ವಿವಾದಿತ ಸ್ಥಳ ಸರಸ್ವತಿ ಮಂದಿರ, ಇಲ್ಲಿ ನಮಾಜ್ ನಿಲ್ಲಿಸಿ, ಭೋಜಶಾಲಾ ಕುರಿತು ಹೈಕೋರ್ಟ್ ತೀರ್ಪು

Published : May 15, 2026, 03:22 PM IST
Bhojshala

ಸಾರಾಂಶ

ಭೋಜಶಾಲಾ ವಿವಾದಿತ ಸ್ಥಳ ಹಿಂದೂ ದೇವಸ್ಥಾನವಾಗಿದೆ. ಬಳಿಕ ಕೆಲ ಭಾಗ ಒಡೆದ ಕಮಲ್ ಮೌಲಾ ಮಸೀದಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ನಮಾಜ್ ಮಾಡುವುದು ನಿಲ್ಲಿಸಬೇಕು, ಇದು ಸರಸ್ವತಿ ಮಂದಿರ ಸ್ಥಳ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 

ಇಂದೋರ್ (ಮೇ.15) ಮಥುರಾ, ಕಾಶಿ ವಿಶ್ವನಾಥ ಸೇರಿದಂತೆ ಹಲವು ವಿವಾದಿತ ಸ್ಥಳದಂತೆ ಭೋಜಶಾಲ ಮಂದಿರ ಸ್ಥಳವೂ ಹಲವು ಶತಮಾನಗಳಿಂದ ವಿವಾದಿತ ಸ್ಥಳವಾಗಿದೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ಈ ವಿವಾದಿತ ಭೋಜಶಾಲ ಸರಸ್ವತಿ ಮಂದಿರವಾಗಿದೆ. ಇಲ್ಲಿ ನಮಾಜ್ ಮಾಡುವುದು ತಕ್ಷಣವೇ ನಿಲ್ಲಿಸಲು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ. ಈ ವಿವಾದಿತ ರಚನೆ ಹಿಂದೂ ದೇವಸ್ಥಾನ ಎಂದು ಹೈಕೋರ್ಟ್ ಮಾನ್ಯ ಮಾಡಿದೆ. ಇದೇ ವೇಳೆ 2003ರಲ್ಲಿ ಭಾರತೀಯ ಪುರಾತತ್ವ ಇಲಾಖೆ ಹೊರಡಿಸಿ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ.

ಸರಸ್ವತಿ ದೇವಸ್ಥಾನ ಇದು ಕಮಲ್ ಮೌಲಾನ ಮಸೀದಿ ಅಲ್ಲ

ಭೋಜಶಾಲ ಮಂದಿರ ಸಂಕೀರ್ಣದಲ್ಲೇ ಕಮಲ್ ಮೌಲಾನ ಮಸೀದಿ ನಿರ್ಮಾಣ ಮಾಡಲಾಗಿದೆ. ಹಿಂದೂ ದೇವಸ್ಥಾನ ಕೆಡವಿ ಅದರ ಒಂದು ಭಾಗದಲ್ಲಿ ಮಸೀದಿ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಇಲ್ಲಿ ವಿವಾದ ಶುರುವಾಗಿತ್ತು. ಮೊಘಲರು, ಸುಲ್ತಾನರ ದಾಳಿ ಸಂದರ್ಭದಲ್ಲಿ ದೇವಸ್ಥಾನ ಕೆಡವಿ ಮಸೀದಿ ಮಾಡಲಾಗಿತ್ತು. ವಿವಾದ ತೀವ್ರಗೊಳ್ಳುತ್ತಿದ್ದಂತೆ ಕೋರ್ಟ್ ಸೂಚನೆಯಂತೆ ಭಾರತೀಯ ಪುರಾತತ್ವ ಇಲಾಖೆ ಸಮೀಕ್ಷೆ ನಡೆಸಿ ವರದಿ ನೀಡಿತ್ತು. ಈ ವರದಿ, ಇತಿಹಾಸದಲ್ಲಿ ದಾಖಲಾಗಿರುವ ಮಾಹಿತಿಗಳ ಸಂಗ್ರಹಿಸಿ ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ. ವೈಜ್ಞಾನಿಕ ಸಮೀಕ್ಷೆ ಹಾಗೂ ಇತರ ದಾಖಲೆ ಆಧರಿಸಿ ಇದು ಸರಸ್ವತಿ ದೇವಿಯ ಮಂದಿರವಾಗಿದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಇಡೀ ಸಂಕೀರ್ಣ ವಾಗ್ದೇವಿ ದೇವಸ್ಥಾನವಾಗಿತ್ತು ಅನ್ನೋದಕ್ಕೆ ಪುರಾವೆಗಳಿವೆ ಎಂದಿದೆ.

ದೇವಸ್ಥಾನ ಕಡೆಮಿ ಕಮಲ್ ಮೌಲ ಮಸೀದಿ ನಿರ್ಮಾಣ

ಮಧ್ಯಪ್ರದೇಶ ಹೈಕೋರ್ಟ್ ತನ್ನ ಆದೇಶದಲ್ಲಿ ಭೋಜಶಾಲ ಸಂಕೀರ್ಣದಲ್ಲಿ ನಿರ್ಮಾಣವಾಗಿರುವ ಕಮಲ್ ಮೌಲ ಮಸೀದಿಯನ್ನು ದೇವಸ್ಥಾನದ ಅವಶೇಷಗಳಿಂದ ನಿರ್ಮಿಸಲಾಗಿದೆ ಎಂದಿದೆ. ಭೋಜಶಾಲ ಸಂಕೀರ್ಣ ದೇಶದ ಸಂಸ್ಕೃತ ಕಲಿಕಾ ಕೇಂದ್ರವಾಗಿತ್ತು. ಇಲ್ಲಿ ರಾಜಾ ಭೋಜ ಅರಸ ಕಲೆ ಸಂಸ್ಕೃತಿ, ಭಾಷೆ ಅಧ್ಯಯನಕ್ಕೆ ಒತ್ತು ನೀಡಿದ್ದ. ಹೀಗಾಗಿ ಭೋಜಶಾಲ ಸಂಕೀರ್ಣ ಎಂದೇ ಖ್ಯಾತಿಕೊಂಡಿತ್ತು. ಈ ಆವರಣದಲ್ಲಿದ್ದ ಸರಸ್ವತಿ ದೇವಸ್ಥಾನ ಕೆಡವಿ ಕಮಲ್ ಮೌಲ ಮಸೀದಿ ನಿರ್ಮಿಸಲಾಗಿದೆ. ಮೂಲತಹ ಇದು ಹಿಂದೂಗಳ ಸರಸ್ವತಿ ದೇವಸ್ಥಾನ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.

2003ರ ಆದೇಶ ರದ್ದುಗೊಳಿಸಿದ ಕೋರ್ಟ್

2003ರಲ್ಲಿ ವಿವಾದ ತೀವ್ರಗೊಳ್ಳುತ್ತಿದ್ದಂತೆ ಭಾರತೀಯ ಪುರಾತತ್ವ ಇಲಾಖೆ ಆದೇಶ ಹೊರಡಿಸಿತ್ತು. ಮಂಗಳವಾರ ಹಿಂದೂಗಳಿಗೆ ಪೂಜೆಗೆ ಅವಕಾಶ ಮಾಡಿಕೊಟ್ಟರೆ, ಶುಕ್ರವಾರ ಮುಸ್ಲಿಮರಿಗೆ ನಮಾಜ್‌ಗೆ ಅವಕಾಶ ಮಾಡಿಕೊಟ್ಟಿತ್ತು. ಈ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ. ಇಲ್ಲಿ ನಮಾಜ್ ಮಾಡುವುದು ನಿಲ್ಲಿಸಲು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸೂಚಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೊನೆ ಫೋನ್ ಕರೆ ಬಳಿಕ ಮಗಳೇ ಇಲ್ಲ, ಮದ್ವೆಯಾದ ಐದೇ ತಿಂಗಳಿಗೆ ದುರಂತ ಅಂತ್ಯಕಂಡ ಯುವತಿ
ಯೋಗಿ ಮಾದರಿಯಲ್ಲೇ ಪಶ್ಚಿಮ ಬಂಗಾಳ, 24 ಬುಲ್ಡೋಜರ್ ಮೂಲಕ ಅಕ್ರಮ ಕಟ್ಟಡ ನೆಲೆಸಮ