ಯುವ ಜನರಿಗೆ ಮಾತ್ರ ಸಿಗಲ್ಲ 2022ರ ವರೆಗೆ ಕೊರೋನಾ ಲಸಿಕೆ

By Kannadaprabha NewsFirst Published Oct 16, 2020, 9:25 AM IST
Highlights

ದೇಶದಲ್ಲಿ ಯುವಜನತೆಗೆ ಮಾತ್ರ 2022ರವರೆಗೆ ಕೊರೋನಾ ವೈರಸ್ ಲಸಿಕೆ ಸಿಗುವುದಿಲ್ಲ. 

ನವದೆಹಲಿ (ಅ.16): ಕೋವಿಡ್‌ ಲಸಿಕೆ ಅಭಿವೃದ್ಧಿ ಸಮಯದ ಬಗ್ಗೆ ಅನಿಶ್ಚಿತತೆ ಮುಂದುವರಿದಿರುವ ಬೆನ್ನಲ್ಲೇ, ಒಂದು ವೇಳೆ ಲಸಿಕೆ ಸಿಕ್ಕರೂ ಆರೋಗ್ಯವಂತರ ಕೈಗೆ ಅದು ಎಟುಕಬೇಕಾದರೆ 2022ರ ವರೆಗೂ ಕಾಯಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್‌ ಹೇಳಿದ್ದಾರೆ. 

ಆನ್‌ಲೈನ್‌ ಮೂಲಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಆರೋಗ್ಯವಂತ ಯುವಕರು ಲಸಿಕೆ ಹಾಕಿಸಿಕೊಳ್ಳಬೇಕಿದ್ದರೆ 2022ರ ವರೆಗೆ ಕಾಯಬೇಕಾಗಿ ಬರಬಹುದು ಎಂದಿದ್ದಾರೆ. ಡಬ್ಲ್ಯೂಎಚ್‌ಒ ಪ್ರಕಾರ 2021ರಲ್ಲಿ ಲಸಿಕೆ ಲಭ್ಯವಾದರೂ, ನಿಗದಿತ ಸಂಖ್ಯೆಯಲ್ಲಿ ಮಾತ್ರ ಲಭ್ಯವಾಗಲಿದೆ. 

ಬೆಂಗಳೂರಿನಿಂದ ಕೊರೋನಾ ರೋಗಿಗಳು ನಾಪತ್ತೆ

ಮೊದಲು ಉತ್ಪಾದನೆಯಾಗುವ ಲಸಿಕೆ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು ಸೇರಿ ಕೋವಿಡ್‌ ವಾರಿಯರ್ಸ್‌ಗಳಿಗೆ ನೀಡಲಾಗುವುದರಿಂದ ಆರೋಗ್ಯವಂತರಿಗೆ ಲಸಿಕೆ ಸಿಗಲು 2022ರ ವರೆಗೂ ಕಾಯಬೇಕು ಎಂದು ಹೇಳಿದ್ದಾರೆ. ಜನವರಿ ಅಥವಾ ಏಪ್ರಿಲ್‌ ಆದಿಯಲ್ಲಿ ತಮಗೆ ಲಸಿಕೆ ಸಿಗಬಹುದು ಎಂದು ಜನ ನಂಬಿದ್ದಾರೆ. ಆದರೆ ಅದು ಸಾಧ್ಯವಾಗದು ಎಂದಿದ್ದಾರೆ.

click me!