
ಚೆನ್ನೈ(ಏ.07) ಪೋಷಕರನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದುಕೊಂಡು ಹೋದ ಕ್ಷಣ, ಪೈಲೆಟ್ ಪೋಷಕರೇ ಅದೇ ವಿಮಾನದಲ್ಲಿ ಪ್ರಯಾಣ ಮಾಡಿದ ಕ್ಷಣ ಸೇರಿದಂತೆ ಹಲವು ಭಾವುಕ ಕ್ಷಣಗಳಿಗೆ ವಿಮಾನ ಪ್ರಯಾಣ ಸಾಕ್ಷಿಯಾಗಿದೆ. ಇದೀಗ ಚೆನ್ನೈನಿಂದ ಕೊಯಂಬತ್ತೂರು ವಿಮಾನದ ಪ್ರಯಾಣಕ್ಕೂ ಮುನ್ನ ವಿಶೇಷ ಕ್ಷಣವೊಂದು ದಾಖಲಾಗಿದೆ. ವಿಮಾನ ಟೇಕ್ ಆಫ್ ಆಗುವ ಮೊದಲು ಕ್ಯಾಪ್ಟನ್ ಪ್ರದೀಪ್ ಕೃಷ್ಣನ್ ಮಾಡಿದ ಅನೌನ್ಸ್‌ಮೆಂಟ್ ಅದೇ ವಿಮಾನದಲ್ಲಿದ್ದ ಪೈಲೆಟ್ ತಾಯಿಯ ಕಣ್ಣಲ್ಲಿ ಕಣ್ಣೀರು ಜಿನುಗಿಸಿತ್ತು. ಅದೇ ವಿಮಾನದಲ್ಲಿದ್ದ ಪೈಲೆಟ್ ಅಜ್ಜ ಅಜ್ಜಿ ಭಾವುಕರಾಗಿದ್ದರು. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಚೆನ್ನೈನಿಂದ ಕೊಯಂಬತ್ತೂರು ವಿಮಾನದಲ್ಲಿ ಎಲ್ಲರೂ ಕುಳಿತಿದ್ದರು. ವಿಮಾನ ಟೇಕ್ ಆಫ್ ಆಗುವ ಮೊದಲು ಕ್ಯಾಪ್ಟನ್ ಪ್ರದೀಪ್ ಕೃಷ್ಣನ್ ಅನೌನ್ಸ್ ಮಾಡಿದರು. ನಾನು ಈ ಘೋಷಣೆ ಮಾಡಲು ಅತೀವ ಸಂತಸ ಪಡುತ್ತಿದ್ದೇನೆ. ಇಂದು ನನ್ನ ಜೊತೆ ನನ್ನ ಕುಟುಂಬ ಇದೇ ವಿಮಾನದಲ್ಲಿ ಪ್ರಯಾಣ ಮಾಡುತ್ತಿದೆ. ನನ್ನ ತಾಯಿ, ಅಜ್ಜ ಹಾಗೂ ಅಜ್ಜಿ ಇದೇ ವಿಮಾನದ 29ನೇ ಸಾಲಿನಲ್ಲಿ ಕುಳಿತಿದ್ದಾರೆ. ನನ್ನ ಅಜ್ಜ ಅಜ್ಜಿ ಇದೇ ಮೊದಲ ಬಾರಿಗೆ ನನ್ನ ಜೊತೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.
ಲೇಡಿ ಪೈಲಟ್‌ಗೆ ನಮಸ್ಕರಿಸಿ ಅಯೋಧ್ಯೆಗೆ ಕರೆದೊಯ್ಯುವ ಲಕ್ಷ್ಮಿ ಎಂದ ಅಜ್ಜಿ, ವಿಡಿಯೋ ವೈರಲ್!
ನಾನು ಬಾಲ್ಯದಲ್ಲಿ ಅಜ್ಜನ ಟಿವಿಎಸ್ ಮೊಪೆಡ್ ಹಿಂಭಾಗದಲ್ಲಿ ಕುಳಿತು ಪ್ರಯಾಣ ಮಾಡಿದ್ದೇನೆ. ಅಜ್ಜನ ಮೊಪೆಡ್ ಸ್ಕೂಟರ್ ಮೂಲಕ ತಿರುಗಾಡುವ ಆನಂದ್ ಅಷ್ಟಿಷ್ಟಲ್ಲ. ಇದೀಗ ನನ್ನ ಸರದಿ. ನಾನು ಅಜ್ಜನ ಕಾಕ್‌ಪಿಟ್‌ನಲ್ಲಿ ಕೂರಿಸಿ ಪ್ರಯಾಣ ಮಾಡಲು ಬಯಸುತ್ತೇನೆ ಎಂದು ತಮಾಷೆ ಮಾಡಿದ್ದಾರೆ. ಪುತ್ರನ ಮಾತುಗಳಿಂದ ತಾಯಿ ಭಾವುಕಳಾಗಿದ್ದಾಳೆ. ಇತ್ತ ಅಜ್ಜ ಅಜ್ಜಿ ಕೂಡ ಭಾವುಕಳಾಗಿದ್ದಾಳೆ. ತಾತ ಎದ್ದು ನಿಂತು ಎಲ್ಲರಿಗೂ ನಮಸ್ಕಾರ ಮಾಡಿದ್ದಾರೆ. ವಿಮಾನದಲ್ಲಿದ್ದ ಸಹ ಪ್ರಯಾಣಿಕರು ಚಪ್ಪಾಳೆ ಮೂಲಕ ಗೌರವಿಸಿದ್ದಾರೆ.
ಪೈಲೆಟ್ ಪ್ರದೀಪ್ ಕೃಷ್ಣನ್ ಈ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗೆ ಭಾರಿ ಲೈಕ್ಸ್ ಹಾಗೂ ಕಮೆಂಟ್ ವ್ಯಕ್ತವಾಗಿದೆ. ಹಲವರು ತಮ್ಮ ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಪೋಷಕರು, ಅಜ್ಜ ಅಜ್ಜಿ ನಿಮ್ಮ ಬಗ್ಗೆ ಹೆಮ್ಮೆಪಡುತ್ತಿದ್ದಾರೆ. ಅವರ ಆನಂದ ಭಾಷ್ಪ ಎಲ್ಲವನ್ನು ಹೇಳುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.
Viral Post: ಮಗಳಿಗೆ ಪೈಲಟ್ ಆಗೋ ಹೆಮ್ಮೆ ಈ ತಂದೆಯದು; ವಿಮಾನದಲ್ಲಿ ಏನಂದ್ರು ನೋಡಿ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ