
ಆಗ್ರಾ(ಫೆ.03) ಆಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೊಂಡಿದೆ. ಇತ್ತ ಕಾಶಿ ವಿಶ್ವನಾಥನ ಮೂಲ ಮಂದಿರ ಮರಳಿ ಪಡೆಯುವ ಹೋರಾಟ ತೀವ್ರಗೊಂಡಿದೆ. ಈ ಬೆಳವಣಿಗೆ ನಡುವೆ ತಾಜ್ ಮಹಲ್ ಹಾಗೂ ಮುಸ್ಲಿಮ್ ಸಮತಿ ವಿರುದ್ದ ಹಿಂದೂ ಮಹಾಸಭಾ ಕೋರ್ಟ್ ಮೆಟ್ಟಿಲೇರಿದೆ. ಯಾವ ಅನುಮತಿ ಇಲ್ಲದೆ ತಾಜ್ ಮಹಲ್ ಒಳಗಡೆ ಮುಸ್ಲಿಮರು ಶಹಜಹಾನ್ ಸಾವಿನ ಸ್ಮರಾರ್ಥ ಉರುಸ್ ಆಚರಿಸುತ್ತಿದ್ದಾರೆ. ಈ ವೇಳೆ ಎಲ್ಲಾ ಮುಸ್ಲಿಮರಿಗೆ ಉಚಿತ ಪ್ರವೇಶವನ್ನು ನೀಡಲಾಗುತ್ತಿದೆ. ಅನುಮತಿ ಇಲ್ಲದೆ ತಾಜ್ ಮಹಲ್ ಒಳಗೆ ಆಚರಿಸುತ್ತಿರುವ ಉರುಸ್ ಆಚರಣೆಗೆ ತಡೆ ನೀಡಬೇಕು ಎಂದು ಹಿಂದೂ ಮಹಾಸಭಾ ಆಗ್ರಾ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅರ್ಜಿಯನ್ನು ಪುರಸ್ಕರಿಸಿರುವ ಕೋರ್ಟ್ ಮಾರ್ಚ್ 4 ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ.
ಫೆಬ್ರವರಿ 6 ರಿಂದ 8ರ ವರೆಗೆ ತಾಜ್ ಮಹಲ್ ಒಳಗೆಡೆ ಮುಸ್ಲಿಮರು ಶಹಜಹಾನ್ ಸ್ಮರಣಾರ್ಥ ಉರುಸ್ ಆಚರಿಸುತ್ತಾರೆ. ಇದೀಗ ಶಹಜಹಾನ್ 369ನೇ ಉರುಸ್ ಆಚರಣೆಗೆ ಮುಸ್ಲಿಮ್ ಸಮಿತಿ ಸಜ್ಜಾಗಿದೆ. ಎಲ್ಲಾ ತಯಾರಿ ಮಾಡಿಕೊಂಡಿದೆ. ಉರುಸ್ ಆಚರಣೆ ಹಾಗೂ ಈ ವೇಳೆ ಮುಸ್ಲಿಮರಿಗೆ ಉಚಿತ ಪ್ರವೇಶವನ್ನು ಪ್ರಶ್ನಿಸಿ ಹಿಂದೂ ಮಹಾಸಭಾ ಅರ್ಜಿ ಸಲ್ಲಿಸಿದೆ.
ಷಹಜಹಾನ್-ಮಮ್ತಾಜ್ ಪ್ರೀತಿ ಬಗ್ಗೆ ತನಿಖೆ ಮಾಡಿ, ತಾಜ್ ಮಹಲ್ ಧ್ವಂಸ ಮಾಡಿ: ಅಸ್ಸಾಂ ಬಿಜೆಪಿ ಶಾಸಕ!
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿಂದೂಮಹಾಸಭಾ ವಕ್ತಾರ ಸಂಜಯ್ ಜಾಟ್ ಕೆಲ ಮಹತ್ವ ಮಾಹಿತಿ ಹಂಚಿಕೊಂಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಭಾರತೀಯ ಪುರಾತತ್ವ ಇಲಾಖೆಯಲ್ಲಿ ತಾಜ್ ಮಹಲ್ ಕುರಿತು ಮಾಹಿತಿ ಕೇಳಲಾಗಿತ್ತು. ತಾಜ್ ಮಹಲ್ ಒಳಗಡೆ ಉರಸ್ ನಡೆಸಲು ಅನುಮತಿ ಕೊಟ್ಟವರು ಯಾರು? ಮೊಘಲ್ ಆಳ್ವಿಕೆಯಲ್ಲಿ ಕೊಡಲಾಗಿತ್ತೆ? ಅಥವಾ ಬ್ರಿಟಿಷ್ ಸರ್ಕಾರ ನೀಡಿತ್ತೆ? ಅಥವಾ ಸ್ವಾತಂತ್ರ್ಯ ಬಳಿಕ ಭಾರತ ಸರ್ಕಾರ ಅನುಮತಿ ನೀಡಿತ್ತೆ? ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಭಾರತೀಯ ಪುರಾತತ್ವ ಇಲಾಖೆ ಉತ್ತರ ನೀಡಿದೆ. ಈ ರೀತಿಯ ಯಾವುದೇ ಅನುಮತಿಯನ್ನು ಭಾರತ ಸರ್ಕಾರ, ಪುರಾತತ್ವ ಇಲಾಖೆ ನೀಡಲಾಗಿಲ್ಲ ಎಂದಿದೆ. ಉರುಸ್ ಮುಸ್ಲಿಮ್ ಸಮಿತಿಗೆ ಮೊಘಲ್ ಅಥವಾ ಬ್ರಿಟಿಷ್ ಸರ್ಕಾರದಲ್ಲಿ ಅನುಮತಿ ನೀಡಿರುವ ದಾಖಲೆ ಇಲ್ಲ ಎಂದು ಪುರಾತತ್ವ ಇಲಾಖೆ ಹೇಳಿದೆ ಎಂದು ಸಂಜಯ್ ಜಾಟ್ ಹೇಳಿದ್ದಾರೆ.
ಯಾವ ಅನುಮತಿ ಇಲ್ಲದೆ ತಾಜ್ ಮಹಲ್ ಒಳಗಡೆ ಉರುಸ್ ನಡೆಸುತ್ತಿರುವುದು ಹೇಗೆ? ಇದನ್ನು ಪ್ರಶ್ನಿಸಿ ಹಿಂದೂಮಹಸಭಾ ಆಗ್ರ ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಮಾರ್ಚ್ 4 ರಂದು ಈ ಅರ್ಜಿ ವಿಚಾರಣೆ ನಡೆಯಲಿದೆ.
ಮೊಘಲರ ಬಗ್ಗೆ ತಪ್ಪು ಕಲ್ಪನೆ ಇದೆ, ತಾಜ್ ಮಹಲ್, ಕೆಂಪು ಕೋಟೆ ಕೆಡವಿ; ನಸೀರುದ್ದೀನ್ ಶಾ ಶಾಕಿಂಗ್ ಹೇಳಿಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ