ಹಿರಿಯರೇ ಚಿಂತೆ ಬಿಡಿ..ಬೇಗ ಹೊರಡಿ.. ಕೊರೋನಾ ಲಸಿಕೆ ಬಹಳ ಸಲೀಸು!

By Suvarna News  |  First Published Mar 5, 2021, 10:47 PM IST

ಹಿರಿಯರೇ ಚಿಂತೆ ಬಿಡಿ..ಬೇಗ ಹೊರಡಿ.. ಕೊರೋನಾ ಲಸಿಕೆ ಬಹಳ ಸಲೀಸು/ ಲಸಿಕೆ ಹಾಕಿಸಿಕೊಳ್ಳುವ ನೋಂದಣಿ ಮತ್ತಷ್ಟು ಸುಲಭ/ ಒಂದು ವಾಟ್ಸಪ್ ಮೆಸೇಜ್ ಒಂದು ಕರೆ/ ನಿಮ್ಮ ಮನೆ ಬಾಗಿಲಿಗೆ ಬಂದು ಕರೆದುಕೊಂಡು ಹೋಗುತ್ತಾರೆ


ಬೆಂಗಳೂರು(ಮಾ.  05) ಚಿಂತೆ ಬಿಡಿ...ಮನೆಯಿಂದಲೇ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಬುಕ್ ಮಾಡಿಕೊಂಡು ಬನ್ನಿ.. ಎಲ್ಲವೂ ಸಲೀಸು.. ನಾವು ಹೇಳುತ್ತಿರುವುದು ಹಿರಿಯ ನಾಗರಿಕರ ಬಗ್ಗೆ.. ಹಿರಿಯ ನಾಗರಿಕರಿಗೊಂದು  ಒಳ್ಳೆಯ ಸುದ್ದಿ ಇಲ್ಲಿದೆ.

ಹಿರಿಯ ನಾಗರಿಕರಿಗೆ ಕೊರೋನಾ ಲಸಿಕೆ ನೀಡುವ ಅಭಿಯಾನ ಶುರುವಾಗಿದೆ. ಸರ್ಕಾರದ ಜತೆ ಒಂದೊಂದೆ ಕೈಗಳು ಜತೆಯಾಗುತ್ತಿವೆ. ಇದೊಂದು ಮಾದರಿ ಬೆಳವಣಿಗೆ.

Tap to resize

Latest Videos

undefined

ಹೆಲ್ಪಿ ಮತ್ತು ಸಾರದಾ ಫೌಂಡೇಶನ್ ಜತೆಯಾಗಿ ಕೆಲಸ ಮಾಡಲು ಮುಂದಾಗಿವೆ.   ಹಿರಿಯರಿಗೆ ಉಚಿತವಾಗಿ ಕೊರೋನಾ ಲಸಿಕೆ ಕೊಡುವ ತೀರ್ಮಾನ ಮಾಡಿದೆ. ಕೋವಿಡ್ ವಾಕ್ಸಿನೇಶನ್ ಡ್ರೈವ್  ಆರಂಭಿಸಿದೆ.

ಕೊರೋನಾ ಲಸಿಕೆ ಪಡೆದುಕೊಂಡ ಪ್ರಧಾನಿ ಮೋದಿ

ಲಸಿಕೆ ಪಡೆದುಕೊಳ್ಳುವುದು ಹೇಗೆ? 
*ಕಾಲ್ ಮಾಡಿ  ಅಥವಾ ವಾಟ್ಸಪ್ ಮಾಡಿ ನೋಂದಾಯಿಸಿಕೊಳ್ಳಿ
* ಸರ್ಕಾರದಿಂದ ಮಾನ್ಯತೆ ಪಡೆದ ಐಡಿ ಇಟ್ಟುಕೊಳ್ಳಿ
* ಸೋಮವಾರದಿಂದ ಶನಿವಾರದವರೆಗೆ ಲಸಿಕೆ ನೀಡಿಕೆ.. ಬೆಳಗ್ಗೆ 9 ರಿಂದ ಸಂಜೆ 4 ಗಂಟೆ
* ಲಸಿಕೆ ಶುಲ್ಕ 250  ರೂ.
* ಬೆಂಗಳೂರು, ಚೆನ್ನೈ, ಹೈದರಾಬಾದ್ ನಲ್ಲಿ ಲಭ್ಯ 
* ಸಂಪರ್ಕ ಸಂಖ್ಯೆ:  8861608484

ಕೊರೋನಾ ಕಂಡುಹಿಡಿಯುವ ಮೂರು ವಿಧಾನಗಳು.. ಅಗತ್ಯವಾಗಿ ತಿಳಿದುಕೊಳ್ಳಿ

ಫೌಂಡೇಶನ್ ಬಗ್ಗೆ;  ಹೆಲ್ಪಿ ಮತ್ತು ಸಾರದಾ ಪೌಂಡೇಶನ್ ಹಿರಿಯ ನಾಗರಿಕರ ನೆರವಿಗೆ ಸದಾ ಮುಂದೆ.  ಹಿರಿಯ ನಾಗರಿಕರನ್ನು ಆರೈಕೆ ಮಾಡಿಕೊಳ್ಳುವುದರಲ್ಲಿ ನಿಪುಣರಾಗಿರುವವರು ಇಲ್ಲಿ ನೆರವಿಗೆ ನಿಲ್ಲುತ್ತಾರೆ. ಹಿರಿಯ ನಾಗರಿಕರಿಗೆ ಗಂಟೆಗಳ ಲೆಕ್ಕದಲ್ಲಿ, ದಿನದ ಲೆಕ್ಕದಲ್ಲಿ, ವಾರದ  ಲೆಕ್ಕದಲ್ಲಿ ನೆರವು ಸಿಗಲಿದೆ.  ಆನ್ ಲೈನ್ ಮೂಲಕ  ಹಿರಿಯ ನಾಗರಿಕರಿಗೆ ದೈನಂದಿನ ಕೆಲಸ ಸೇರಿದಂತೆ ಎಲ್ಲ ನೆರವು ನೀಡಲು ಸಂಸ್ಥೆ ಸದಾ ಸಿದ್ಧವಾಗಿರುತ್ತದೆ.   ಹೆಚ್ಚಿನ ಮಾಹಿತಿಯನ್ನು ನೀವು ಇಲ್ಲಿ ಪಡೆದುಕೊಳ್ಳಬಹುದು. 

ದೇಶದಲ್ಲಿ ಕೊರೋನಾ ಲಸಿಕೆ ಅಭಿಯಾನ ಆರಂಭವಾಗಿ ಹಲವು ದಿನ ಕಳೆದಿವೆ. ಮೊದಲು ಕೊರೋನಾ ವಾರಿಯರ್ಸ್ ಗೆ ನೀಡಲಾಗಿದ್ದು ಈಗ ಎರಡನೇ ಹಂತದಲ್ಲಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದೆ.  ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ  ಅನೇಕರು ಲಸಿಕೆ ಹಾಕಿಸಿಕೊಂಡಿದ್ದಾರೆ .

 

click me!