ಬಾಲ್ಯವಿವಾಹದ ವಿರುದ್ಧ ಬೃಹತ್ ದಾಳಿ ನಡೆಸಿರುವ ಅಸ್ಸಾಂ ಸರ್ಕಾರ ಕಳೆದ ಕೆಲ ದಿನಗಳಿಂದ ಸಾವಿರಾರು ಜನರನ್ನು ಬಂಧಿಸಿದ ಬಗ್ಗೆ ಹೈಕೋರ್ಚ್ ಅಸಮಾಧಾನ ವ್ಯಕ್ತಪಡಿಸಿದೆ.
ಗುವಾಹಟಿ: ಬಾಲ್ಯವಿವಾಹದ ವಿರುದ್ಧ ಬೃಹತ್ ದಾಳಿ ನಡೆಸಿರುವ ಅಸ್ಸಾಂ ಸರ್ಕಾರ ಕಳೆದ ಕೆಲ ದಿನಗಳಿಂದ ಸಾವಿರಾರು ಜನರನ್ನು ಬಂಧಿಸಿದ ಬಗ್ಗೆ ಹೈಕೋರ್ಚ್ ಅಸಮಾಧಾನ ವ್ಯಕ್ತಪಡಿಸಿದೆ. ಜನರ ಖಾಸಗಿ ಬದುಕಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದ್ದು, ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವ ಅಗತ್ಯವಿಲ್ಲ. ಆರೋಪಿಗಳ ಮೇಲೆ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಮತ್ತು ಅತ್ಯಾಚಾರ ಆರೋಪಗಳನ್ನು ಹೊರಿಸುವ ಅಗತ್ಯವೂ ಇರಲಿಲ್ಲ ಎಂದು ಅಸ್ಸಾಂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್ ಇದೆಲ್ಲವು ವಿಲಕ್ಷಣ ಆರೋಪಗಳಾಗಿವೆ ಎಂದು ಹೇಳಿದೆ.
ನಿರೀಕ್ಷಣಾ ಮತ್ತು ಮಧ್ಯಂತರ ಜಾಮೀನು ಕೋರಿ ಆರೋಪಿಗಳ ಗುಂಪು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ.ಸುಮನ್ ಶ್ಯಾಮ ನ್ಯಾಯಪೀಠ, ತಕ್ಷಣಕ್ಕೆ ಜಾರಿಗೆ ಬರುವಂತೆ ಎಲ್ಲ ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸೂಚಿಸಿದೆ. ಬಂಧಿಸಿ ವಿಚಾರಣೆ ನಡೆಸಬೇಕಾದ ವಿಷಯ ಇದಲ್ಲ. ತಪ್ಪಿಸ್ಥರೆಂದು ತಿಳಿದರೆ ಚಾರ್ಜ್‌ಶೀಟ್ ಸಲ್ಲಿಸಿ. ನಿಜವಾದ ತಪ್ಪಿತಸ್ಥರಾಗಿದ್ದಾರೆ ನ್ಯಾಯಾಲಯ ಶಿಕ್ಷೆ ನೀಡುತ್ತದೆ ಎಂದು ಪೀಠ ಹೇಳಿದೆ.
ಬಾಲ್ಯ ವಿವಾಹ ನಿಗ್ರಹಕ್ಕೆ ಪಣತೊಟ್ಟ ಅಸ್ಸಾಂ ಸರ್ಕಾರ: 2 ಸಾವಿರಕ್ಕೂ ಹೆಚ್ಚು ಜನರ ಬಂಧನ, ಹಲವರಿಂದ ಪ್ರತಿಭಟನೆ..!
ಆರೋಪಿಗಳ ಮೇಲೆ ಪೋಕ್ಸೊ ಕಾಯ್ದೆಯಡಿ ಜಾಮೀನು ರಹಿತ ಪ್ರಕರಣ ದಾಖಲಾಗಿದೆ ಎಂದು ಸರ್ಕಾರಿ ವಕೀಲರು ತಿಳಿಸಿದಾಗ ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ಇಲ್ಲಿ ಪೋಕ್ಸೊ ಎಂದರೆ ಏನು? ಪೋಕ್ಸೊ ಹಾಕಿರುವುದರಿಂದ ನ್ಯಾಯಮೂರ್ತಿಗಳು ಇದರಲ್ಲೇನಿದೆ ಅಂತ ನೋಡುವುದಿಲ್ಲ ಎಂದರ್ಥವೇ? ಹೈಕೋರ್ಟ್ ಯಾರನ್ನೂ ಖುಲಾಸೆಗೊಳಿಸುತ್ತಿಲ್ಲ. ತನಿಖೆಯ ಬಗ್ಗೆ ಸರ್ಕಾರವನ್ನು ತಡೆಯುತ್ತಿಲ್ಲ ಎಂದರು. ಯಾವುದೇ ಅತ್ಯಾಚಾರದ ಆರೋಪಗಳಿಲ್ಲದೇ, 376 ಸೆಕ್ಷನ್ ಯಾಕೆ ವಿಧಿಸಲಾಗಿದೆ? ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಇತ್ತೀಚೆಗೆ ಬಾಲ್ಯವಿವಾಹ ಪ್ರಕರಣಗಳ ವಿರುದ್ಧ ಸಮರ ಆರಂಭಿಸಿದ್ದ ಅಸ್ಸಾಂ ಸರ್ಕಾರ, 3000ಕ್ಕೂ ಹೆಚ್ಚು ಜನರನ್ನು ಬಂಧಿಸಿತ್ತು.
ಬಾಲ್ಯ ವಿವಾಹದ ವಿರುದ್ಧ ಸಿಎಂ ಹಿಮಂತ್ ದಿಟ್ಟ ಹೆಜ್ಜೆ, ನಾಳೆಯಿಂದಲೇ ಅರೆಸ್ಟ್!