50 ವರ್ಷದ ಹಿಂದೆ ತಮಿಳುನಾಡು ದೇಗುಲದಿಂದ ಕಳುವಾಗಿದ್ದ ವಿಗ್ರಹ ಅಮೆರಿಕಾದಲ್ಲಿ ಪತ್ತೆ

By Suvarna NewsFirst Published Aug 9, 2022, 10:26 AM IST
Highlights

ಇದೆಂಥಾ ವಿಚಿತ್ರ ಅಲ್ವಾ, ಎಲ್ಲಿಯ ಅಮೆರಿಕಾ ಎಲ್ಲಿಯ ಭಾರತ. ಸುಮಾರು 50 ವರ್ಷಗಳ ಹಿಂದೆ ತಮಿಳುನಾಡಿನ ದೇಗುಲವೊಂದರಿಂದ ಕಳುವಾಗಿದ್ದ ಪಾರ್ವತಿ ದೇವಿಯ ವಿಗ್ರಹವೊಂದು ಅಮೆರಿಕಾದಲ್ಲಿ ಈಗ ಪತ್ತೆಯಾದ ಘಟನೆ ನಡೆದಿದೆ.

ಇದೆಂಥಾ ವಿಚಿತ್ರ ಅಲ್ವಾ, ಎಲ್ಲಿಯ ಅಮೆರಿಕಾ ಎಲ್ಲಿಯ ಭಾರತ. ಸುಮಾರು 50 ವರ್ಷಗಳ ಹಿಂದೆ ತಮಿಳುನಾಡಿನ ದೇಗುಲವೊಂದರಿಂದ ಕಳುವಾಗಿದ್ದ ಪಾರ್ವತಿ ದೇವಿಯ ವಿಗ್ರಹವೊಂದು ಅಮೆರಿಕಾದಲ್ಲಿ ಈಗ ಪತ್ತೆಯಾದ ಘಟನೆ ನಡೆದಿದೆ. 52 ಸೆಂಟಿ ಮೀಟರ್ ಎತ್ತರ ಇರುವ ತಾಮ್ರ ಮಿಶ್ರಲೋಹದ ವಿಗ್ರಹ ಇದಾಗಿದೆ. ಚೋಳರ ಕಾಲದ, 12ನೇ ಶತಮಾನಕ್ಕೆ ಸೇರಿದ ವಿಗ್ರಹ ಇದು ಎಂದು ತಿಳಿದು ಬಂದಿದೆ. ಈ ವಿಗ್ರಹವನ್ನು ಬಹಿರಂಗಪಡಿಸಿದ ಐಡಲ್ ವಿಂಗ್‌ ಈ ಮಾಹಿತಿ ನೀಡಿದೆ. ಸುಮಾರು ಅರ್ಧ ಶತಮಾನದ ಹಿಂದೆ ಕುಂಭಕೋಣಂನ ತಂಡನ್ತೋಟ್ಟಂನ ನಾದನಪುರೇಶ್ವರರ್ ಶಿವನ್ ದೇವಾಲಯದಿಂದ ಕಾಣೆಯಾಗಿದ್ದ ಪಾರ್ವತಿ ದೇವಿಯ ವಿಗ್ರಹವನ್ನು ಈಗ ನ್ಯೂಯಾರ್ಕ್‌ನಲ್ಲಿ ಪತ್ತೆಹಚ್ಚಲಾಗಿದೆ ಎಂದು ತಮಿಳುನಾಡು ಐಡಲ್ ವಿಂಗ್ ಸಿಐಡಿ ತಂಡ ಹೇಳಿದೆ. ಈ ವಿಗ್ರಹವನ್ನು ನ್ಯೂಯಾರ್ಕ್ ನಗರದ ಬೋನ್ಹ್ಯಾಮ್ಸ್ ಹರಾಜು ಮನೆಯಲ್ಲಿ ಪತ್ತೆ ಮಾಡಲಾಗಿದೆ ಎಂದು ಸಿಐಡಿ ತಿಳಿಸಿದೆ. 

1971 ರಲ್ಲಿ ದೇವಾಲಯದಿಂದ ವಿಗ್ರಹವನ್ನು ಕಳವು ಮಾಡಲಾಗಿದೆ ಎಂದು ಉಲ್ಲೇಖಿಸಿ 2019 ರ ಫೆಬ್ರವರಿಯಲ್ಲಿ ಸ್ಥಳೀಯ ನಿವಾಸಿಯಾದ ಕೆ. ವಾಸು ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಈ ಬಗ್ಗೆ ಆ ಸಮಯದಲ್ಲಿ ಯಾವುದೇ ಎಫ್‌ಐಆರ್ ದಾಖಲಾಗಿರಲಿಲ್ಲ.  ಆದರೆ  2019ರ ಫೆಬ್ರವರಿಯಲ್ಲಿ ವಿಗ್ರಹ ವಿಭಾಗವೂ ಒಂದು ಎಫ್ಐಆರ್‌ನ್ನು ದಾಖಲಿಸಿತ್ತು. ಆದರೆ ಪ್ರಕರಣವೂ ಹಾಗೆಯೇ ಬಾಕಿ ಉಳಿದಿತ್ತು. ಆದರೆ ಇತ್ತೀಚೆಗೆ ಐಡಲ್ ವಿಂಗ್ ಇನ್ಸ್‌ಪೆಕ್ಟರ್ ಎಂ ಚಿತ್ರಾ ಅವರು ತನಿಖೆಯನ್ನು ಕೈಗೆತ್ತಿಕೊಂಡ ನಂತರ ಈ ಪ್ರಕರಣ ಎಲ್ಲರ ಗಮನವನ್ನು ಸೆಳೆಯಿತು.

ಶವ ಹೂಳಲು ಗುಂಡಿ ಅಗೆಯುತ್ತಿದ್ದಾಗ ಸಿಕ್ತು ಭಗವಂತನ ಮೂರ್ತಿ, ಪುರಾತತ್ವ ಇಲಾಖೆಗೆ ಸೂಚನೆ

ವಿದೇಶದಲ್ಲಿರುವ ವಿವಿಧ ವಸ್ತುಸಂಗ್ರಹಾಲಯಗಳು ಮತ್ತು ಹರಾಜು ಮನೆಗಳಲ್ಲಿ ಚೋಳರ ಕಾಲದ ಪಾರ್ವತಿ ವಿಗ್ರಹಗಳನ್ನು ಅವರು ಹುಡುಕಲು ಪ್ರಾರಂಭಿಸಿದ ನಂತರ ಈ ಪ್ರಕರಣ ಹೆಚ್ಚು ಬೆಳಕಿಗೆ ಬಂದಿತು. ಸಂಪೂರ್ಣ ಹುಡುಕಾಟದ ನಂತರ, ಅವರಿಗೆ ನ್ಯೂಯಾರ್ಕ್‌ನ ಬೊನ್ಹಾಮ್ಸ್ ಹರಾಜು ಮನೆಯಲ್ಲಿ ಈ ವಿಗ್ರಹ ಪತ್ತೆಯಾಗಿದೆ. 12ನೇ ಶತಮಾನಕ್ಕೆ ಸೇರಿದ ಈ ವಿಗ್ರಹದ ಮೊತ್ತ 2,12,575 ಅಮೆರಿಕನ್‌ ಡಾಲರ್ ಅಂದರೆ 1,68,26,143 ರೂಪಾಯಿ ಎಂದು ಐಡಲ್ ವಿಂಗ್ ತಿಳಿಸಿದೆ. 

ಈ ದೇವಿ ವಿಗ್ರಹವೂ ಪಾರ್ವತಿ ಅಥವಾ ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಕರೆಯಲ್ಪಡುವ ಉಮಾ ಮಹೇಶ್ವರಿ ಆಗಿದ್ದು ದೇವಿ ನಿಂತಿರುವ ಸ್ಥಾನದಲ್ಲಿ ಚಿತ್ರಿಸಲಾಗಿದೆ. ಜೊತೆಗೆ ದೇವಿ ಕಿರೀಟವನ್ನು ಧರಿಸಿರುವಂತೆ ಕಾಣುತ್ತಾಳೆ. ಕರಂದ ಮುಕುಟ' ಎಂದು ಕರೆಯಲಾಗುವ ಇದನ್ನು ಒಂದರ ಮೇಲೊಂದರಂತೆ ಇರಿಸಲಾಗಿದೆ. ಮೇಲೇರುತ್ತದ ಹೋದಂತೆ ಗಾತ್ರದಲ್ಲಿ ಕಡಿಮೆಯಾಗುತ್ತಾ ಕಮಲದ ಮೊಗ್ಗುಗಳಲ್ಲಿ ಕೊನೆಗೊಳ್ಳುತ್ತದೆ. ಕಿರೀಟದಲ್ಲಿನ ಮಾದರಿಗಳ ನ್ನೇ ದೇವಿಯ ನೆಕ್ಲೇಸ್‌ಗಳು, ತೋಳು ಪಟ್ಟಿಗಳು, ಕವಚ ಮತ್ತು ಉಡುಪಿನಲ್ಲಿ ಪುನರಾವರ್ತಿಸಲಾಗುತ್ತದೆ, ಕಂಚಿನ ವಿನ್ಯಾಸದಿಂದ ಪ್ರತಿಮೆಯನ್ನು ಅಲಂಕರಿಸುತ್ತದೆ. ಈ ಶಿಲ್ಪವು ಕಲಾವಿದನ ತಾಂತ್ರಿಕ ಪ್ರತಿಭೆಗೆ ಸಾಕ್ಷಿಯಾಗಿದೆ. ಇದು ಚೋಳ ಸಾಮ್ರಾಜ್ಯದ ಆತ್ಮವಿಶ್ವಾಸ ಮತ್ತು ಸಮಯ ಗೌರವದ ಸೌಂದರ್ಯದ ನಿಯಮವನ್ನು ನಿರೂಪಿಸುತ್ತದೆ. ಭಾರತೀಯ ಇತಿಹಾಸಕರ ಶಿವರಾಮಮೂರ್ತಿಯವರ ಶೈಲಿಯ ಕಾಲಾನುಕ್ರಮವನ್ನು ಅನುಸರಿಸಿ, ಈ ಆಕೃತಿಯು 12 ನೇ ಶತಮಾನದ ಪ್ರಬುದ್ಧ ಚೋಳ ಶೈಲಿಯದ್ದಾಗಿದೆ ಎಂದು ವಿಗ್ರಹ ವಿಭಾಗ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮನೆಯಲ್ಲೇ ದೈವ ಸ್ವರೂಪಿ ತಾಯಿ ಪ್ರತಿಮೆ ಇಟ್ಟು ಮಕ್ಕಳಿಂದ ನಿತ್ಯ ಪೂಜೆ 

ಈ ಬಗ್ಗೆ ವಿಗ್ರಹ ವಿಭಾಗವು ಪುರಾತತ್ತ್ವ ಶಾಸ್ತ್ರದ ತಜ್ಞರನ್ನು ಸಹ ಸಂಪರ್ಕಿಸಿತು, ಅವರು ಎಚ್ಚರಿಕೆಯಿಂದ ಪರೀಕ್ಷಿಸಿದ ನಂತರ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಐಎಫ್‌ಪಿ ಪಾಂಡಿಚೇರಿಯಲ್ಲಿರುವ ವಿಗ್ರಹ ಹಾಗು ಬೋನ್‌ಹಮ್ಸ್ ಹರಾಜು ಸ್ಥಳದಲ್ಲಿ ಮಾರಾಟಕ್ಕಿಟ್ಟಿರುವ ಪಾರ್ವತಿಯ ವಿಗ್ರಹ ಎರಡೂ ಒಂದೇ ಆಗಿವೆ. ಅಂದರೆ ಬೋನ್‌ಹಮ್ಸ್‌ನಲ್ಲಿರುವ ಪಾರ್ವತಿ ವಿಗ್ರಹವು ಕುಂಭಕೋಣಂನ ತಂದಂತೋಟ್ಟಂನಲ್ಲಿರುವ ನಾದನಪುರೇಶ್ವರರ್ ಶಿವನ್ ದೇವಾಲಯಕ್ಕೆ ಸೇರಿದೆ ಆಗಿದೆ ಎಂದು ಹೇಳಿದರು.

ಐಡಲ್ ವಿಂಗ್ ಸಿಐಡಿ ಡಿಜಿಪಿ ಜಯಂತ್ ಮುರಳಿ ಅವರ ಪ್ರಕಾರ, ಅವರ ತಂಡವು ವಿಗ್ರಹವನ್ನು ಮರಳಿ ತರಲು ದಾಖಲೆಗಳನ್ನು ಸಿದ್ಧಪಡಿಸಿದೆ. "ಐಡಲ್ ವಿಂಗ್ ವಿಗ್ರಹವನ್ನು ಹಿಂಪಡೆಯಲು ಮತ್ತು UNESCO ಒಪ್ಪಂದದ ಅಡಿಯಲ್ಲಿ ಕುಂಭಕೋಣಂನ ತಂದಂತೋಟ್ಟಂನಲ್ಲಿರುವ ನಾದನಪುರೇಶ್ವರರ್ ಶಿವನ್ ದೇವಾಲಯಕ್ಕೆ ಅದನ್ನು ಮರುಸ್ಥಾಪಿಸಲು ಆಶಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

click me!