'ಅರಾಜಕತೆ ತೊಲಗಿ ಪಶ್ಚಿಮ ಬಂಗಾಳದಲ್ಲಿ ಹಿಂದೂ ರಾಜ್ಯ ಸ್ಥಾಪನೆಯಾಗಲಿದೆ'

By Suvarna NewsFirst Published Dec 13, 2020, 8:32 PM IST
Highlights

ಪಶ್ಚಿಮ ಬಂಗಾಳದಲ್ಲಿ ಹಿಂದೂ ರಾಜ್ಯಭಾರ/ ಮಮತಾ ಬ್ಯಾನರ್ಜಿ ವಿರುದ್ಧ ಗುಡುಗಿದ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್/ ಪಶ್ಚಿಮ ಬಂಗಾಳದಲ್ಲಿ ಅರಾಜಕತೆ ಸೃಷ್ಟಿಯಾಗಿದೆ.

ಭೋಪಾಲ್ ( ಡಿ. 13)  ಪಶ್ಚಿಮ ಬಂಗಾಳದಲ್ಲಿಯೂ ಹಿಂದೂ ರಾಜ್ಯಭಾರ ಆರಂಭವಾಗಲಿದೆ ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಭವಿಷ್ಯ ನುಡಿದಿದ್ದಾರೆ.

ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎನ್ನುತ್ತ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.

ಅಷ್ಟಕ್ಕೂ ದೀದಿ ಸಾಮ್ರಾಜ್ಯದಲ್ಲಿ ಏನಾಗುತ್ತಿದೆ?

ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರ ಸರಣಿ ಕೊಲೆ ಪ್ರಕರಣಗಳು, ಮಮತಾ ಆಡಳಿತ ವೈಫಲ್ಯಕ್ಕೆ ದೊಡ್ಡ ಉದಾಹರಣೆ ಎಂದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬೆಂಗಾವಲು ವಾಹನದ ಮೇಲೆ ನಡೆದ ಕಲ್ಲುತೂರಾಟ, ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂಬುದನ್ನು ಸಾರಿ ಸಾರಿ ಹೇಳುತ್ತಿದೆ ಎಂದರು.

ಜೆಪಿ ನಡ್ಡಾ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜಕೀಯ ಪತನ ಆರಂಭವಾಗಿದೆ.  ಪಶ್ಚಿಮ ಬಂಗಾಳ ಕೇಸರಿ ಮಯವಾಗಲಿದ್ದು ಜನ ನೆಮ್ಮದಿಯ ಜೀವನ ನಡೆಸಲಿದ್ದಾರೆ ಎಂದರು. 

click me!