ಮತ್ತೆ ಹಾರಾಟ ನಡೆಸಿದ ಪಾಕ್ ವಿರುದ್ಧ ಯುದ್ಧದಲ್ಲಿ ನಿರ್ಣಾಯಕ ಪಾತ್ರನಿರ್ವಹಿಸಿದ ಡಕೋಟಾ!

By Suvarna NewsFirst Published Oct 8, 2023, 4:09 PM IST
Highlights

1947-48ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧ, 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಡಕೋಟಾ ಯುದ್ಧ ವಿಮಾನ ಇದೀಗ ಮತ್ತೆ ಹಾರಾಟ ನಡೆಸಿದೆ. 2011ರಲ್ಲಿ ಸಚಿವ ರಾಜೀವ್ ಚಂದ್ರಶೇಖರ್ ಈ ವಿಮಾನ ಖರೀದಿಸಿ ಮರುಸ್ಥಾಪಿಸಿ ಭಾರತೀಯ ವಾಯುಸೇನೆಗೆ ಕೊಡುಗೆಯಾಗಿ ನೀಡಿದ್ದಾರೆ.

ನವದೆಹಲಿ(ಅ.8)  ಭಾರತದ ಇತಿಹಾಸದಲ್ಲಿ ಡಕೋಟಾ ಡಿಸಿ-3 ವಿಪಿ- 905 ವಿಮಾನಕ್ಕೆ ಭಾರಿ ಮಹತ್ವವಿದೆ. ಕಾರಣ ದೇಶ ವಿಭಜನೆಗೊಂಡ ಬಳಿಕ ಪಾಕಿಸ್ತಾನ ಕಾಶ್ಮೀರ ವಶಪಡಿಸಿಕೊಳ್ಳಲು ಮುಂದಾಗಿತ್ತು. ಈ ವೇಳೆ ಕಾಶ್ಮೀರನ್ನು ಉಳಿಸಿಕೊಳ್ಳಲು ನೆರವಾಗಿದ್ದು ಇದೇ ಡಕೋಟಾ ವಿಮಾನ. ಇನ್ನು 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲೂ ಇದೇ ಡಕೋಟಾ ಪ್ರಮುಖ ಪಾತ್ರ ನಿರ್ವಹಿಸಿತ್ತು. ಇದೀಗ ಭಾರತ ಅತ್ಯಂತ ಹಳೆ ವಿಮಾನ ಮತ್ತೆ ಹಾರಾಟ ನಡೆಸಿದೆ. ಪ್ರಯಾಗ್‌ರಾಜ್‌ನಲ್ಲಿ ನಡೆದ ಭಾರತೀಯ ವಾಯುಸೇನೆಯ ಫ್ಲೈಫಾಸ್ಟ್ ವಾರ್ಷಿಕೋತ್ಸವದಲ್ಲಿ  ಐತಿಹಾಸಿಕ ಡಕೋಟಾ ಡಿಸಿ3 ವಿಪಿ 905 ಹಾರಾಟ ನಡೆಸಿದೆ.

ವಿಂಗ್ ಕಮಾಂಡರ್ ಡಿ. ಧಂಕರ್ ಸಾರಥ್ಯದಲ್ಲಿ ಡಕೋಟಾ ಹಾಗೂ ಸಿಬ್ಬಂದಿ ಪ್ರಯಾಗ್ ರಾಜ್‌ನ ಅಕಾಶದಲ್ಲಿ ಹಾರಾಟ ನಡೆಸಿದ್ದಾರೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಈ ವಿಮಾವನ್ನು ಖರೀದಿಸಿ, ಮರುಸ್ಥಾಪಿಸಿ ಭಾರತೀಯ ವಾಯುಸೇನೆಗೆ ಉಡುಗೊರೆಯಾಗಿ ನೀಡಿದ್ದಾರೆ. ಭಾರತೀಯ ವಾಯುಪಡೆ ಇತಿಹಾಸದಲ್ಲಿ ಡಕೋಟಾ ವಿಮಾನಕ್ಕೆ ವಿಶೇಷ ಸ್ಥಾನವಿದೆ.

ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪರಶುರಾಮನ ಹಾರಾಟ!

1947-48ರಲ್ಲಿ ಪಾಕಿಸ್ತಾನ ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮ ಮತ್ತು ಕಾಶ್ಮೀರದ ಮೇಲೆ ಹಿಡಿತ ಸಾಧಿಸಲು ಆರಂಭಿಸಿತ್ತು. ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೇ ಪಾಕ್ ವಿರುದ್ಧ ಭಾರತ ಯುದ್ಧಸಾರಿತ್ತು. ಈ ವೇಳೆ ಭಾರತೀಯ ಸೇನೆ ಯೋಧರನ್ನು ಕಾಶ್ಮೀರ ಆಯಕಟ್ಟಿನ ಜಾಗಕ್ಕೆ ಕರೆದೊಯ್ಯುವುದು ಸೇರಿದಂತೆ ಶಸ್ತ್ರಾಸ್ತ್ರ ಪೂರೈಕೆಯನ್ನು ಡಕೋಟಾ ಮಾಡಿದೆ. 1971ರಲ್ಲಿ ಪಾಕಿಸ್ತಾನದ ಕಪಿಮುಷ್ಠಿಯಿಂದ ಬಾಂಗ್ಲಾದೇಶವನ್ನು ವಿಮೋಚನೆಗೊಳಿಸುವ ಹೋರಾಟದಲ್ಲೂ ಇದೇ ಡಕೋಟಾ ಪ್ರಮುಖ ಪಾತ್ರ ನಿರ್ವಹಿಸಿತ್ತು.

ಬಳಿಕ ಡಕೋಟಾ ಫ್ಲೀಟ್ ಸೇವೆಯಿಂದ ನಿವೃತ್ತಿಯಾಯಿತು. ಈ ವಿಮಾನವನ್ನು ಸ್ಕ್ರಾಪ್ ರೂಪದಲ್ಲಿ ಮಾರಾಟ ಮಾಡಲಾಗಿತ್ತು. 2011ರಲ್ಲಿ ಐರ್ಲೆಂಡ್‌ನಲ್ಲಿ ಭಾರತದ ಈ ಯುದ್ಧ ವಿಮಾನವನ್ನು ಮಾರಾಟಕ್ಕೆ ಇಡಲಾಗಿತ್ತು. ಈ ಕುರಿತು ಮಾಹಿತಿ ಪಡೆದ ಸಚಿವ ರಾಜೀವ್ ಚಂದ್ರಶೇಖರ್ ಖರೀದಿಸಲು ಮುಂದಾದರು. ಭಾರತದ ಯುದ್ಧ ಇತಿಹಾಸದಲ್ಲಿ ಪ್ರಮುಖ ಪಾತ್ರನಿರ್ವಹಿಸಿ ದೇಶದ ಗರಿಮೆಯನ್ನು ಎತ್ತಿಹಿಡಿದ ವಿಮಾನ ಅನ್ನೋದ ಪ್ರಮುಖ ಕಾರಣಾಗಿತ್ತು. ಇದರ ಜೊತೆಗೆ ಈ ಡಕೋಟಾ ವಿಮಾನಕ್ಕೆ ರಾಜೀವ್ ಚಂದ್ರಶೇಖರ್ ಅವರ ತಂದೆ ಏರ್ ಕಮಾಂಡರ್ ಎಂಕೆ ಚಂದ್ರಶೇಖರ್ ಪೈಲೆಟ್ ಆಗಿದ್ದರು.

 ಐತಿಹಾಸಿಕ ಡಕೋಟಾ ವಿಮಾವನ್ನು ಸ್ವಂತ ಖರ್ಚಿನಲ್ಲಿ ಖರೀದಿಸಿ ಬಳಿಕ ಸಂಪೂರ್ಣವಾಗಿ ಮರುಸ್ಥಾಪಿಸಿ ವಾಯುಸೇನೆಗೆ ಉಡುಗೊರೆಯಾಗಿ ನೀಡುವ ರಾಜೀವ್ ಚಂದ್ರಶೇಖರ್ ಪ್ರಸ್ತಾವನೆಯನ್ನು ಅಂದಿನ ಕಾಂಗ್ರೆಸ್ ಸರ್ಕಾರದ ರಕ್ಷಣಾ ಸಚಿವ ಎಕೆ ಆ್ಯಂಟಿನಿ ನಿರಾಕರಿಸಿದರು. ಬಳಿಕ ಬಿಜೆಪಿ ಸರ್ಕಾರದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಪ್ರಸ್ತಾವನೆ ಅಂಗೀಕರಿಸಿದರು.

ಏರ್ ಶೋನಲ್ಲಿ ಹಾರಲಿದೆ 70 ವರ್ಷ ಹಳೆಯ ಡಕೋಟಾ ಯುದ್ಧ ವಿಮಾನ!

2018ರಲ್ಲಿ ಈ ವಿಮಾನವನ್ನು ಸಂಪೂರ್ಣವಾಗಿ ನವೀಕರಿಸಲಾಯಿತು. ಬಳಿಕ ಮೇ.4, 2018ರಂದು ಹಿಂದೂ ಧರ್ಮದ ವಿಷ್ಣುವಿನ 6ನೇ ಅವತಾರ ಪರಶುರಾಮ ಅನ್ನೋ ಹೆಸರಿನಿಂದ ನವೀಕರಣಗೊಂಡಿತು. ವಿಮಾನದ ಬಾಲದಲ್ಲಿ ವಿಪಿ 905 ನಂಬರ್ ನಮೂದಿಸಲಾಗಿದೆ. ಹಿಂದಾನ್‌ನಲ್ಲಿರುವ ವಾಯುಪಡೆ ನಿಲ್ದಾಣ ಐಎಫ್ ವಿಂಟೇಜ್ ಸ್ಕ್ವಾಡ್ರನ್‌ನಲ್ಲಿ ಅಧಿಕೃತವಾಗಿ ಸ್ವಾಗತ ನೀಡಲಾಯಿತು.

ಐತಿಹಾಸಿಕ ಹಿನ್ನಲೆಯಿರುವ ಪರಶುರಾಮನ ಹಾರಾಟವನ್ನು ವೀಕ್ಷಿಸುವುದೇ ಚೆಂದ. ಭಾರತದ ಇತಿಹಾಸದಲ್ಲಿ ಅತ್ಯುನ್ನತ ಪರಿಣಾಮ ಬೀರಿರುವ ಡಕೋಟಾ ವಿಮಾನ ಪೌರಾಣಿಕ ಸ್ಥಾನಮಾನ ಹೊಂದಿದೆ ಎಂದು ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

click me!