
ಆಗ್ರಾ: ವಿಶ್ವದ ಏಳ ಅದ್ಭುತಗಳಲ್ಲಿ ಒಂದು ನಮ್ಮ ದೇಶದ ತಾಜ್ ಮಹಲ್. ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್ ಮಹಲ್ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರಪಂಚದ ಮೂಲೆ ಮೂಲೆಗಳಿಂದ ಜನರು ಭಾರತಕ್ಕೆ ಬರುತ್ತಾರೆ. ಪ್ರೇಮಿಗಳು ತಾಜ್ ಮಹಲ್‌ನ್ನು ಪ್ರೇಮ ಸೌಧ ಅಂತಾನೂ ಕರೆಯುತ್ತಾರೆ. ಇದೀಗ ತಾಜ್ ಮಹಲ್‌ಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳು ಆರಂಭಗೊಂಡಿವೆ. ಈ ವಿಡಿಯೋದಲ್ಲಿ ಯುವಕನೋರ್ವ ತಾಜ್ ಮಹಲ್ ಒಳಗೆ ಗಂಗಾಜಲ ಸಿಂ ಪಡಣೆ ಮಾಡುತ್ತಿರೋದನ್ನು ಗಮನಿಸಬಹುದಾಗಿದೆ.
ಯುವಕ ಗಂಗಾಜಲ ಸಿಂಪಡಣೆ ಮಾಡುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಸಿಐಎಸ್‌ಎಫ್ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದುಕೊಂಡಿದೆ. ಯುವಕ ಗಂಗಾಜಲವನ್ನೇ ಸಿಂಪಡಿಸಿದ್ದಾನಾ ಅನ್ನೋದರ ಬಗ್ಗೆ ಪೊಲೀಸರು ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ನಾನು ಗಂಗಾಜಲ ಸಿಂಪಡಿಸಿರೋದಾಗಿ ಯುವಕ ಹೇಳಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಯುವಕ ಹಿಂದೂ ಮಹಸಾಭಾ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾನೆ. ತಾಜ್ ಮಹಲ್ ಒಳಭಾಗದಲ್ಲಿರುವ ಗೋರಿವರೆಗೂ ಪ್ರವೇಶಿಸಿದ ಬಳಿಕ ಗಂಗಾಜಲ ಸಿಂಪಡಿಸಿದ್ದು, ಮತ್ತೋರ್ವ ಈ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ.
ಪ್ರೇಮ ಸೌಧದ ಮುಂದೆ ಪತಿ ಜೊತೆ ಲವ್ ಮೂಡಲ್ಲಿ ಸತ್ಯ ಸೀರಿಯಲ್ ನಟಿ ಗೌತಮಿ ಜಾದವ್
ಯಾರು ಈ ಯುವಕರು?
ಶನಿವಾರ ಮಥುರಾ ಹಿಂದೂ ಮಹಾಸಭಾ ಅಧ್ಯಕ್ಷ ಛಾಯಾ ಗೌತಮ್ ಜೊತೆ ಶ್ಯಾಮ್ ಮತ್ತು ವಿನೇಶ್ ಕುಂತಲ್ ಎಂಬ ಯುವಕರು ತಾಜ್‌ಮಹಲ್ ಪ್ರವೇಶಿಸಿದ್ದರು. ವಿಡಿಯೋ ಶೇರ್ ಮಾಡಿಕೊಂಡಿರುವ ಯುವಕರು ತಾಜ್‌ಮಹಲ್ ಒಳಭಾಗದಲ್ಲಿರುವ ಗೋರಿಗಳ ಮೇಲೆ ಗಂಗಾಜಲ ಸಿಂಪಡಣೆ ಮಾಡಿಕೊಂಡಿರೋದಾಗಿ ಹೇಳಿಕೊಂಡಿದ್ದಾರೆ. ಹಿಂದೂ ಮಹಾಸಭಾ ಅಧ್ಯಕ್ಷ ಛಾಯಾ ಗೌತಮ್ ಜುಲೈ 31ರಂದು ತಮ್ಮ ಕಾರ್ಯಕರ್ತರ ಜೊತೆ ಕನ್ವರ್ ಯಾತ್ರೆಗೆ ತೆರಳಿದ್ದರು. 2ನೇ ಆಗಸ್ಟ್ ರಂದು ಮಥುರಾ ತಲುಪಿದಾಗ, ಅಧಿಕಾರಿಗಳು ಇವರನ್ನು ಗೃಹ ಬಂಧನದಲ್ಲಿರಿಸಿದ್ದರು. ಆದ್ರೆ ಶನಿವಾರ ಬೆಳಗ್ಗೆ ಇವರ ಸಹಚರರಾದ ಶ್ಯಾಮ್ ಮತ್ತು ವಿನೇಶ್ ತಾಜ್‌ಮಹಲ್ ಪ್ರವೇಶಿಸಿ ಗಂಗಾಜಲ ಸಿಂಪಡಿಸಿದ್ದಾರೆ.
ಇದಕ್ಕೂ ಮುನ್ನ ಆಗ್ರಾದ ಹಿಂದೂ ಮಹಾಸಭಾ ಅಧ್ಯಕ್ಷ ಮಿನಾರ್ ರಾಠೋಡ್ ಕನ್ವರ ಜೊತೆ ತಾಜ್‌ಮಹಲ್‌ಗೆ ತೆರಳಿದ್ದರು. ಆದ್ರೆ ಭದ್ರತಾ ಸಿಬ್ಬಂದಿ ಇವರನ್ನು ಪ್ರವೇಶದ್ವಾರದಲ್ಲಿಯೇ ತಡೆದು ವಾಪಸ್ ಕಳುಹಿಸಿದ್ದರು.
ಇದೆಂಥಾ ಪ್ರೀತಿ! ಎಲ್ಲಾ ಕಾನೂನು ಮೀರಿ ಕೈದಿಗೆ ತಾಜ್ ಮಹಲ್ ತೋರಿಸಲು ಕರೆದುಕೊಂಡು ಬಂದ ಪೊಲೀಸ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ