24 ಗಂಟೆಯಲ್ಲಿ 72 ಕೆಜಿ ಹಾಲು: ದಾಖಲೆ ಬರೆದ ಹೆಚ್‌ಎಫ್ ತಳಿಯ ಹಸು

By Anusha KbFirst Published Feb 6, 2023, 7:19 PM IST
Highlights

ಕೆಲ ದಿನಗಳ ಹಿಂದಷ್ಟೇ ಆಂಧ್ರಪ್ರದೇಶದ ಎಮ್ಮೆಯೊಂದು ದಿನಕ್ಕೆ 26 ಲೀಟರ್‌ಗೂ ಹೆಚ್ಚು ಹಾಲು ನೀಡುವ ಮೂಲಕ ಸುದ್ದಿಯಾಗಿತ್ತು. ಈಗ ಹೆಚ್‌ ಎಫ್ ತಳಿಯ ಹಸುವೊಂದು 24 ಗಂಟೆಯಲ್ಲಿ 72 ಕೆಜಿ ಹಾಲು ನೀಡುವ ಮೂಲಕ ಹೊಸ ದಾಖಲೆ ಬರೆದಿದೆ

ಜಾಗ್ರಾಣ್: ಕೆಲ ದಿನಗಳ ಹಿಂದಷ್ಟೇ ಆಂಧ್ರಪ್ರದೇಶದ ಎಮ್ಮೆಯೊಂದು ದಿನಕ್ಕೆ 26 ಲೀಟರ್‌ಗೂ ಹೆಚ್ಚು ಹಾಲು ನೀಡುವ ಮೂಲಕ ಸುದ್ದಿಯಾಗಿತ್ತು. ಈಗ ಹೆಚ್‌ ಎಫ್ ತಳಿಯ ಹಸುವೊಂದು 24 ಗಂಟೆಯಲ್ಲಿ 72 ಕೆಜಿ ಹಾಲು ನೀಡುವ ಮೂಲಕ ಹೊಸ ದಾಖಲೆ ಬರೆದಿದೆ.  ಕುರುಕ್ಷೇತ್ರದ ಇಬ್ಬರು ರೈತರಿಗೆ ಸೇರಿದ ಈ ಹೆಚ್ ಎಫ್ ತಳಿಯ ಹಸು ಈ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದೆ.  ಜಾಗರಣ್‌ನಲ್ಲಿ ನಡೆದ ವಾರ್ಷಿಕ ಅಂತಾರಾಷ್ಟ್ರೀಯ ಮಟ್ಟದ ಡೈರಿ ಹಾಗೂ ಕೃಷಿ ವಸ್ತು ಪ್ರದರ್ಶನದಲ್ಲಿ ಈ ಸಾಧನೆ ಜರುಗಿದೆ.  ಶುಕ್ರವಾರ ಫೆಬ್ರವರಿ ಮೂರರಂದು ಜಾಗರಣ್‌ನಲ್ಲಿ ಆರಂಭವಾದ ಮೂರು ದಿನಗಳ ಕೃಷಿ ಮೇಳದಲ್ಲಿ  ಭಾನುವಾರ ಹಾಲು ಕರೆಯುವ ಮತ್ತು ಹಸು ತಳಿಗೆ ಸಂಬಂಧಿಸಿದ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ  ಹಸು 24 ಗಂಟೆಯಲ್ಲಿ 72 ಕೆಜಿ ಹಾಲು ನೀಡಿದೆ. 

ಈ ಹೆಚ್‌ಎಫ್ ತಳಿಯ ಹಸುವಿನ ಮಾಲೀಕರಾದ ಕುರುಕ್ಷೇತ್ರದ (Kurukshetra) ನಿವಾಸಿಗಳಾದ ಪೊರಸ್ ಮೆಹ್ಲಾ ಹಾಗೂ ಸಾಮ್ರಾಟ್ ಸಿಂಗ್ ಈ ಬಗ್ಗೆ ಮಾತನಾಡಿ, ತಮ್ಮ 7 ವರ್ಷ ಪ್ರಾಯದ ಹೆಚ್‌ ಎಫ್ ತಳಿಯ ಹಸು 72.390 ಕೆಜಿ ಹಾಲನ್ನು24 ಗಂಟೆಯಲ್ಲಿ ನೀಡಿತು.  ಇದು ದೇಶದಲ್ಲಿಯೇ ಇದುವರೆಗೆ ಹೆಚ್‌ ಎಫ್ ತಳಿಯ ಹಸು ನೀಡಿದ ಅತ್ಯಂತ ಹೆಚ್ಚು ಹಾಲು ಆಗಿದೆ.  ಇದಕ್ಕೂ ಮೊದಲು 2018ರಲ್ಲಿ ನಡೆದ ಪಿಡಿಎಫ್ಎ ಆಯೋಜಿಸಿದ ಸ್ಪರ್ಧೆಯಲ್ಲಿ ಹೆಚ್‌ಎಫ್ ಹಸುವೊಂದು 70.400 ಗ್ರಾಂ ಹಾಲು ನೀಡಿತ್ತು ಎಂದು ಅವರು ಮಾಹಿತಿ ನೀಡಿದರು. 

ಚೀನಾದ ವಿಜ್ಞಾನ, ದಿನಕ್ಕೆ 140 ಲೀಟರ್‌ ಹಾಲು ಕೊಡೋ 'Super Cow'!

ಇಂತಹ ಪ್ರತಿಷ್ಠಿತ ಸ್ಪರ್ಧೆಯಲ್ಲಿ ನಮ್ಮ ಹಸುವೊಂದು ದಾಖಲೆ ನಿರ್ಮಿಸಿದೆ ಎಂಬುದನ್ನು ಕೇಳಲು ಬಹಳ ಖುಷಿಯಾಗುತ್ತಿದೆ. ಇದೇ ಮೊದಲ ಬಾರಿಗೆ ನಮ್ಮ ಹಸು ಇಂತಹ ಸ್ಪರ್ಧೆಯೊಂದರಲ್ಲಿ ಭಾಗವಹಿಸಿದೆ. ಈ ಸ್ಪರ್ಧೆಯಲ್ಲಿ ವಿವಿಧ ಪ್ರದೇಶಗಳ ಒಟ್ಟು 30 ಹಸುಗಳು ಭಾಗವಹಿಸಿದ್ದವು. ಆದರೆ ನಮ್ಮ ಹಸು ಈ ಸ್ಪರ್ಧೆಯಲ್ಲಿ ವಿಜೇತವಾಗಿರುವುದರಿಂದ ನಮಗೆ ಟ್ರಾಕ್ಟರ್ ಬಹುಮಾನವಾಗಿ ಸಿಕ್ಕಿದೆ ಎಂದು ರೈತರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.  ಅಲ್ಲದೇ ರಾಜ್ಯದಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸುತ್ತಿರುವುದಕ್ಕೆ ಹರ್ಯಾಣದ (Haryana) ಡೈರಿ ಫಾರ್ಮರ್ಸ್ ಅಸೋಸಿಯೇಶನ್ ಅವರನ್ನು ಈ ರೈತರು ಶ್ಲಾಘಿಸಿದ್ದರು. 

ಪೊರಸ್ ಮೆಹ್ಲಾ (Poras Mehla) ಮಾತನಾಡಿ, ಗುರುಗ್ರಾಮದಲ್ಲಿ ಎಂಬಿಎ ಮಾಡಿದ ಬಳಿಕ ಎಂಎನ್‌ಸಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದ್ದೆ. ಆದರೆ ಅವರ ಕುಟುಂಬವೂ 40 ವರ್ಷದಿಂದ ನಡೆಸಿಕೊಂಡು ಬಂದಂತಹ ಹೈನುಗಾರಿಕೆಯನ್ನು ಮುನ್ನಡೆಸುವ ಸಲುವಾಗಿ ಆ ಕೆಲಸವನ್ನು ಬಿಟ್ಟರು.  ಹೈನುಗಾರಿಕೆ ನನ್ನ ಆಸಕ್ತಿಯಾಗಿದ್ದು, ಅದು ಕೇವಲ ವ್ಯವಹಾರವಲ್ಲ. ಅಲ್ಲದೇ ಯಾರು ಹಸುಗಳನ್ನು ಪ್ರೀತಿಸುತ್ತಾರೋ ಅವರು ಮಾತ್ರ ಅದರಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.  ಸಮ್ರಾಟ್ (samrat singh) ಸಿಂಗ್ ಮಾತನಾಡಿ, 10 ರಿಂದ 15 ಜನ ಹಸುಗಳನ್ನು ನೋಡಿಕೊಳ್ಳುವ ಸಲುವಾಗಿ ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಅವರು ಹಸುಗಳನ್ನು ಮುಂಜಾನೆ 4ಗಂಟೆಯಿಂದ ಸಂಜೆ 7 ಗಂಟೆಯವರೆಗೆ ನೋಡಿಕೊಳ್ಳುತ್ತಾರೆ. ಪ್ರಸ್ತುತ ನಾವು 200 ಹೆಚ್ ಎಫ್ ತಳಿಯ ಹಸುಗಳು ಹಾಗೂ ಜೆರ್ಸಿ ಹಸುಗಳಿವೆ ಎಂದು ಮಾಹಿತಿ ನೀಡಿದರು. 

ಎಮ್ಮೆ ನಿನಗೆ ಸಾಟಿಯಿಲ್ಲ : ದಾಖಲೆ ಬರೆದ ಆಂಧ್ರಪ್ರದೇಶದ ಎಮ್ಮೆ...!

ಹಾಗೆಯೇ ಜರ್ಸಿ ಹಸುಗಳ (Jersey cow) ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಮೊಗಾದ (Moga) ನೂರ್ಪುರ್‌ ಹಕಿಮಾ (Noorpur Hakima) ಪ್ರದೇಶದ ರೈತರ ಜರ್ಸಿ ಹಸು 44.505 ಲೀಟರ್ ಹಾಲು ನೀಡುವ ಮೂಲಕ ಪ್ರಥಮ ಬಹುಮಾನ ಗಳಿಸಿತು. ಇದರ ಮಾಲೀಕ ಓಂಕಾರ್ ಅರವಿಂದ್ (Onkar Arvind) ಮಾತನಾಡಿ, ಅವರ ಜೆರ್ಸಿ ಹಸು 44.505 ಲೀಟರ್ ಹಾಲು ನೀಡಿ ಪ್ರಥಮ ಬಹುಮಾನ ಗಳಿಸಿದೆ.  ಈ ಹಿಂದೆ ನಡೆದ ಸ್ಪರ್ಧೆಯಲ್ಲಿ ಅದು 47.5 ಲೀಟರ್ ಹಾಲು ನೀಡಿತ್ತು ಎಂದರು. ಪಶು ವೈದ್ಯರಾಗಬೇಕೆಂದು ಬಯಸಿದ್ದ ಓಂಕಾರ್ ಅವರ  ಹೆಚ್‌ ಎಫ್‌ ತಳಿಯ ಹಸುವೊಂದು  ಆ ಸ್ಪರ್ಧೆಯಲ್ಲಿ 68.400 ಲೀಟರ್ ಹಾಲು ನೀಡುವ ಮೂಲಕ ದ್ವಿತೀಯ ಬಹುಮಾನ ಗಳಿಸಿದೆ ಎಂದು ಮಾಹಿತಿ ನೀಡಿದರು.

click me!