
ಪಹಲ್ಗಾಮ್ ಭಯೋತ್ಪಾದಕ ದಾಳಿ (Pahalgam terror attack) ನಂತ್ರ ಭಾರತ, ಆಪರೇಷನ್ ಸಿಂಧೂರ್ (Operation Sindhur) ನಡೆಸಿ ಭಯೋತ್ಪಾದಕರ ಮಟ್ಟ ಹಾಕಿದೆ. ಈ ಸಮಯದಲ್ಲಿ 1971 ರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ ಸಹಮತ್ ಕಥೆ ನೆನಪಿಗೆ ಬರುತ್ತೆ. ಸಹಮತ್ ಕಥೆ ಶುರುವಾಗಿದ್ದು 1969 ರಲ್ಲಿ. ದೆಹಲಿ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿನಿ, ತಂದೆ ಆದೇಶದ ಮೇಲೆ ಮನೆಗೆ ಬಂದ್ರು. ತಂದೆ ಕೊನೆ ಆಸೆಯನ್ನು ಈಡೇರಿಸೋದು ಅವರ ಮುಖ್ಯ ಉದ್ದೇಶವಾಗಿತ್ತು. ಮಗಳು ದೇಶ ಸೇವೆ ಮಾಡ್ಬೇಕು ಅನ್ನೋದು ಅಪ್ಪನ ಅಂತಿಮ ಆಸೆಯಾಗಿತ್ತು. ಅದಕ್ಕೆ ವಿರೋಧ ವ್ಯಕ್ತಪಡಿಸದ ಮಗಳು, ದೇಶಕ್ಕಾಗಿ ಪಾಕಿಸ್ತಾನಿ ಸೇನಾ ಅಧಿಕಾರಿಯನ್ನೇ ಮದುವೆಯಾದ್ರು. ಭಾರತಕ್ಕಾಗಿ ತಮ್ಮ ಜೀವವನ್ನೂ ಪಣಕ್ಕಿಡಲು ಸಿದ್ಧವಿದ್ದ ಸಹಮತ್ ಏನೆಲ್ಲ ಮಾಡಿದ್ರು ಗೊತ್ತಾ?
ಸಹಮತ್ (Sahmat) ತಂದೆ ಯಾರು ? : ಸಹಮತ್ ತಂದೆ ಕೂಡ ಗೂಢಚಾರಿಯಾಗಿದ್ದರು. ಅವರ ಹೆಸ್ರು ಹರಿಂದರ್ ಸಿಂಗ್ ಸಿಕ್ಕಾ. ಭಾರತದ ಗುಪ್ತಚರ ಸಂಸ್ಥೆ R&AW ಗಾಗಿ ಕೆಲಸ ಮಾಡುತ್ತಿದ್ದರು ಹರಿಂದರ್ ಸಿಂಗ್. 1965ರ ಯುದ್ಧದ ಸಮಯದಲ್ಲಿ, ಪಾಕಿಸ್ತಾನದಿಂದ ಅನೇಕ ಪ್ರಮುಖ ಸಂದೇಶಗಳನ್ನು ಪಡೆದು ಭಾರತೀಯ ಸಂಸ್ಥೆಗೆ ರವಾನಿಸಿದ್ದರು ಹರಿಂದರ್. ಹರಿಂದರ್ ಗೆ ಕ್ಯಾನ್ಸರ್ ಇತ್ತು. ರೋಗ ಉಲ್ಬಣಿಸಿದ್ದ ಕಾರಣ ಅವರು ದೇಶ ಸೇವೆ ಮುಂದುವರಿಸಲು ಸಾಧ್ಯವಾಗ್ಲಿಲ್ಲ. ಮಗಳು ದೇಶಸೇವೆ ಮಾಡ್ಬೇಕು ಎಂದವರು ಬಯಸಿದ್ರು.
ಪಾಕಿಸ್ತಾನದಲ್ಲಿ ಮದುವೆ : ಕೇವಲ 20 ವರ್ಷ ವಯಸ್ಸಿನ ಸೆಹ್ಮತ್ ಪದವಿ ಓದುತ್ತಿದ್ರು. ಶಾಸ್ತ್ರೀಯ ನೃತ್ಯ ಮತ್ತು ಪಿಟೀಲು ವಾದನವನ್ನು ಕಲಿತಿದ್ದ ಅವರು ತಂದೆಯ ಸಲಹೆಯ ಮೇರೆಗೆ ಓದು ಬಿಟ್ಟು ಗೂಢಚಾರಿಯಾದ್ರು. ಒಂದು ಪಾಕಿಸ್ತಾನಕ್ಕೆ ತೆರಳಿದ್ದ ಅವರು, ಅಲ್ಲಿನ ಸೇನೆಯ ಬಗ್ಗೆ ತಿಳಿಯಲಿ ಪಾಕಿಸ್ತಾನಿ ಸೇನೆಯ ಉನ್ನತ ಅಧಿಕಾರಿಯನ್ನು ಮದುವೆಯಾಗ್ಬೇಕಾಯ್ತು. ಸಹಮತ್ ಪಾಕಿಸ್ತಾನಿ ಸೇನಾಧಿಕಾರಿ ಇಕ್ಬಾಲ್ ಸೈಯದ್ ಅವರ ಕೈ ಹಿಡಿದ್ರು. ಇಕ್ಬಾಲ್ ಸೈಯದ್ ತಂದೆ ಕೂಡ ಸೇನೆಯಲ್ಲಿ ಅಧಿಕಾರಿಯಾಗಿದ್ರು. ಸೇನಾ ಅಧಿಕಾರಿಗಳ ಮಾತನ್ನು ಸಹಮತ್ ಚಾಚು ತಪ್ಪದೆ ಪಾಲಿಸಬೇಕಾಗಿತ್ತು. ಮೋರ್ಸ್ ಕೋಡ್ ಮೂಲಕ ತುರ್ತು ಸಂದೇಶಗಳನ್ನು ಕಳುಹಿಸೋದು ಮತ್ತು ಸ್ವೀಕರಿಸೋದು ಹೇಗೆ ಎಂಬುದನ್ನು ಅವರಿಗೆ ಕಲಿಸಲಾಗಿತ್ತು.
ಸೇನೆಗೆ ಪ್ರವೇಶ : ಸಹಮತ್, ಅತ್ತೆ ಮಾವನ ವಿಶ್ವಾಸ ಮಾತ್ರವಲ್ಲ ಸೇನಾ ಕ್ವಾರ್ಟರ್ಸ್ನಲ್ಲಿ ವಾಸಿಸುವ ಇತರ ಕುಟುಂಬಗಳ ವಿಶ್ವಾಸವನ್ನೂ ಗಳಿಸಿದ್ರು. ಡಾನ್ಸ್ ಕಲಿತಿದ್ದ ಅವರು ಸೇನಾ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ರು. ಕ್ರಮೇಣ ಸಹಮತ್ ಪಾಕಿಸ್ತಾನಿ ರಕ್ಷಣಾ ವಲಯ ಮತ್ತು ಗುಪ್ತಚರ ವಲಯಗಳಿಗೆ ಪ್ರವೇಶ ಪಡೆದ ಸಹಮತ್ ಕೆಲ್ಸ ಎಲ್ಲರ ಮೆಚ್ಚುಗೆ ಗಳಿಸಿತ್ತು. ಇವ್ರ ಕಾರಣಕ್ಕೆ ಸಹಮತ್ ಮಾವನಿಗೆ ಬಡ್ತಿ ಕೂಡ ಸಿಕ್ಕಿತ್ತು.
1971ರ ಯುದ್ಧ : 1971 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ಬಹುತೇಕ ಖಚಿತವಾಗಿತ್ತು. ಆ ಸಮಯದಲ್ಲಿ ಭಾರತ ಸ್ವದೇಶಿ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಹೊಂದಿತ್ತು. ಇದ್ರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಇತ್ತು. ಬಂಗಾಳಕೊಲ್ಲಿಯಲ್ಲಿ ನಿಯೋಜಿಸಲಾದ ಭಾರತೀಯ ಯುದ್ಧನೌಕೆಗಳನ್ನು ಗುರಿಯಾಗಿಸಲು ಪಾಕ್ ಯೋಚನೆ ರೂಪಿಸಿತ್ತು. ಭಾರತೀಯ ಯುದ್ಧನೌಕೆಯನ್ನು ಮುಳುಗಿಸುವ ಕಾರ್ಯಾಚರಣೆಯನ್ನು ಪಾಕಿಸ್ತಾನ ತನ್ನ ಕ್ಷಿಪಣಿ-ಸಜ್ಜಿತ ಜಲಾಂತರ್ಗಾಮಿ ಪಿಎನ್ಎಸ್ ಘಾಜಿಗೆ ವಹಿಸಿತು. ಸಹಮತ್ಗೆ ಇದರ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅವರು ಕಾರ್ಯಪ್ರವೃತರಾದ್ರು. ಪಿಎನ್ಎಸ್ ಘಾಜಿಯ ಸ್ಥಾನೀಕರಣದ ಬಗ್ಗೆ ಭಾರತಕ್ಕೆ ಮಾಹಿತಿ ರವಾನೆ ಮಾಡಿದ್ರು. ಸಹಮತ್ ಮಾಹಿತಿ ನಂತ್ರ ಭಾರತೀಯ ನೌಕಾಪಡೆ, ವಿಶಾಖಪಟ್ಟಣ ಬಂದರಿನ ಬಳಿ ಪಾಕಿಸ್ತಾನಿ ಜಲಾಂತರ್ಗಾಮಿ ನೌಕೆಯನ್ನು ಮುಳುಗಿಸ್ತು.
ತಾಯ್ನಾಡಿಗೆ ವಾಪಸ್ : ಸಹಮತ್ ಮುಂದಿನ ಪಯಣ ಸುಲಭವಾಗಿರಲಿಲ್ಲ. ಸಹಮತ್ ಕುಟುಂಬದ ಆಪ್ತ ಸಹಾಯಕ ಅಬ್ದುಲ್, ಸಹಮತ್ ಮೇಲೆ ಅನುಮಾನ ವ್ಯಕ್ತಪಡಿಸಿದ. ಸಹಮತ್ ಆತನ ಹತ್ಯೆ ಮಾಡಿದ್ದರು. ನಂತ್ರ ಪತಿ ಇಕ್ಬಾಲ್ ಗೆ ಸತ್ಯ ಗೊತ್ತಾಯ್ತು. ಆತನನ್ನು ಸಹಮತ್ ಟೀಂ ಬಿಡಲಿಲ್ಲ. ಆ ಸಮಯದಲ್ಲಿ ಗರ್ಭಿಣಿಯಾಗಿದ್ದ ಸಹಮತ್ ಭಾರತಕ್ಕೆ ವಾಪಸ್ ಬಂದ್ರು. ಪಂಜಾಬ್ನ ಮಲೇರ್ಕೋಟ್ಲಾದಲ್ಲಿ ಮುಂದಿನ ಜೀವನ ಕಳೆಯಲು ನಿರ್ಧರಿಸಿದ್ದರು, ದೆಹಲಿ ವಿವಿಯಲ್ಲಿ ಸಹಮತ್ ಪ್ರೀತಿ ಮಾಡ್ತಿದ್ದ ವ್ಯಕ್ತಿ, ಈಗ್ಲೂ ಅವರಿಗಾಗಿ ಕಾದಿದ್ದರು. ಆದ್ರೆ ಸಹಮತ್ ಕೈಗೆ ರಕ್ತದ ಕಲೆ ಇದ್ದ ಕಾರಣ ಮದುವೆಗೆ ಒಪ್ಪಿರಲಿಲ್ಲ. ಸಹಮತ್ ಮಗನನ್ನು ಬೆಳೆಸುವ ಜವಾಬ್ದಾರಿಯನ್ನು ಅವರು ಹೊತ್ತುಕೊಂಡ್ರು. ಸಹಮತ್ 2018 ರಲ್ಲಿ ನಿಧನರಾದ್ರು. ಸಹಮತ್ ಮಗ ಮಿಲಿಟರಿ ಅಧಿಕಾರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ