
ಕೋಲ್ಕತಾ (ಮೇ.15) ಮಮತಾ ಬ್ಯಾನರ್ಜಿಯ ಟಿಎಂಸಿ ಆಡಳಿತ ಅಂತ್ಯಗೊಳಿಸಿದ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ನೂತನ ಸರ್ಕಾರ ರಚಿಸಿದೆ. ಸುವೆಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸಿಎಂ ಸುವೆಂದು ಅಧಿಕಾರಿ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಮಾದರಿ ಅನುಸರಿಸಿದ್ದಾರೆ. ಅತಿಕ್ರಮ ಕಟ್ಟಡಗಳ ತೆರವಿಗೆ ಸುವೆಂದು ಅದಿಕಾರಿ ಬರೋಬ್ಬರಿ 24 ಬುಲ್ಡೋಜರ್ ಬಳಸಿದ್ದಾರೆ. ಸಿಲಿಗುರಿ ಪ್ರದೇಶದಲ್ಲಿರುವ ಎಲ್ಲಾ ಅತಿಕ್ರಮ ಕಟ್ಟಡಗಳ ತೆರವಗೆ ಸುವೆಂದು ಅದಿಕಾರಿ ಆದೇಶ ನೀಡಿದ್ದಾರೆ.
ಸುವೆಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿದ ಬೆನ್ನಲ್ಲೇ ಸತತ ಸಭೆ ಮಾಡಿ ಪಶ್ಚಿಮ ಬಂಗಾಳದಲ್ಲಿ ಕೈಗೊಳ್ಳಬೇಕಾದ ಮಹತ್ತರ ಬದಲಾವಣೆ ಹಾಗೂ ಆಡಳಿತ ಕುರಿತು ಸೂಚನೆ ನೀಡಿದ್ದಾರೆ. ಸುವೆಂದು ಅದಿಕಾರಿ ಸೂಚನೆ ಬೆನ್ನಲ್ಲೇ ಸಿಲಿಗುರಿ ಸಬ್ ಡಿವಿಶನ್ ಕಚೇರಿಯಲ್ಲಿ ಅಧಿಕಾರಿಗಳು ಸತತ ಸಭೆ ನಡೆಸಿದ್ದಾರೆ. ಇದೇ ವೇಳೆ ಅಕ್ರಮ ಕಟ್ಟಡಗಳು, ಅತಿಕ್ರಮ ಪ್ರವೇಶ ತಡೆಯಲು ಕಾರ್ಯಾಚರಣೆ ನಡೆಸಿದ್ದಾರೆ.
ಸಿಲುಗುರಿಯಲ್ಲಿ ಅತೀ ಹೆಚ್ಚು ಕಟ್ಟಡಗಳು ಅತಿಕ್ರಮವಾಗಿ ನಿರ್ಮಾಣವಾಗಿದೆ. ಈ ಕುರಿತು ಅಧಿಕಾರಿಗಳು ಅಕ್ರಮ ಕಟ್ಟಡಗಳಿಗೆ ನೋಟಿಸ್ ನೀಡಿ ಖಾಲಿ ಮಾಡಲು ಸೂಚಿಸಿದೆ. ಇದರ ಬೆನ್ನಲ್ಲೇ ಪ್ರತಿಭಟನೆಗಳು ನಡೆಯುತ್ತಿದೆ. ಹೀಗಾಗಿ ಹೆಚ್ಚಿನ ಬಂದೋಬಸ್ತ್ ಮೂಲಕ ತೆರವು ಕಾರ್ಯಾಚರಣೆಗೆ ಸೂಚನೆ ನೀಡಲಾಗಿತ್ತು. ಏಕಕಾಲದಲ್ಲಿ ಸಿಲುಗುರಿಯಲ್ಲಿ ಕಾರ್ಯಾಚರಣೆ ಅವಶ್ಯಕತೆ ಇದ್ದ ಕಾರಣ 24 ಬುಲ್ಡೋಜರ್‌ಗಳನ್ನು ಉತ್ತರ ಪ್ರದೇಶದಿಂದ ತರಿಸಿಕೊಳ್ಳಲಾಗಿದೆ.
ಸಿಲಿಗುರಿ ಮುನ್ಸಿಪಲ್ ಕಾರ್ಪೋರೇಶನ್ ಸಂಕಷ್ಟಕ್ಕೆ ಸಿಲುಕಿದೆ. ಮುನ್ಸಿಪಲ್ ಕಾರ್ಪೋರೇಶನ್ ಅಕ್ರಮ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ ಸುಮ್ಮನೆ ಕುಳಿತಿದೆ. ಹಲವು ಅಕ್ರಮ ಕಟ್ಟಡಗಳಿಗೆ ನಕಲಿ ದಾಖಲೆ ಪಡೆದು ಅನುಮತಿ ನೀಡಿದೆ. ಸಿಲುಗುರಿಯಲ್ಲಿ ಈ ಮಟ್ಟಕ್ಕೆ ಅಕ್ರಮ ಕಟ್ಟಡಗಳು ತಲೆ ಎತ್ತಲು ಮುನ್ಸಿಪಲ್ ಕಾರ್ಪೋರೇಶನ್ ಕಾರಣ ಎಂಬ ಆರೋಪಗಳು ಕೇಳಿಬಂದಿದೆ.
ಪಶ್ಚಿಮ ಬಂಗಾಳದ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ಯುಪಿ ಮಾಡೆಲ್ ಕುರಿತು ಹೇಳಿತ್ತು. ಬಂಗಾಳದಲ್ಲಿ ಅಧಿಕಾರಕ್ಕೆ ಬಂದರೆ ಯೋಗಿ ಆದಿತ್ಯನಾಥ್ ಮಾಡೆಲ್ ತರುವುದಾಗಿ ಭರವಸೆ ನೀಡಿದ್ದರು. ಅಧರಲ್ಲೂ ಮುಖ್ಯವಾಗಿ ಅತಿಕ್ರಮವಾಗಿ ಬಾಂಗ್ಲಾದೇಶದಿಂದ ಬಂಗಾಳ ಪ್ರವೇಶಿಸಿ ನೆಲೆಸಿರುವವನ್ನು ಹೊರಕ್ಕೆ ಕಳುಹಿಸುವ ಕುರಿತು ಎಚ್ಚರಿಕೆ ನೀಡಿತ್ತು. ಇದರಂತೆ ಬಂಗಾಳದಲ್ಲಿ ಯೋಗಿ ಮಾಡೆಲ್ ಕಾರ್ಯರೂಪಕ್ಕೆ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ