿಳಿಯದೇ ಮಾಡುವ ಯಡವಟ್ಟುಗಳು ಇನ್ಯಾರದ್ದೋ ಜೀವವನ್ನು ಬಲಿ ಪಡೆಯುತ್ತವೆ. ಅದರಲ್ಲೂ ವಾಹನ ಚಾಲನೆ ವೇಳೆ ಎಷ್ಟು ಜಾಗರೂಕರಾಗಿದ್ದರು ಸಾಲದ್ದು ವಾಹನ ಚಾಲನೆ ವೇಳೆ ಇನ್ಯಾರೋ ಮಾಡಿದ ಅವಾಂತರದಿಂದ ಮತ್ಯಾರೋ ಪ್ರಾಣ ಕಳೆದುಕೊಂಡ ಹಲವು ನಿದರ್ಶನಗಳು ಈಗಾಗಲೇ ನಡೆದು ಹೋಗಿವೆ. ಅದೇ ರೀತಿ ತನ್ನದಲ್ಲದ ತಪ್ಪಿಗೆ ಬೈಕ್ ಸವಾರನೋರ್ವ ಚಲಿಸುತ್ತಿದ್ದ ಲಾರಿ ಕೆಳಗೆ ಬಿದ್ದ ಆಘಾತಕಾರಿ ಘಟನೆಯ ವೀಡಿಯೋವೊಂದು ವೈರಲ್ ಆಗಿದೆ.
ಸಾಮಾನ್ಯವಾಗಿ ರಸ್ತೆ ಬದಿ ಕಾರು ನಿಲ್ಲಿಸಿದ ನಂತರ ಇಳಿಯುವ ವೇಳೆ ಕಾರಿನ ಬಾಗಿಲು ತೆಗೆಯುವ ವೇಳೆ ಹಿಂದೆ ಮುಂದೆ ನೋಡಬೇಕಾದುದು ಕಾರಿನಲ್ಲಿರುವವರ ಆದ್ಯ ಕರ್ತವ್ಯ, ಆದರೆ ಕೆಲವೊಮ್ಮೆ ಕಾರಿನಲ್ಲಿರುವವರು ಡೋರ್ ತೆರೆಯುವ ವೇಳೆ ಮಾಡುವ ಎಡವಟ್ಟು ಇನ್ಯಾರದ್ದೋ ಜೀವವನ್ನೇ ಬಲಿ ಪಡೆಯುತ್ತದೆ. ಅದೇ ರೀತಿ ಇಲ್ಲೊಂದು ಕಡೆ ರಸ್ತೆ ಬದಿ ಕಾರು ನಿಲ್ಲಿಸಿದ ವ್ಯಕ್ತಿ ಕಾರಿನ ಡೋರ್ ತೆಗೆಯುವ ವೇಳೆ ಹಿಂದೆ ಮುಂದೆ ನೋಡದೇ ಡೋರ್ ತೆಗೆದಿದ್ದಾನೆ. ಈ ವೇಳೆ ಹಿಂಬದಿಯಿಂದ ಬಂದ ದ್ವಿಚಕ್ರ ವಾಹನ ಸವಾರನೋರ್ವನಿಗೆ ಕಾರಿನ ಡೋರ್ ತಾಗಿ ಆತ ಬೈಕ್‌ನಿಂದ ಕೆಳಗೆ ಬಿದ್ದು, ಹಿಂದಿನಿಂದ ಬರುತ್ತಿದ್ದ ಲಾರಿ ಕೆಳಗೆ ಬಿದ್ದಿದ್ದಾನೆ. ಆತ ಚಲಾಯಿಸುತ್ತಿದ್ದ ಬೈಕ್ ಮತ್ತೊಂದು ಕಡೆ ಬಿದ್ದಿದೆ. ಆದರೆ ಆತನ ಅದೃಷ್ಟ ಚೆನ್ನಾಗಿತ್ತೇನೋ ಆತ ಟೈರ್ ಕೆಳಗೆ ಸಿಲುಕುವ ಬದಲು ಲಾರಿ ಮಧ್ಯೆ ಸಿಲುಕಿದ ಪರಿಣಾಮ ಆತನ ಪ್ರಾಣ ಉಳಿದಿದೆ.
ವೇಗವಾಗಿ ಹಂಪ್ ಎಗರಿದ ಬೈಕ್: ತಲೆಗೆ ಪೆಟ್ಟು ಬಿದ್ದು ಸವಾರ ಸಾವು!
14 ಸೆಕೆಂಡ್‌ಗಳ ವೀಡಿಯೋದಲ್ಲಿ ಆತ ಲಾರಿ ಕೆಳಗಿನಿಂದ ತೆವಳಿಕೊಂಡು ಮೆಲ್ಲನೆ ಹೊರಬರುತ್ತಿರುವ ದೃಶ್ಯವನ್ನು ಕಾಣಬಹುದು. ಈ ಭಯಾನಕ ದೃಶ್ಯ ಎಲ್ಲಿ ನಡೆದಿರುವುದು ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಇದು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. @LaughLens ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಅಪ್‌ಲೋಡ್ ಆಗಿದ್ದು, ವೀಡಿಯೋ ನೋಡಿದ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ.
ಯಮರೂಪಿಯಾಗಿ ಬೈಕ್‌ಗೆ ಅಡ್ಡಬಂದ ನಾಯಿ; ನಿಯಂತ್ರಣ ತಪ್ಪಿ ಬೈಕ್ ಸವಾರ ಸಾವು!
Oh mannnnnnn pic.twitter.com/T4yF6hiuRs
— Laugh Lens (@LaughLens)