ಭಾರೀ ಮಳೆಯಿಂದಾಗಿ ಪಾಕಿಸ್ತಾನದಲ್ಲಿ 77 ಮಂದಿ ಸಾವು, ಇದು ರಾಷ್ಟ್ರೀಯ ದುರಂತ ಎಂದ ಸಚಿವೆ!

Published : Jul 07, 2022, 10:02 AM IST
ಭಾರೀ ಮಳೆಯಿಂದಾಗಿ ಪಾಕಿಸ್ತಾನದಲ್ಲಿ 77 ಮಂದಿ ಸಾವು, ಇದು ರಾಷ್ಟ್ರೀಯ ದುರಂತ ಎಂದ ಸಚಿವೆ!

ಸಾರಾಂಶ

* ಪಾಕಿಸ್ತಾನದಲ್ಲಿ ಸುರಿಯುತ್ತಿದೆ ಭಾರೀ ಮಳೆ * ಮಳೆಯ ಅಬ್ಬರಕ್ಕೆ 77 ಮಂದಿ ಸಾವು  * ಇದು ರಾಷ್ಟ್ರೀಯ ದುರಂತ ಎಂದ ಸಚಿವೆ

ಇಸ್ಲಮಾಬಾದ್(ಜು.07): ಪಾಕಿಸ್ತಾನದಲ್ಲಿ ಸುರಿದ ಭಾರೀ ಮುಂಗಾರು ಮಳೆಗೆ 77 ಜನರು ಸಾವನ್ನಪ್ಪಿದ್ದಾರೆ. ಬಲೂಚಿಸ್ತಾನ್ ಪ್ರಾಂತ್ಯವೊಂದರಲ್ಲೇ 39 ಮಂದಿ ಮಳೆಯಿಂದಾಗಿ ಸಾವನ್ನಪ್ಪಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇಶದ ಹವಾಮಾನ ಪರಿವರ್ತನೆ ಸಚಿವೆ ಶೆರ್ರಿ ರೆಹಮಾನ್ ಮಳೆಯಿಂದಾಗಿ ಸಂಭವಿಸಿದ ಸಾವುಗಳು "ರಾಷ್ಟ್ರೀಯ ದುರಂತ" ಎಂದು ಬಣ್ಣಿಸಿದರು. ಪಾಕಿಸ್ತಾನದಲ್ಲಿ ಸುರಿದ ಭಾರೀ ಮಳೆಗೆ ನೂರಾರು ಮನೆಗಳು ನಾಶವಾಗಿವೆ. ಭಾರೀ ಮಳೆಯಿಂದಾಗಿ ದೂರದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಸಚಿವ ರೆಹಮಾನ್ ಹೇಳಿದ್ದಾರೆ.

ಸುದ್ದಿ ಸಂಸ್ಥೆ ANI ಯ ಸುದ್ದಿ ಪ್ರಕಾರ, ಭಾರೀ ಮಳೆಯಿಂದ ಸಾವನ್ನಪ್ಪಿದವರಲ್ಲಿ ಮಕ್ಕಳು, ಪುರುಷರು ಮತ್ತು ಮಹಿಳೆಯರು ಸೇರಿದ್ದಾರೆ ಎಂದು ಸಚಿವೆ ಶೆರ್ರಿ ರೆಹಮಾನ್ ಹೇಳಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ಮತ್ತು ಪ್ರಾಂತೀಯ ವಿಪತ್ತು ನಿರ್ವಹಣಾ ಅಧಿಕಾರಿಗಳ ನೆರವಿನೊಂದಿಗೆ ಸರ್ಕಾರವು ಮಳೆಯಿಂದಾಗಿ ಸಂಕಷ್ಟದಲ್ಲಿರುವ ಸ್ಥಳೀಯ ಜನರನ್ನು ತಲುಪಲು ಪ್ರಯತ್ನಿಸುತ್ತಿದೆ. ನೀರಿನ ರಭಸ ಹೆಚ್ಚಿದ್ದು, ಜನರು ಎಚ್ಚರಿಕೆ ವಹಿಸಬೇಕು ಎಂದೂ ಸೂಚಿಸಲಾಗಿದೆ. ಏಕೆಂದರೆ ಮುಂಗಾರು ಮಳೆಯ ಸ್ವರೂಪ ಬದಲಾಗುತ್ತಿದೆ. ಪ್ರಸ್ತುತ, ಇಡೀ ಪಾಕಿಸ್ತಾನದಲ್ಲಿ ಸರಾಸರಿ ಮಳೆಗಿಂತ 87 ಪ್ರತಿಶತ ಹೆಚ್ಚು ಮಳೆಯಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ರಾಷ್ಟ್ರೀಯ ಮಾನ್ಸೂನ್ ಕುರಿತು ಆಕಸ್ಮಿಕ ಯೋಜನೆಯನ್ನು ಸಿದ್ಧಪಡಿಸಿದೆ ಎಂದು ಸಚಿವ ಶೆರ್ರಿ ರೆಹಮಾನ್ ಹೇಳಿದ್ದಾರೆ. ಹೆಚ್ಚಿನ ಪ್ರಾಣಹಾನಿ ಮತ್ತು ಆಸ್ತಿ-ಪಾಸ್ತಿ ನಷ್ಟವನ್ನು ತಡೆಯಲು ಸಾರ್ವಜನಿಕರು ಜಾಗೃತರಾಗಬೇಕು ಎಂದು ಮನವಿ ಮಾಡಿದರು. ಈ ಸಾವು-ನೋವುಗಳನ್ನು ತಡೆಗಟ್ಟಲು ನಮಗೆ ಸಮಗ್ರ ಯೋಜನೆ ಅಗತ್ಯವಿದೆ. ಏಕೆಂದರೆ ಹವಾಮಾನ ಬದಲಾವಣೆಯಿಂದ ಇಷ್ಟೆಲ್ಲ ವಿನಾಶ ಸಂಭವಿಸುತ್ತಿದೆ ಎಂದು ಸಚಿವ ಶೆರ್ರಿ ರೆಹಮಾನ್ ಹೇಳಿದರು

ಪಾಕಿಸ್ತಾನದ ಹವಾಮಾನ ಇಲಾಖೆ (ಪಿಎಂಡಿ) ಪ್ರಕಾರ ಮಳೆ ಜುಲೈ 8 ರವರೆಗೆ ಮುಂದುವರಿಯುತ್ತದೆ. ಉತ್ತರ ಅರಬ್ಬಿ ಸಮುದ್ರದಿಂದ ತೇವಾಂಶ ಪಡೆಯುತ್ತಿರುವ ಸಿಂಧ್ ನ ದಕ್ಷಿಣ ಭಾಗದಲ್ಲಿ ಕಡಿಮೆ ವಾಯುಭಾರ ಕುಸಿತ ಉಂಟಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಏತನ್ಮಧ್ಯೆ, ಅನೇಕ ಜನರ ಸಾವಿನ ನಂತರ, ಬಲೂಚಿಸ್ತಾನ್ ಸರ್ಕಾರವು ಕ್ವೆಟ್ಟಾವನ್ನು ವಿಪತ್ತು ಪೀಡಿತ ಪ್ರದೇಶವೆಂದು ಘೋಷಿಸಿತು ಮತ್ತು ಪ್ರಾಂತೀಯ ರಾಜಧಾನಿಯಲ್ಲಿ ತುರ್ತು ಪರಿಸ್ಥಿತಿಯನ್ನು ವಿಧಿಸಿತು. ಧಾರಾಕಾರ ಮಳೆಯಿಂದಾಗಿ ಬಲೂಚಿಸ್ತಾನ್ ಪ್ರಾಂತ್ಯದ ನದಿಗಳು ಮತ್ತು ಕಾಲುವೆಗಳು ಉಕ್ಕಿ ಹರಿಯುತ್ತಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌
ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ