
ಗುವಾಹಟಿ/ಗ್ಯಾಂಗ್ಟಕ್: ಇತ್ತ ಪೂರ್ವ ಭಾರತದ ಗುಜರಾತ್ನಲ್ಲಿ ಚಂಡಮಾರುತ ಅಬ್ಬರಿಸಿದರೆ ಅತ್ತ ಈಶಾನ್ಯ ರಾಜ್ಯಗಳು ಕೂಡ ಪ್ರವಾಹ ಸಂಕಷ್ಟಕ್ಕೆ ಒಳಗಾಗಿವೆ. ಅಸ್ಸಾಂನ 11 ಜಿಲ್ಲೆಗಳಲ್ಲಿ ಭಾರಿ ಮಳೆ ಕಾರಣ ಪ್ರವಾಹ ಸೃಷ್ಟಿಯಾಗಿದ್ದು, 34 ಸಾವಿರ ಜನರು ಬಾಧಿತರಾಗಿದ್ದಾರೆ. ಇನ್ನೊಂದೆಡೆ ಸಿಕ್ಕಿಂನಲ್ಲಿ ಕೂಡ ಭಾರಿ ಮಳೆ ಬಿದ್ದು, ಅಲ್ಲಲ್ಲಿ ಭೂಕುಸಿತ ಸಂಭವಿಸಿವೆ. ಇದರಿಂದಾಗಿ 3500 ಪ್ರವಾಸಿಗರು ಉತ್ತರ ಸಿಕ್ಕಿಂ ಜಿಲ್ಲೆಯ ಬೆಟ್ಟಗುಡ್ಡಗಳಲ್ಲಿ ಸಿಲುಕಿದ್ದರು. ಭಾರತೀಯ ಸೇನೆ (Indian Army) ಹಾಗೂ ವಿವಿಧ ರಕ್ಷಣಾ ಪಡೆಗಳು ಅಲ್ಲಿಗೆ ತೆರಳಿ ಪ್ರವಾಸಿಗರನ್ನು ರಕ್ಷಣೆ ಮಾಡಿವೆ. 19 ಬಸ್ಸು ಹಾಗೂ 70 ಸಣ್ಣ ವಾಹನಗಳನ್ನು ಇವರ ರಕ್ಷಣೆಗೆ ಸಿಕ್ಕಿಂ ಸರ್ಕಾರ (Sikkim Government) ನಿಯೋಜಿಸಿತ್ತು.
ಅಸ್ಸಾಂ ಹೆಚ್ಚು ಬಾಧಿತ:
ಭಾರಿ ಮಳೆಯ ಕಾರಣ ಅಸ್ಸಾಂ (Assam) ಹೆಚು ಬಾಧಿತವಾಗಿದೆ. ಬ್ರಹ್ಮಪುತ್ರ (River Brahma Putra) ಸೇರಿ ಅನೇಕ ನದಿಗಳಲ್ಲಿ ನೀರಿನ ಹರಿವು ಬಾರಿ ಹೆಚ್ಚಿದೆ. ಅನೇಕ ಕಡೆ ಅಪಾಯದ ಮಟ್ಟಮೀರಿ ನದಿ ಹರಿಯುತ್ತಿದೆ. ಕೆಲವು ಕಡೆ ಬಾಂದಾರಗಳು ಒಡೆದಿವೆ. 34 ಸಾವಿರ ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ. ಲಖೀಂಪುರ ಜಿಲ್ಲೆಯಲ್ಲಿ ಹೆಚ್ಚು ಜನ (23,516) ಸಂತ್ರಸ್ತರಾಗಿದ್ದು, ದಿಬ್ರುಗಢ (3857), ಡರಾಂಗ್ (2231), ಬಿಶ್ವನಾಥ್ (2231) ಹಾಗೂ ಧೇಮಾಜಿ (1085 ಸಂತ್ರಸ್ತರು) ನಂತರದ ಸ್ಥಾನದಲ್ಲಿವೆ. 77 ಗ್ರಾಮಗಳು ಪ್ರವಾಹಪೀಡಿತವಾಗಿದ್ದು, 209 ಹೆಕ್ಟೇರ್ ಭೂಮಿಯಲ್ಲಿನ ಬೆಳೆ ಹಾಳಾಗಿದೆ.
ಮಳೆ ಪ್ರವಾಹಕ್ಕೆ ಮನೆ ಕಳೆದುಕೊಂಡವರನ್ನು ನಡುನೀರಲ್ಲಿ ಕೈಬಿಟ್ಟ ಸರ್ಕಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ