
ಶಿಮ್ಲಾ: ಹಿಂದೂ ದೇಗುಲದ ಆವರಣವೊಂದರಲ್ಲಿ ಮುಸ್ಲಿಂ ಜೋಡಿಯೊಂದು ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಈ ಮೂಲಕ ಧಾರ್ಮಿಕ ಸಾಮರಸ್ಯಕ್ಕೆ ದೇಗುಲ ಸಾಕ್ಷಿಯಾಗಿದೆ. ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ರಾಮಂಪುರದಲ್ಲಿರುವ ಹಿಂದೂ ದೇಗುಲವೊಂದರಲ್ಲಿ ಭಾನುವಾರ ಈ ಮದ್ವೆ ನಡೆದಿದೆ. ವಿಶ್ವ ಹಿಂದೂ ಪರಿಷದ್‌ನಿಂದ ನಡೆಸಲ್ಪಡುವ ಠಾಕೂರ್ ಸತ್ಯನಾರಾಯಣ ದೇಗುಲದಲ್ಲಿ ಈ ವಿಶೇಷ ಮದ್ವೆ ನಡೆದಿದೆ. ಹಿಂದೂ ದೇಗುಲದಲ್ಲಿ ನಡೆದ ಮುಸ್ಲಿಂ ಮದ್ವೆಗೆ ಮುಸ್ಲಿಂ ಹಾಗೂ ಹಿಂದೂ ಸಮುದಾಯದ ಜನರು ಸಾಕ್ಷಿಯಾದರು.
ಮುಸ್ಲಿಂ ಧರ್ಮಗುರು ಹಾಗೂ ವಕೀಲರ ಉಪಸ್ಥಿತಿಯಲ್ಲಿ ದೇಗುಲದ ಆವರಣದಲ್ಲಿ ನಿಖಾಃ ಕಾರ್ಯಕ್ರಮದ ವಿಧಿವಿಧಾನಗಳು ನಡೆದವು. ಧಾರ್ಮಿಕ ಸೌಹಾರ್ದತೆ ಮತ್ತು ಸಹೋದರತ್ವದ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈ ಮದುವೆಯನ್ನು ದೇವಸ್ಥಾನದ ಆವರಣದಲ್ಲಿ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಇನ್ನು ವಿಶೇಷವೆಂದರೆ ಈ ಸತ್ಯನಾರಾಯಣ ದೇವಾಲಯ ಸಂಕೀರ್ಣವು (Satyanarayan Temple complex) ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ(Rashtriya Swayamsevak Sangh) ಜಿಲ್ಲಾ ಕಛೇರಿಯಾಗಿರುವುದು ಗಮನಾರ್ಹ ವಿಚಾರವಾಗಿದೆ.
ಕಿತ್ತಾಟದ ಮಧ್ಯೆ ಧಾರ್ಮಿಕ ಸಾಮರಸ್ಯ: ಮಸೀದಿಗೆ ಬಣ್ಣ ಹೊಡೆಸಿದ ಹಿಂದೂ ವ್ಯಕ್ತಿ
ವಿಶ್ವ ಹಿಂದೂ ಪರಿಷತ್ತು (Vishwa Hindu Parishad) ಇಲ್ಲಿ ದೇವಸ್ಥಾನ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಚೇರಿಯನ್ನು ನಡೆಸುತ್ತಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಆರ್‌ಎಸ್‌ಎಸ್ ಆಗಾಗ್ಗೆ ಮುಸ್ಲಿಂ ವಿರೋಧಿ ಎಂದು ಆರೋಪಿಸಲಾಗುತ್ತದೆ. ಆದರೆ ಇಲ್ಲಿ ಹಿಂದೂ ದೇವಾಲಯದ ಆವರಣದಲ್ಲಿ ಮುಸ್ಲಿಂ ದಂಪತಿಗಳು ವಿವಾಹವಾದರು. ಸನಾತನ ಧರ್ಮವು ಯಾವಾಗಲೂ ಎಲ್ಲರನ್ನೂ ಒಳಗೊಳ್ಳುವ ಮೂಲಕ ಮುನ್ನಡೆಯಲು ಪ್ರತಿಯೊಬ್ಬರನ್ನು ಪ್ರೇರೇಪಿಸುತ್ತದೆ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ ಎಂದು ಠಾಕೂರ್ ಸತ್ಯನಾರಾಯಣ ದೇವಸ್ಥಾನ (Thakur Satyanarayan Temple) ಟ್ರಸ್ಟ್ ರಾಂಪುರದ ಪ್ರಧಾನ ಕಾರ್ಯದರ್ಶಿ ವಿನಯ್ ಶರ್ಮಾ (Vinay Sharma) ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಸಂಪಾದಕೀಯ : ಗಾಂಧಿ ತತ್ವಗಳ ಪಾಲನೆಯಲ್ಲೇ 150ನೇ ವರ್ಷಾಚರಣೆ ಯಶಸ್ಸು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ