ದೇಶದಲ್ಲಿ ಕಾಂಡೋಂಗೆ ಭರ್ಜರಿ ಡಿಮ್ಯಾಂಡ್: ರಾತ್ರಿಗಿಂತ ಹಗಲೇ ಹೆಚ್ಚು ಬುಕ್ಕಿಂಗ್

By Kannadaprabha NewsFirst Published Dec 27, 2020, 7:48 AM IST
Highlights

 ‘ಡಂಝೋ’ ಆ್ಯಪ್‌ನ ವರದಿಯಲ್ಲಿ ಕುತೂಹಲದ ಮಾಹಿತಿ | ಹಗಲು ಹೊತ್ತಿನಲ್ಲಿ ಕಾಂಡೋಂ ಬುಕ್ಕಿಂಗ್‌ 3 ಪಟ್ಟು ಹೆಚ್ಚಳ

ಚೆನ್ನೈ(ಡಿ.27): ಕೊರೋನಾ ನಿಯಂತ್ರಣಕ್ಕಾಗಿ ವಿಧಿಸಲಾಗಿದ್ದ ದೇಶವ್ಯಾಪಿ ಲಾಕ್‌ಡೌನ್‌ ವೇಳೆ ಕಾಂಡೋಮ್‌ ಮಾರಾಟ ಭರ್ಜರಿಯಾಗಿ ನಡೆದಿದೆ. ಅದರಲ್ಲೂ ರಾತ್ರಿಗಿಂತ ಹಗಲಿನ ವೇಳೆಯೇ ಭಾರತೀಯರು ಹೆಚ್ಚು ಕಾಂಡೋಮ್‌ಗಳನ್ನು ಖರೀದಿಸಿದ್ದಾರೆ!

ಮನೆಬಾಗಿಲಿಗೇ ವಸ್ತುಗಳನ್ನು ತಲುಪಿಸುವ ‘ಡಂಝೋ’ ಆ್ಯಪ್‌ ಒದಗಿಸಿರುವ ಮಾಹಿತಿಯ ಪ್ರಕಾರ, 2020ರಲ್ಲಿ ಹಗಲು ಹೊತ್ತಿನಲ್ಲಿ ಆನ್‌ಲೈನ್‌ ಮೂಲಕ ಕಾಂಡೋಮ್‌ ಹಾಗೂ ರೋಲಿಂಗ್‌ ಪೇಪರ್‌ ಖರೀದಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಕೊರೋನಾ: ಡಿ.26ಕ್ಕೆ 300ಕ್ಕಿಂತ ಕಮ್ಮಿ ಸಾವು: 6 ತಿಂಗಳಲ್ಲೇ ಮೊದಲು

ರಾತ್ರಿಗಿಂತ ಹಗಲು ಹೊತ್ತಿನಲ್ಲಿ ಸರಾಸರಿ 3 ಪಟ್ಟು ಅಧಿಕ ಕಾಂಡೋಮ್‌ ಬುಕ್ಕಿಂಗ್‌ ಮಾಡಲಾಗಿದೆ. ಇನ್ನು ನಗರಗಳ ಪೈಕಿ ಹೈದರಾಬಾದ್‌ನಲ್ಲಿ 6 ಪಟ್ಟು, ಚೆನ್ನೈ 5 ಪಟ್ಟು, ಜೈಪುರ 4 ಪಟ್ಟು, ಮುಂಬೈ ಹಾಗೂ ಬೆಂಗಳೂರಿನಲ್ಲಿ ತಲಾ 3 ಪಟ್ಟು ಕಾಂಡೋಮ್‌ ಬುಕ್ಕಿಂಗ್‌ ಹೆಚ್ಚಿದೆ ಎಂದು ಕಂಪನಿಯ ವರದಿ ತಿಳಿಸಿದೆ.

ಇನ್ನು ಸಿಗರೇಟು ತಯಾರಿಸಲು ಬಳಸಲಾಗುವ ರೋಲಿಂಗ್‌ ಪೇಪರ್‌ಗೂ ಬೇಡಿಕೆ ಹೆಚ್ಚಿದ್ದು, ಬೆಂಗಳೂರು ಮೊದಲ ಸ್ಥಾನ ಪಡೆದಿದೆ. ಬೆಂಗಳೂರಲ್ಲಿ ಇವುಗಳ ಬೇಡಿಕೆ 22 ಪಟ್ಟು ಹೆಚ್ಚಿದೆ

ಸತತ 55 ದಿನ ICUನಲ್ಲಿ ಚಕಿತ್ಸೆ; ಕೊರೋನಾ ಗೆದ್ದ 176 ಕೆಜಿ ತೂಕದ ಅಸ್ತಮಾ ರೋಗಿ!

 ಗರ್ಭನಿರೋಧಕ ಐ-ಪಿಲ್‌ ಮಾತ್ರೆ ಖರೀದಿಯಲ್ಲಿ ಬೆಂಗಳೂರು ಮೊದಲ ಸ್ಥಾನಿ. ನಂತರದ ಸ್ಥಾನಗಳು ಪುಣೆ, ಗುಡಗಾಂವ್‌, ಹೈದರಾಬಾದ್‌ ಹಾಗೂ ದಿಲ್ಲಿ ಪಾಲು. ಗರ್ಭ ಪರೀಕ್ಷೆ ಕಿಟ್‌ ಖರೀದಿಯಲ್ಲಿ ಜೈಪುರ ನಂ.1.ಸ್ಥಾನ ಪಡೆದಿದೆ.

click me!